ಇತಿಹಾಸ ಬರೆದ ಜಿಲ್ಲಾ ಸರ್ಜನ್

7

ಇತಿಹಾಸ ಬರೆದ ಜಿಲ್ಲಾ ಸರ್ಜನ್

Published:
Updated:
ಇತಿಹಾಸ ಬರೆದ ಜಿಲ್ಲಾ ಸರ್ಜನ್

?ಅಂತಃಕರಣಪೂರಿತ ವೈದ್ಯ ವೃತ್ತಿ ಹಾಗೂ ಜವಾಬ್ದಾರಿಯುತ ಜಿಲ್ಲಾ ವೈದ್ಯಾಧಿಕಾರಿ ಹುದ್ದೆಗೆ ಏಕಕಾಲದಲ್ಲಿ ಹೇಗೆ ನ್ಯಾಯ ಸಲ್ಲಿಸುವಿರಿ?

ನನ್ನಲ್ಲಿರುವ ಅಂತಃಕರಣ ಪ್ರವೃತ್ತಿ ಹಾಗೂ ಸೇವಾ ಮನೋಭಾವವೇ ನಾನು ಈ ವೃತ್ತಿ ಪ್ರವೇಶಿಸುವಂತೆ ಮಾಡಿವೆ. ನನ್ನೊಂದಿಗೆ ಕೆಲಸ ಮಾಡುವ ಎಲ್ಲರೂ ಹೀಗೇ ಕೆಲಸ ಮಾಡಬೇಕೆಂಬುದು ನನ್ನ ಅಪೇಕ್ಷೆ. ಅದಕ್ಕಾಗಿ ಅವರಿಂದ ಚಿಛಿಜಿಟ್ಠ್ಟ ಠಿಛ್ಟಿ (ನಡವಳಿಕೆ ಚಿಕಿತ್ಸೆ) ಮೂಲಕ  ಸೌಜನ್ಯಯುತವಾಗಿಯೇ ಕೆಲಸ ತೆಗೆಯಲು ಪ್ರಯತ್ನಿಸುತ್ತೇನೆ. ಆತಳಿತಾತ್ಮಕವಾಗಿ ಗಟ್ಟಿಯಾದ ನಿಲುವುಗಳನ್ನು ಹೊಂದಿದ್ದರೂ ಅದರ ಹಿಂದಿನ ಸೇವಾ ಮನೋಭಾವಕ್ಕೆ ಪ್ರಥಮ ಆದ್ಯತೆ.

?`ಮಹಿಳೆ' ಎಂಬ ಕಾರಣಕ್ಕಾಗಿ ಆಡಳಿತಾತ್ಮಕ ಸಮಸ್ಯೆಗಳನ್ನು ನಿರೀಕ್ಷಿಸಿದ್ದೀರ?  ಅದಕ್ಕಾಗಿ ಯಾವ ರೀತಿಯ ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದೀರಿ?

ಸಾಕಷ್ಟು ಸನ್ನಿವೇಶಗಳನ್ನು ಎದುರಿಸುತ್ತಿದ್ದೇನೆ. ಆದರೆ ಅದು ಒಂದು ರೀತಿ `ಅಗೋಚರ'ವಾದ ವಿಧದಲ್ಲಿ ಆಗುತ್ತಿದೆ. ಅದನ್ನು ಪೂರ್ತಿಯಾಗಿ ಗಮನದಲ್ಲಿ ಇಟ್ಟುಕೊಂಡು, ಸಮಸ್ಯೆ ಸೃಷ್ಟಿ ಮಾಡಿದವರೇ ಅದನ್ನು ಪರಿಹರಿಸುವಂತೆ ಅವರನ್ನು ಪರಿವರ್ತಿಸಲು ಪ್ರಯತ್ನಿಸುತ್ತೇನೆ. ನಾವು ನಮ್ಮ ಆಡಳಿತದಲ್ಲಿ ವೃತ್ತಿಪರತೆಯೊಂದಿಗೆ ಪ್ರಾಮಾಣಿಕತೆಯಿಂದ ಇದ್ದರೆ ಅಷ್ಟು ಸುಲಭವಾಗಿ ನಮ್ಮ ಆಡಳಿತಾತ್ಮಕ ಸಲಹೆ ಹಾಗೂ ನಿರ್ದೇಶನವನ್ನು ಕೆಳ ಹಂತಹ ಸಹೋದ್ಯೋಗಿಗಳು ತಳ್ಳಿಹಾಕಲಾರರು.

?ನಿಮ್ಮ ಕೌಟುಂಬಿಕ ಹಾಗೂ ವಿದ್ಯಾರ್ಥಿ ದಿಸೆಯ ಅನುಭವಗಳು ಈ ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸಲು ಎಷ್ಟರಮಟ್ಟಿಗೆ ಪೂರಕ?

ಕೌಟುಂಬಿಕ ಜವಾಬ್ದಾರಿ ಹಾಗೂ ವೃತ್ತಿಪರತೆ ಎರಡರಲ್ಲೂ ಕರ್ತವ್ಯ ನಿರ್ವಹಿಸುವಲ್ಲಿ ಸಮಾನ ಮನೋಭಾವ ನನಗಿರುವುದರಿಂದ ಯಾರಿಗೂ ಅನ್ಯಾಯ ಆಗದು. ನನ್ನ ಸಾಮರ್ಥ್ಯದಲ್ಲಿ ನನಗಿರುವ ನಂಬಿಕೆ, ತೊಡಗಿಸಿಕೊಳ್ಳುವಿಕೆ ನನಗೆ ನ್ಯಾಯ ಒದಗಿಸುತ್ತದೆ. ನನ್ನ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ ವೃತ್ತಿಗೆ ನ್ಯಾಯ ಸಲ್ಲಿಸಲು ನಾನು ಸದಾ ಸಿದ್ಧ.ಕಾಲೇಜು ಹಂತದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷಳಾಗಿ ಚರ್ಚಾಪಟುವಾಗಿದ್ದ ನಾನು, ಶಾಲಾ ಹಂತದಿಂದಲೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡವಳು. ಹೀಗಾಗಿ ಆಡಳಿತಾತ್ಮಕ ಚಾತುರ್ಯವನ್ನು ತೋರಿಸುವಲ್ಲಿ ಅವು ನನಗೆ ಸಹಕಾರಿ ಆಗಬಲ್ಲವು.

?ತುಮಕೂರಿನಲ್ಲಿ ಮುಂದಿನ ವರ್ಷ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭವಾಗಲಿದೆ. ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಹೊಸ ಚಿಂತನೆಗಳನ್ನೇನಾದರೂ ಮಾಡಿದ್ದೀರ?

ನನ್ನ ಹಾಗೂ ಸಹೋದ್ಯೋಗಿಗಳಲ್ಲಿ ಇರುವ ಸರ್ವ ಸಾಮರ್ಥ್ಯವನ್ನೂ ಬಳಸಿಕೊಂಡು ಜನ ಮೆಚ್ಚುವಂತೆ ಕೆಲಸ ಮಾಡಬಲ್ಲೆ ಎಂಬ ವಿಶ್ವಾಸ ನನಗಿದೆ. ನನ್ನ ಹೊಸ ಚಿಂತನೆಗಳನ್ನು ಕಾರ್ಯರೂಪದಲ್ಲಿ ಅಭಿವ್ಯಕ್ತಗೊಳಿಸುವೆ.

?ಇತ್ತೀಚೆಗೆ ಸಾರ್ವಜನಿಕ ವಲಯದ ಎಲ್ಲ ಕ್ಷೇತ್ರಗಳಲ್ಲೂ ರಾಜಕೀಯ ಹಸ್ತಕ್ಷೇಪ ಮಾಡುತ್ತಿದೆ. ಇಂತಹ ಸ್ಥಿತಿಯನ್ನು ಹೇಗೆ ಎದುರಿಸುವಿರಿ?

ರಾಜಕೀಯ ಹಸ್ತಕ್ಷೇಪ ರೋಗಿಗಳ ಹಿತಕ್ಕಾಗಿಯೇ ಇರುತ್ತದೆ ಎಂಬುದು ನನ್ನ ಭಾವನೆ. ಅದನ್ನು ಮೀರಿದ ಹಸ್ತಕ್ಷೇಪವೇನೂ ಇರಲಾರದು. ನನ್ನ ಪ್ರಥಮ ಆದ್ಯತೆ ಜನರಿಗೆ ಸರ್ವ ಸೌಲಭ್ಯ ಒದಗಿಸುವುದು ಮಾತ್ರ. ಈ ನನ್ನ ಕರ್ತವ್ಯದಲ್ಲಿ ಬಾಹ್ಯ ಅಡಚಣೆ ಉಂಟಾದರೆ ಹುದ್ದೆ ತ್ಯಜಿಸುವೆನೇ ಹೊರತು ರಾಜಿ ಆಗಲಾರೆ.

?ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಯ ಬಗ್ಗೆ ಜನರಲ್ಲಿ ನಂಬಿಕೆ ಕಡಿವೆು ಆಗುತ್ತಿದೆ. ಇಂತಹ ಭಾವನೆ ಹೋಗಲಾಡಿಸಲು ಯಾವ ರೀತಿ ಪ್ರಯತ್ನಿಸುವಿರಿ?

ಕೆಲವು ಮೂಲಭೂತ ಸೌಕರ್ಯಗಳ ಕೊರತೆಯಿಂದ ರೋಗಿಗಳು ನಿರೀಕ್ಷಿಸಿದ ಸೇವೆ ದೊರೆಯುತ್ತಿಲ್ಲವೇ ಹೊರತು ಗುಣಮಟ್ಟದ ಕೊರತೆ ಇಲ್ಲ. ಮುಖ್ಯವಾಗಿ ಸಿಬ್ಬಂದಿ ಕೊರತೆ ಇದೆ. ಸರ್ಕಾರದೊಂದಿಗೆ ಹೋರಾಡಿ ಇಂತಹ ಕೊರತೆಗಳನ್ನು ದೂರ ಮಾಡಲು ಶ್ರಮಿಸುವೆ. ಯಾವುದೇ ಸಂದರ್ಭದಲ್ಲೂ ರೋಗಿಗಳಿಗೆ ಆದ್ಯತೆ ನೀಡುವಂತೆ ಸಿಬ್ಬಂದಿಯನ್ನು ಪ್ರೇರೇಪಿಸುವೆ. ನನ್ನ ಚಿಂತನೆಗಳನ್ನು ಹೇಳುವ ಬದಲು ಮಾಡಿ ತೋರಿಸುತ್ತೇನೆ.

?ಆಸ್ಪತ್ರೆಯಲ್ಲಿ ವ್ಯಾಪಕವಾಗಿರುವ ಬಡ ರೋಗಿಗಳ ಶೋಷಣೆಯನ್ನು ಹೇಗೆ ನಿಲ್ಲಿಸುವಿರಿ?

ಶಿಸ್ತಿನ ಸೇವೆಗೆ ಆದ್ಯತೆ ಕೊಡುವ ನಾನು ನಿಯಮಾವಳಿಗಳ ಪ್ರಕಾರ ಈಗಾಗಲೇ ಕಾರ್ಯತತ್ಪರಳಾಗಿದ್ದೇನೆ. ನನ್ನ ಎಲ್ಲ ಕೌಶಲ ಹಾಗೂ ಸಾಮರ್ಥ್ಯವನ್ನು ಈ ದಿಸೆಯಲ್ಲಿ ಬಳಸಲು ಮುಂದಾಗಿದ್ದೇನೆ. ಯಾರು ಯಾರನ್ನೂ ಶೋಷಣೆಗೆ ಒಳಪಡಿಸದೆ ಸ್ವಯಂ ಶಿಸ್ತು ಅಳವಡಿಸಿಕೊಳ್ಳುವಂತೆ ಸಿಬ್ಬಂದಿಯನ್ನು ಸಜ್ಜುಗೊಳಿಸುತ್ತೇನೆ.

?ಇತ್ತೀಚೆಗೆ ಆಸ್ಪತ್ರೆಗಳಲ್ಲಿನ ರೋಗಿಗಳ ಸಾವು ದೊಂಬಿಗೆ ಹಾಗೂ ವೈದ್ಯರು- ಸಿಬ್ಬಂದಿ ಮೇಲಿನ ಹಲ್ಲೆಗೆ ಕಾರಣವಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ಮುಖ್ಯಸ್ಥರಾಗಿ ತಾವು ಹೇಗೆ ಎದುರಿಸುವಿರಿ?

ರೋಗಿಯ ಬಂಧುಗಳು ಹಾಗೂ ಮನೆಯವರು ಮಾನಸಿಕವಾಗಿ ಸಾವನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲದಿದ್ದಾಗ ಇಂತಹ ವಿಕೋಪದ ಪ್ರಸಂಗಗಳು ಸಂಭವಿಸುತ್ತವೆ. ನಿಜಕ್ಕೂ ಇವು ಪರಿಸ್ಥಿತಿಯಿಂದ ಪ್ರೇರಿತವಾದ ಉದ್ರೇಕಗಳು. ಮಾನವೀಯತೆಯಿಂದ ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ನನ್ನದು. ಪರಿಸ್ಥಿತಿ ಕೈ ಮೀರಿದರೆ ಸಿಬ್ಬಂದಿ ಹಾಗೂ ಆಸ್ಪತ್ರೆಯ ಆಸ್ತಿಪಾಸ್ತಿಗೆ ಹಾನಿಯಾದ ಸಂದರ್ಭದಲ್ಲಿ ಮಾತ್ರ ಕಠಿಣ ಕ್ರಮ ಕೈಗೊಳ್ಳದೆ ವಿಧಿ ಇಲ್ಲ. ಇಂತಹ ಹಲ್ಲೆಗಳು ದಂಡನಾರ್ಹ ಅಪರಾಧ ಆಗುತ್ತವೆ. ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಸಿಬ್ಬಂದಿಯ ಆತ್ಮವಿಶ್ವಾಸ, ಗೌರವಕ್ಕೆ ಚ್ಯುತಿಯಾದ ಸಂದರ್ಭದಲ್ಲಿ ನನ್ನ ನ್ಯಾಯೋಚಿತ ಕ್ರಮವನ್ನು ಬಳಸಲು ಮುಂದಾಗುತ್ತೇನೆ.


?ಅಪಘಾತದ ಸಂದರ್ಭದಲ್ಲಿ ಉದ್ಭವಿಸುವ ಪೊಲೀಸ್ ತನಿಖೆ, ಕೋರ್ಟು ಕಚೇರಿಗಳಿಗೆ ಅಲೆಯಬೇಕಾದ ಸಂದರ್ಭಗಳಲ್ಲಿ ಹೇಗೆ ತೊಡಗಿಕೊಳ್ಳುವಿರಿ?

ನನ್ನ ಸೇವಾ ಅವಧಿಯಲ್ಲಿ ಎಂದೂ ಸತ್ಯದ ಪರವಾಗಿಯೇ ಹೋರಾಡಿಕೊಂಡು ಬಂದಿದ್ದೇನೆ. ಈ ಬಗ್ಗೆ ರಾಜಿಯ ಪ್ರಶ್ನೆಯೇ ಇಲ್ಲ. ಕಾನೂನನ್ನು ಎಲ್ಲರೂ  ಗೌರವಿಸಲೇಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry