ಶುಕ್ರವಾರ, ಮಾರ್ಚ್ 5, 2021
23 °C

ಇತಿಹಾಸ ಬರೆದ ಅದಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸ ಬರೆದ ಅದಿತಿ

ಫಿಫೆ, ಸ್ಕಾಟ್‌ಲೆಂಡ್ (ಐಎಎನ್‌ಎಸ್‌): ಭಾರತದ ಅದಿತಿ ಅಶೋಕ್ ಸೇಂಟ್ ಆ್ಯಂಡ್ರೂಸ್ ಲಿಂಕ್ಸ್‌ನಲ್ಲಿ ಶುಕ್ರವಾರ 54 ಹೋಲ್ ಗಾಲ್ಫ್ ಸೇಂಟ್ ರೂಲ್ ಟ್ರೋಫಿ  ಗೆದ್ದು ಇತಿಹಾಸ ಬರೆದರು.ಬೆಂಗಳೂರಿನ 17 ವರ್ಷದ ಅದಿತಿ, ಈ ಟ್ರೋಫಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿಯೆಂಬ ಶ್ರೇಯ ಪಡೆದರು. 75 ಕೋರ್ಸ್‌ನ ಪ್ರಥಮ ಸುತ್ತಿನಲ್ಲಿ  67 ಮತ್ತು ಎರಡನೇ ಸುತ್ತಿನಲ್ಲಿ 71 ಅಂಕ ಗಳಿಸಿದರು. ಅವರು ಮಲೇಷ್ಯಾದ ಸ್ಟೀವನ್ ಗುಲಿಯಾನೊ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ‘ಸೇಂಟ್ ಆ್ಯಂಡ್ರೂಸ್‌ನಲ್ಲಿ ಜೂನ್ ತಿಂಗಳ ಹವಾಮಾನದ ಬಗ್ಗೆ ನನಗೆ ಮೊದಲೇ ಅರಿವಿತ್ತು.  ಅದಕ್ಕೆ ಹೊಂದಿಕೊಂಡು ಆಡಿದೆ. ಇಲ್ಲಿ ಪ್ರಶಸ್ತಿ ಗೆಲ್ಲುವುದು ವಿಶೇಷ ಅನುಭವ’ ಎಂದು ಅದಿತಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.