ಸೋಮವಾರ, ಜೂನ್ 14, 2021
20 °C
(ಹೋಳಿ ಹುಣ್ಣಿಮೆಯ ದಿನ ನಡೆಯುವ ಇತಿಹಾಸ ಪ್ರಸಿದ್ಧ ಬಂಡೆ ರಂಗನಾಥೇಶ್ವರ ಜಾತ್ರೆ ನಿಮಿತ್ತ ಲೇಖನ)

ಇತಿಹಾಸ ಪ್ರಸಿದ್ಧ ಬಂಡೆ ರಂಗನಾಥೇಶ್ವರ ಜಾತ್ರೆ

ಸಿ.ಶಿವಾನಂದ ಹಗರಿಬೊಮ್ಮನಹಳ್ಳಿ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಲೆನಾಡು ಪ್ರದೇಶವೆಂದು ಕರೆಯ ಲಾಗುವ ತಂಬ್ರಹಳ್ಳಿಯ ಬಂಡೆ ರಂಗನಾಥ ಸ್ವಾಮಿ ರಥೋತ್ಸವ ದಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ.ಈ ಜಾತ್ರೆಗೆ  ಪಕ್ಕದ ದಾವಣಗೆರೆ, ಕೊಪ್ಪಳ, ಗದಗ ಜಿಲ್ಲೆಗಳಿಂದಲೂ  ಭಕ್ತರು  ಬರುತ್ತಿದ್ದಾರೆ. ತುಂಗಭದ್ರ ನದಿಯ ಹಿನ್ನೀರಿನ ಪ್ರಕೃತಿಯ ಸೊಬಗಿನ ಮಧ್ಯದಲ್ಲಿ ಪ್ರತಿ ವರ್ಷ ಹೋಳಿ ಹುಣ್ಣಿಮೆ ಇದೇ 16ರಂದು ಜಾತ್ರೆ ನಡೆಯಲಿದೆ. ಸತತ 7 ದಿನಗಳಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಫಾಲ್ಗುಣ ಶುದ್ಧ ದಶಮಿಯಂದು ಪ್ರಾರಂಭ ವಾಗುತ್ತದೆ.ಸಂಜೆ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿ ಯನ್ನು ಸಕಲ ವಾದ್ಯ ಗಳೊಂದಿಗೆ  ಗ್ರಾಮದಿಂದ ಬೆಟ್ಟಕ್ಕೆ ಕರೆ ದೊಯ್ದು,ಅಲ್ಲಿ ಕಂಕಣ ಧಾರಣೆ, ಗರುಡ ಪೂಜೆ,ದೇವತಾರ್ಚನೆ, ಅಭಿಷೇಕಗಳನ್ನು ಮಾಡ ಲಾಗುತ್ತದೆ. ಸ್ವಾಮಿಗೆ ಸರ್ವಾಭರಣ ಅಲಂಕಾರ, ರಂಗನಾಥಸ್ವಾಮಿ ಮತ್ತು ಲಕ್ಷ್ಮೀ ದೇವಿಯ ವಿವಾಹ ಮಹೋತ್ಸವ, ಕಲಶಾರೋಹಣ ನಡೆಯುತ್ತದೆ. ಹೋಳಿ ಹುಣ್ಣಿಮೆ (ಫಾಲ್ಗುಣ ಶುದ್ಧ ಪೌರ್ಣಿಮೆ) ಯಂದು ಸಂಜೆ ರಥೋತ್ಸವ ನಡೆಯುತ್ತದೆಗ್ರಾಮದ ಕರ್ಣಂ ಟಿ.ವಿಶ್ವನಾಥ ರಾವ್ ವಂಶಜರಾದ ಮಹಾದೇವ ರಾಯರ ಕಾಲದಿಂದ  ಇಂದಿನವರೆಗೂ ದೇವಸ್ಥಾನದ ಧರ್ಮದರ್ಶಿಗಳಾಗಿ ಸೇವೆಸಲ್ಲಿಸುತ್ತಿದ್ದಾರೆದೇವಾಸ್ಥಾನದ ನಿರ್ಮಾಣಕ್ಕೆ ತನ್ನದೇ ಆದ ಇತಿಹಾಸವಿದೆ. ೧೭ನೇ ಶತ ಮಾನದ ಮೈಸೂರು ಅರಸರ ಕಾಲದಲ್ಲಿ  ಹರಪನಹಳ್ಳಿ ಪಾಳೇಗಾರ ರಾದ ಸೋಮಶೇಖರ ನಾಯಕರ ಸಾಮಂತನಾಗಿದ್ದ ದಂಡನಾಯಕ ಓಬಳ ನಾಯಕ ದೇವಸ್ಥಾನವನ್ನು ನಿರ್ಮಿಸಿ ದನೆಂದು ಪ್ರತೀತಿ ಇದೆ. ಇವನು ತಾಲ್ಲೂಕಿನ ತಂಬ್ರಹಳ್ಳಿ ಸಮೀಪದ ಓಬಳಾಪುರ ಗ್ರಾಮದಲ್ಲಿದ್ದನು. ಅಂತೆಯೇ ಗ್ರಾಮಕ್ಕೆ ಆತನ ಹೆಸರು ಬಂತೆಂದು ಇತಿಹಾಸ ಹೇಳುತ್ತದೆ.ಬೆಟ್ಟದ ತುದಿಯಲ್ಲಿ ರಂಗನಾಥೇಶ್ವರ ಮತ್ತು ಲಕ್ಷ್ಮಿ ದೇವಸ್ಥಾನಗಳನ್ನು ನಿರ್ಮಿಸಿದ್ದಲ್ಲದೇ ಬಿರುಬೇಸಿಗೆ ಯಲ್ಲೂ ತಂಗಾಳಿ ಸೂಸುವ ಮಂಟಪವನ್ನು ನಿರ್ಮಿಸಿದ್ದಾನೆಂದು ಹೊಂಡದ ಬಳಿ ಇರುವ ಶಾಸನಗಳು ರುಜುವಾತು ಪಡಿಸುತ್ತವೆ. ಅದನ್ನು ವೀಕ್ಷಣ ಗೋಪುರವೆಂತಲೂ ಕರೆಯಲಾಗುತ್ತದೆ  ಎಂದು ಇತಿಹಾಸ ಉಪನ್ಯಾಸಕ ಡಾ.ಸತೀಶ್ ಹೇಳುತ್ತಾರೆ.ಬೆಟ್ಟದ ಕೆಳಗೆ ನಿರ್ಮಾಣ ಗೊಂಡಿರುವ ಬಾವಿಗೂ ಕೂಡ ಓಬಳನಾಯಕ ಬಾವಿ ಎಂದು ಹೆಸರಿಸಲಾಗಿದೆ. ಈ ತಂಗಾಳಿ ಗೋಪುರದ ನಾಲ್ಕುದಿಕ್ಕಿಗೂ ಬಾಲಕೃಷ್ಣ, ಉಗ್ರನರಸಿಂಹ, ವರಹಾ ಸ್ವಾಮಿ ಮೂರ್ತಿಗಳನ್ನು ಕೆತ್ತಲಾಗಿದೆ. ಗೋಪುರದ ಕೆಳಗಿನ ಕಟ್ಟೆಯಲ್ಲಿ ಕಲ್ಲಿನಲ್ಲಿ ಕೆತ್ತಿರುವ ಬಟ್ಟಲುಗುಣಿ ಆಕರ್ಷಿಣೀಯ ವಾಗಿದೆ.ಇತಿಹಾಸ ಪ್ರಸಿದ್ಧ  ತಂಗಾಳಿ ಗೋಪುರ ಶಿಥಿಲಾವಸ್ಥೆಯಲ್ಲಿ ಇರುವುದನ್ನು ಮನಗಂಡು ಅದನ್ನು ಪುನರ್ ನಿರ್ಮಾಣಕ್ಕೆ ಹಿಂದಿನ ಸರ್ಕಾರ ಒಲವು ತೋರಿತ್ತು. ತಂಗಾಳಿ ಗೋಪುರವನ್ನು ಮೂಲ ರೂಪಕ್ಕೆ ಚ್ಯುತಿ ಬರದಂತೆ ನುರಿತ ತಮಿಳುನಾಡು ಕಲಾವಿದರಿಂದ ಪುನಃಶ್ಚೇತನ ಗೊಳಿಸಿದ್ದಾರೆ.ತಾಲ್ಲೂಕಿನ ತಂಬ್ರಹಳ್ಳಿರಂಗನಾಥೇಶ್ವರ ಬೆಟ್ಟ ಧಾರ್ಮಿಕ ಕ್ಷೇತ್ರವೂ ಪ್ರವಾಸಿ ತಾಣವೂ ಹೌದು.ಅಂತೆಯೇ ದಿನದಿಂದ ದಿನಕ್ಕೆ ಭಕ್ತರ, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.