ಬುಧವಾರ, ಮೇ 12, 2021
17 °C

ಇತ್ಯರ್ಥಕ್ಕೆ ಕಾದಿವೆ 32 ಲಕ್ಷ ಪ್ರಕರಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಐಎಎನ್‌ಎಸ್):ರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಎಲ್ಲ ಪ್ರಕರಣಗಳ ವಿಚಾರಣೆಯನ್ನು 2012ರ ಡಿಸೆಂಬರ್ 31ರ ಒಳಗೆ  ಚುಕ್ತಾ ಮಾಡಲು ಕ್ರಮ ಕೈಗೊಳ್ಳುವುದಾಗಿ ಯುಪಿಎ ಸರ್ಕಾರ ಎರಡು ವರ್ಷಗಳ ಹಿಂದೆ ಅತ್ಯುತ್ಸಾಹದ ಭರವಸೆ ನೀಡಿತ್ತು.ಆದರೆ ವಾಸ್ತವ ಏನೆಂದರೆ, ವಿಚಾರಣೆಗೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ! ಸುಪ್ರೀಂಕೋರ್ಟ್ 2009ರ ಜನವರಿ 1ರಂದು ಪ್ರಕಟಿಸಿದ್ದ ಅಂಕಿ ಅಂಶದ ಪ್ರಕಾರ, ಆಗ ಸುಪ್ರೀಂಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳ ಸಂಖ್ಯೆ 30,333, 263.ಇದೀಗ ಹೊಸ ಪ್ರಕಟಣೆ ಪ್ರಕಾರ 2010ರ ಸೆ.30ಕ್ಕೆ ಅನ್ವಯವಾಗುವಂತೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 32,170,973. ಸುಪ್ರೀಂಕೋರ್ಟ್ ಒಂದರಲ್ಲೇ 2011ರ ಜೂನ್ 30ಕ್ಕೆ ಅನ್ವಯವಾಗುವಂತೆ ಇತ್ಯರ್ಥವಾಗಲು ಕಾದು ಕೂತಿರುವ ಪ್ರಕರಣಗಳ ಸಂಖ್ಯೆ 57,179. ಸರ್ಕಾರ ನೀಡಿರುವ ಗಡುವಿನ ಅನುಸಾರ ಇನ್ನು ಉಳಿದಿರುವ ಅವಧಿ ಒಂದೂಕಾಲು ವರ್ಷ. ಆದರೆ ಆ ವೇಳೆಗೆ 32 ಲಕ್ಷ ಪ್ರಕರಣಗಳು ಇತ್ಯರ್ಥ ಕಾಣುವುದು ಅಸಾಧ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.