ಶುಕ್ರವಾರ, ಏಪ್ರಿಲ್ 23, 2021
31 °C

ಇದು ಬರೀ ಜಲವಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರೇಹಿಪಾನಿ ಜಲಪಾತದ ಅಪೂರ್ವ ದರ್ಶನದಿಂದ ವನಸಿರಿಯ ಅಂದ; ಜಲಸಿರಿಯ ಆನಂದ ಎರಡನ್ನೂ ಸವಿಯಬಹುದು. ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಗೆ ಸೇರಿದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನ ಬರೇಹಿಪಾನಿ ಜಲಪಾತದ ತಾಣ. ಮೇಘಾಸನ್ ಬೆಟ್ಟ ಪ್ರದೇಶದಲ್ಲಿ ಹರಿಯುವ ಬುಧಾಬಲಂಗ ನದಿ ಈ ಸುಂದರ ಜಲಪಾತವನ್ನು ನಿರ್ಮಿಸಿದೆ.399 ಮೀಟರ್ (1,309 ಅಡಿ ) ಎತ್ತರದಿಂದ ಬೀಳುವ ನೀರು ವರ್ಣನೆಗೆ ನಿಲುಕದ ಸೌಂದರ್ಯವನ್ನು ಸೃಷ್ಟಿಸಿದೆ.ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವವರು ಈ ಸುಂದರ, ನಿಸರ್ಗ ನಿರ್ಮಿತ ಜಲನಿಧಿಯನ್ನು ನೋಡಿ ಸವಿಯಬಹುದು. ಇದರ ಸಮೀಪದಲ್ಲಿಯೇ ಜೋರಂಡಾ ಜಲಪಾತವೂ ಇದೆ. ಅಲ್ಲಿ 150 ಮೀಟರ್ ಎತ್ತರದಿಂದ ನೀರು ಧುಮುಕುತ್ತದೆ.ಸಿಮಿಲಿಪಾಲ್ ಉದ್ಯಾನವನ ಹುಲಿ ಸಂರಕ್ಷಣಾ ವಲಯ ಎನಿಸಿಕೊಂಡಿದೆ. ಅಲ್ಲಿ ಪ್ರವಾಸಿಗರಿಗೆ ಸುತ್ತಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರತದ ಅತ್ಯಂತ ಎತ್ತರದ ಎರಡನೇ ಜಲಪಾತ ಎನಿಸಿಕೊಂಡಿರುವ ಬರೇಹಿಪಾನಿ ಜಲಪಾತದಲ್ಲಿ ವರ್ಷವಿಡೀ ನೀರು ಇರುತ್ತದೆ. ಸುತ್ತಲೂ ಹಸಿರು ತುಂಬಿದ ಕಾಡು; ಅದರ ನಡುವೆ ಹರಿಯುವ ನೀರಧಾರೆ ಪ್ರವಾಸಿಗರ ಕಣ್ಣಿಗೆ ಭವ್ಯ ದೃಶ್ಯ ವೈಭವ ಕಟ್ಟಿಕೊಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.