ಇತಿಹಾಸ ತಿಳಿಸುವ ದಿನದರ್ಶಿಕೆ

7

ಇತಿಹಾಸ ತಿಳಿಸುವ ದಿನದರ್ಶಿಕೆ

Published:
Updated:
ಇತಿಹಾಸ ತಿಳಿಸುವ ದಿನದರ್ಶಿಕೆ

ಕ್ಯಾಲೆಂಡರ್‌ನಲ್ಲಿ ಕೇವಲ ದಿನಾಂಕ ನೋಡುವುದು ಮಾತ್ರವಲ್ಲ. ಅದರಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿಯ, ನಮ್ಮ ದೇಶವನ್ನು ಆಳಿದ ರಾಜವಂಶಗಳ ಪರಿಚಯವಾಗಬೇಕು ಎಂಬ ಉದ್ದೇಶದಿಂದ ನರಸಿಂಹ ಶೆಟ್ಟಿ ನೇತೃತ್ವದ ನಾಗನಾಥಪುರ ಮೈಕೊ ಕನ್ನಡ ಬಳಗ ವಿಭಿನ್ನ ರೀತಿಯ ಕ್ಯಾಲೆಂಡರ್ ತಯಾರಿಸಿದ್ದಾರೆ.ಈ ಕ್ಯಾಲೆಂಡರ್‌ನಲ್ಲಿ ಒಂದು ರಾಜವಂಶ, ಅವರ ರಾಜಲಾಂಛನ, ರಾಜಧಾನಿ, ಪ್ರಸಿದ್ಧ ದೊರೆ, ಪ್ರಮುಖ ವಾಸ್ತುಗಳು, ಸಾಹಿತ್ಯ ಕೃತಿ, ಯಾವ ಲಿಪಿ ಚಾಲ್ತಿಯಲ್ಲಿದೆ, ಚಲಾವಣೆಯಲ್ಲಿರುವ ನಾಣ್ಯ ಯಾವುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಇದೆ.ಇತಿಹಾಸದ ಬಗ್ಗೆ ಆಸಕ್ತಿ ಇರುವವರಿಗೆ ಈ ಕ್ಯಾಲೆಂಡರ್ ತುಂಬಾ ಉಪಯುಕ್ತ. ಕಳೆದ ಬಾರಿಯೂ ಇತಿಹಾಸಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಿದ್ದರು. ಈ ಬಾರಿ ಅದರ ಮುಂದುವರಿದ ಭಾಗವನ್ನು ತಿಳಿಸಿದ್ದಾರೆ. ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನರು, ಬಿಜಾಪುರದ ಸುಲ್ತಾನರು, ಮೈಸೂರು ಒಡೆಯರು, ಹೈದರಾಲಿ ಮತ್ತು ಟಿಪ್ಪು ಇವರ ಕಾಲದ ಮಾಹಿತಿ ಈ ಕ್ಯಾಲೆಂಡರ್‌ನಲ್ಲಿ ಲಭ್ಯ.ಇತಿಹಾಸದಲ್ಲಿ ಪ್ರಾಚೀನ ಬದುಕು, ಸಂಸ್ಕೃತಿ ಹಾಗೂ ಪರಂಪರೆ ಇದೆ. ಇಂದಿನ ಮಕ್ಕಳು ಇದನ್ನೆಲ್ಲಾ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕ್ಯಾಲೆಂಡರ್ ರಚಿಸಲಾಗಿದೆ. ಮಾಹಿತಿಗೆ: 94489 88339

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry