ಶನಿವಾರ, ಆಗಸ್ಟ್ 24, 2019
23 °C

ಇದೀಗ ಸಿದ್ದವಾಗಿದೆ ಹಾರುವ ಬೈಸಿಕಲ್...

Published:
Updated:

ಲಂಡನ್(ಪಿಟಿಐ): ಬ್ರಿಟನ್‌ನ ಇಬ್ಬರು ವಿನ್ಯಾಸಕರು ಮತ್ತು ವಾಯುಯಾನ ಉತ್ಸಾಹಿಗಳು ಸೇರಿ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಹಾರುವ ಸೈಕಲನ್ನು ಅಭಿವೃದ್ಧಿಪಡಿಸಿದ್ದಾರೆ.ಹಾರಾಡುವ ಸೈಕಲ್ ಭೂಮಿಯಿಂದ ನಾಲ್ಕು ಸಾವಿರ ಅಡಿ ಎತ್ತರದಲ್ಲಿ ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಪ್ರಯಾಣ ಬೆಳೆಸಲಿದೆ. ಹಾರಾಡುವ ಸೈಕಲ್‌ನ್ನು ಸರಳವಾಗಿ ಕೆಲಸಮಾಡುವ ವಿಮಾನ ವಿಭಾಗಕ್ಕೆ ಸೇರಿಸಲಾಗಿದೆ.ನಾಲ್ಕು ಸಾವಿರ ಅಡಿ ಎತ್ತರದವರೆಗಿನ ವ್ಯಾಪ್ತಿಯಲ್ಲಿ ಚಾಲನೆ ಮಾಡಲು ಪರವಾನಗಿ ಪತ್ರದ ಅವಶ್ಯಕತೆ ಇರುವುದಿಲ್ಲ. ಈ ಸೈಕಲ್ ತುಂಬಾ ಕಡಿವೆು ತೂಕದ್ದಾಗಿದ್ದು, ಹಿಂಬದಿಯಲ್ಲಿ ಶಕ್ತಿಯುತ ರೆಕ್ಕೆಗಳನ್ನು ಅಳವಡಿಸಲಾಗಿದೆ.`ಜೈವಿಕ ಇಂಧನದಿಂದ ಕಾರ್ಯನಿರ್ವಹಿಸುವ ಯಂತ್ರವನ್ನು ಸೈಕಲ್‌ನ ಹಿಂದೆ ಜೋಡಿಸಲಾಗಿರುತ್ತದೆ. ಇದರ ರೆಕ್ಕೆಗಳನ್ನು ತಿರುಗುವಂತೆ ಮಾಡುವವರೆಗೆ ಇದು ಸಾಮಾನ್ಯ ಸೈಕಲ್‌ನಂತೆಯೇ ಕಾರ್ಯನಿರ್ವಹಿಸಲಿದೆ. ಯಂತ್ರ ಕಾರ್ಯಾರಂಭ ಮಾಡಿದಾಗ ಸೈಕಲ್ ಆಗಸಕ್ಕೆ ಹಾರಲಿದೆ' ಎಂದು ಇದನ್ನು ಅಭಿವೃದ್ಧಿಪಡಿಸಿರುವ ವಿನ್ಯಾಸಕರಾದ ಫೊಡೆನ್ ಮತ್ತು ಯಾನ್ನಿಕ್ ತಿಳಿಸಿದ್ದಾರೆ.

Post Comments (+)