ಇತಿಹಾಸ ವ್ಯಾಸಂಗ ಮಾಡುವವರ ಸಂಖ್ಯೆ ಕ್ಷೀಣ: ಬೇಸರ

7

ಇತಿಹಾಸ ವ್ಯಾಸಂಗ ಮಾಡುವವರ ಸಂಖ್ಯೆ ಕ್ಷೀಣ: ಬೇಸರ

Published:
Updated:

ಮಳವಳ್ಳಿ: ಉದ್ಯೋಗಾವಕಾಶ ಕೊರತೆಯಿಂದಾಗಿ ಇತಿಹಾಸ ವ್ಯಾಸಂಗ ಮಾಡುವವರ ಸಂಖ್ಯೆ ಕ್ಷೀಣಿಸಿದೆ ಎಂದು ಪ್ರೊ.ಪುಟ್ಟರಂಗಪ್ಪ ತಿಳಿಸಿದರು.ಪಟ್ಟಣದ ಶಾಂತಿ ಕಾಲೇಜಿನಲ್ಲಿ ಬುಧವಾರ ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ವ್ಯಾಪ್ತಿಯ ಇತಿಹಾಸ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ಸೇರಿ ನಡೆಸಿದ ಒಂದು ದಿನದ ಇತಿಹಾಸ ಪ್ರಶ್ನೆಗಳ ಕೋಶ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಇತಿಹಾಸ ವಿಷಯದ ಜೊತೆಗೆ ಪ್ರವಾಸೋದ್ಯಮ ವಿಷಯವನ್ನು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿದರೆ ಉದ್ಯೋಗಾವಕಾಶ ದೊರಕಬಹುದು ಎಂದು ಅವರು ಅಭಿಪ್ರಾಯಪಟ್ಟರು.ಶಾಂತಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರೊ.ಪುಟ್ಟಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಪರೀಕ್ಷಾಮಂಡಳಿ ಅಧಿಕಾರಿಗಳಾದ ಪ್ರೊ.ಉಷಾರಾಣಿ, ಡಾ.ಸಾವಿತ್ರಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಕೃಷ್ಣೇಗೌಡ, ಚಿಕ್ಕಮಾದನಾಯಕ, ಮಹದೇವಸ್ವಾಮಿ, ಸಿದ್ದರಾಜು, ರಾಮ್‌ಪ್ರಸಾದ್ ಹಾಗೂ ಶಾಂತಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಶ್ಥ ರಾಜಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry