ಇದು ಬಾಡಿಗೆ ಮಾತು

ಬುಧವಾರ, ಜೂಲೈ 17, 2019
24 °C

ಇದು ಬಾಡಿಗೆ ಮಾತು

Published:
Updated:

ಬೆಂಗಳೂರಿನಲ್ಲಿ ಎರಡು ಮತ್ತು ಮೂರು ಕೊಠಡಿಗಳ ಮನೆಗಳ ಬಾಡಿಗೆ ದರದಲ್ಲಿ ಕಳೆದ ಒಂದು ವರ್ಷದಲ್ಲಿ ಸರಾಸರಿ ಶೇಕಡ 14ರಷ್ಟು ಹೆಚ್ಚಳವಾಗಿದೆ.ಸ್ಥಳೀಯ ಮತ್ತು ಸಾಮಾಜಿಕ ವಾಣಿಜ್ಯ, ಆನ್‌ಲೈನ್ ಹಾಗೂ ಮೊಬೈಲ್ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಮಾಹಿತಿ ಸೇವಾ ಸಂಸ್ಥೆ ಸುಲೇಖ ಡಾಟ್ ಕಾಮ್ (sulekha.com) ಬೆಂಗಳೂರಿನಲ್ಲಿ ಕಟ್ಟಡಗಳ ಬಾಡಿಗೆ ದರದ ಏರಿಕೆ ಕುರಿತು ನಡೆಸಿದ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದೆ.ಇದಕ್ಕಾಗಿ ಅದು ತನ್ನ ವೆಬ್‌ಸೈಟ್‌ನಲ್ಲಿ ನಮೂದಿಸಿದ 1.45 ಲಕ್ಷಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳ ಬಾಡಿಗೆ ಜಾಹೀರಾತುಗಳ ವಿಶ್ಲೇಷಣೆ ನಡೆಸಿತ್ತು. 2011ರ ಜನವರಿ, ಫೆಬ್ರುವರಿ ಮತ್ತು ಮಾರ್ಚ್ ಮತ್ತು 2010ರ ಇದೇ ಅವಧಿಯ ಮನೆ ಬಾಡಿಗೆ ದರಗಳನ್ನು ತುಲನೆ ಮಾಡಲಾಗಿತ್ತು.ಸಮೀಕ್ಷೆಯ ಪ್ರಮುಖ ಅಂಶಗಳು:

* ಎರಡು ಕೊಠಡಿಗಳ (ಬೆಡ್‌ರೂಮ್, ಹಾಲ್ ಮತ್ತು ಅಡುಗೆ ಮನೆ) ಮತ್ತು ಮೂರು ಕೊಠಡಿಗಳ ಅಪಾರ್ಟ್‌ಮೆಂಟ್ ಮತ್ತು ಮನೆಗಳ ಬಾಡಿಗೆ ದರ ಕಳೆದ ಒಂದು ವರ್ಷದಲ್ಲಿ  ಕ್ರಮವಾಗಿ ಶೇ 13 ಮತ್ತು 15ರಷ್ಟು ಏರಿಕೆಯಾಗಿದೆ.* ಒಂದು ಕೊಠಡಿಯ ಅಪಾರ್ಟ್‌ಮೆಂಟ್, ಮನೆಗಳ ಬಾಡಿಗೆ ಸಣ್ಣ ಪ್ರಮಾಣದಲ್ಲಿ ಅಂದರೆ ಶೇ 7ರಷ್ಟು ಹೆಚ್ಚಳವಾಗಿದೆ.* ಆದರೆ ಹಲಸೂರು, ಸಿವಿ ರಾಮನ್ ನಗರ, ಜಯನಗರ, ರಾಜಾಜಿನಗರ, ಎಚ್‌ಎಸ್‌ಆರ್ ಲೇಔಟ್, ಬನ್ನೇರುಘಟ್ಟ ರಸ್ತೆ ಮತ್ತು ರಾಮಮೂರ್ತಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಾತ್ರ ಒಂದು ಕೊಠಡಿಯ ಅಪಾರ್ಟ್‌ಮೆಂಟ್‌ನ ಬಾಡಿಗೆ ದರದಲ್ಲಿ ಕಳೆದೊಂದು ವರ್ಷದಲ್ಲಿ ಶೇಕಡ 15ರಿಂದ 25 ರಷ್ಟು  ಏರಿಕೆಯಾಗಿದೆ.* ಇಂದಿರಾನಗರ, ಹಲಸೂರು ಮತ್ತು ಮಲ್ಲೇಶ್ವರಂನಲ್ಲಿ ಮೂರು ಕೊಠಡಿಗಳ ಅಪಾರ್ಟ್‌ಮೆಂಟ್‌ನ ಸರಾಸರಿ ಬಾಡಿಗೆ 25 ಸಾವಿರ ರೂ.

* ನಗರದ ಹತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮೂರು ಕೊಠಡಿಗಳ ಅಪಾರ್ಟ್‌ಮೆಂಟ್‌ನ ಬಾಡಿಗೆ 20 ಸಾವಿರ ಅಥವಾ ಅದಕ್ಕಿಂತ ಹೆಚ್ಚಾಗಿದೆ. ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಬಿಟಿಎಂ ಮೈಕೋ ಲೇಔಟ್, ಸರ್ಜಾಪುರ ರಸ್ತೆ, ಜೆಪಿನಗರ 2 ಮತ್ತು 7ನೇ ಹಂತ, ಹಳೆ ಮದ್ರಾಸ್ ರಸ್ತೆ ಮತ್ತು ಫ್ರೇಜರ್ ಟೌನ್ ಅವೇ ಈ ಪ್ರದೇಶಗಳು.ಎಲ್ಲಿ, ಹೇಗೆ

* ದೊಮ್ಮಲೂರು, ಬಾಣಸವಾಡಿ, ಜೆಪಿ ನಗರ 7ನೇ ಹಂತ ಮತ್ತು ಬಸವನಗುಡಿಯಂತಹ ಪ್ರದೇಶಗಳಲ್ಲಿ ಒಂದು ಕೊಠಡಿಯ ಮನೆ ಬಾಡಿಗೆ ಕಡಿಮೆ.* ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ 3ನೇ ಹಂತ ಮತ್ತು ರಾಜಾಜಿನಗರ ಇತ್ಯಾದಿ ಕೆಲವು ಪ್ರದೇಶಗಳಲ್ಲಿ 2 ಕೊಠಡಿಗಳ ಮನೆಗಳು 10 ಸಾವಿರ ರೂಪಾಯಿಗಳ ಬಾಡಿಗೆಯಲ್ಲಿ ದೊರೆಯುತ್ತವೆ.* ವಿಜಯನಗರ, ಈಜಿಪುರ ಮತ್ತು ಬೊಮ್ಮನಹಳ್ಳಿಯಂತಹ ಕೆಲವು ಸ್ಥಳಗಳಲ್ಲಿ ಮೂರು ಕೊಠಡಿಗಳ ಮನೆಗಳ ಬಾಡಿಗೆ ದರ ಸರಾಸರಿ 15 ಸಾವಿರ ರೂಪಾಯಿ.* ಬಾಡಿಗೆ ಮನೆ, ಅಪಾರ್ಟ್‌ಮೆಂಟ್‌ಗಳ ಮಾಲಿಕರೊಂದಿಗೆ ಗ್ರಾಹಕರು ನೇರವಾಗಿ ವ್ಯವಹರಿಸಿದರೆ ಶೇಕಡ 10ರಿಂದ 15ರಷ್ಟು ಹಣವನ್ನು ಉಳಿಸಬಹುದು ಎಂಬ ಮಹತ್ವದ ಅಂಶ ವಿಶ್ಲೇಷಣೆಯಲ್ಲಿ ಕಂಡು ಬಂದಿದೆ. ಅಲ್ಲದೇ ಒಂದು ತಿಂಗಳ ಬ್ರೋಕರೇಜ್ ಹಣವೂ ಉಳಿತಾಯವಾಗುತ್ತದೆ.ಸುಲೇಖ ಡಾಟ್ ಕಾಮ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ಪ್ರಭಾಕರ್ ಅವರು ಹೇಳುವಂತೆ, ಗ್ರಾಹಕ ಉತ್ಪನ್ನಗಳ ಬೆಲೆ ಏರಿಕೆಯ ಕುರಿತು ಸಾಕಷ್ಟು ಅಧ್ಯಯನಗಳು ನಡೆದರೂ ಮನೆ ಬಾಡಿಗೆ ಹಣದುಬ್ಬರದ ಕುರಿತು ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಅದಕ್ಕಾಗಿಯೇ ಸುಲೇಖ ಡಾಟ್ ಕಾಮ್  ಈ ಸಮೀಕ್ಷೆಯನ್ನು ಕೈಗೆತ್ತಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry