ಇದು ನಗೆಯ ವಿಷಯವಲ್ಲ...!

7

ಇದು ನಗೆಯ ವಿಷಯವಲ್ಲ...!

Published:
Updated:
ಇದು ನಗೆಯ ವಿಷಯವಲ್ಲ...!

ಮುಂಬೈ (ಪಿಟಿಐ): ಯಾವುದೇ ವ್ಯಕ್ತಿಯ ಮನೆ ಮುಂದೆ ಜನರು ಜಮಾಯಿಸಿ ಗಟ್ಟಿಯಾಗಿ ನಗುವುದು ಸಮಂಜಸವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. `ಶೀತಲ್ ಜಾಗಿಂಗ್ ಅಸೋಸಿಯೇಷನ್~ ಹೆಸರಿನ ನಗೆಕೂಟದ ಸದಸ್ಯರು ಕುರ್ಲಾ ಉಪನಗರದ ಶೀತಲ್ ತುಲವೊ ಅವರ ಮನೆಯ ಮುಂದೆ ಜಮಾಯಿಸಿ ಗಟ್ಟಿಯಾಗಿ ನಗುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಕುಟುಂಬವೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ರೀತಿ ಹೇಳಿದೆ.  ನಗೆಕೂಟಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯುವಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಒಂದು ವಾರದೊಳಗೆ ಮಾಹಿತಿ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಎಸ್. ಎ. ಬೊಬಾಡೆ ಮತ್ತು ಮೃದುಲಾ ಭಟ್ಕರ್ ಪೊಲೀಸರಿಗೆ ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry