ಮಂಗಳವಾರ, ನವೆಂಬರ್ 12, 2019
28 °C

ಇದೆಂತಹ ವಾದ?

Published:
Updated:

ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಮತ್ತು ನಿವೃತ್ತ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ನಮ್ಮ ಚುನಾವಣೆಗಳಲ್ಲಿ ಶೇ 90 ರಷ್ಟು ಜನರು ಕುರಿ ಮತ್ತು ಪಶುಗಳ ಹಾಗೆ ಮತದಾನ ಮಾಡುತ್ತಾರೆ, ಹಾಗಾಗಿ ನಮ್ಮದು ಅರ್ಥಪೂರ್ಣ ಪ್ರಜಾಪ್ರಭುತ್ವವಲ್ಲ, ಜನರು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತದಾನ ಮಾಡುತ್ತಾರೆ ಎನ್ನುತ್ತಾ ಜಾನುವಾರುಗಳ ಸಾಲಿನಲ್ಲಿ ನಿಂತು ನಾನ್ಯಾಕೆ ಸಮಯ ಹಾಳು ಮಾಡಲಿ? ಎಂದು ವಿಷಾದಿಸಿದ್ದಾರೆ.  (ಪ್ರ.ವಾ ಮಾ.31) ಘನತವೆತ್ತ ಪತ್ರಿಕಾ ಮಂಡಳಿ ಅಧ್ಯಕ್ಷರಿಂದ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ.ಯಾವುದೇ ಒಬ್ಬ ವ್ಯಕ್ತಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತದಾನ ಮಾಡುತ್ತಾನೆ ಎಂದಿಟ್ಟುಕೊಳ್ಳೋಣ. ಹಾಗೆ ಮತದಾನ ಮಾಡಿದರೆ ಅದರ ಗೋಪ್ಯತೆ ಅವನಿಗೆ ಮಾತ್ರ ತಿಳಿದಿರುತ್ತದೆ. ಕಟ್ಜುರವರು ಶೇ 90 ಜನರ ನಿಜ ಸ್ಥಿತಿ ತಿಳಿದುಕೊಂಡಿದ್ದಾರೆಯೇ?ಜಾನುವಾರುಗಳ ಸಾಲಿನಲ್ಲಿ ನಿಂತು ನಾನ್ಯಾಕೆ ಸಮಯ ಹಾಳು ಮಾಡಲಿ? ಎಂದಿರುವ ಇವರು ಮತದಾನಕ್ಕೆ ಪ್ರೋತ್ಸಾಹಿಸುವ ಬದಲು ಜನರ ಮನಸ್ಸನ್ನು ಮತದಾನ ಮಾಡದಂತೆ ಪರೋಕ್ಷವಾಗಿ ಎಚ್ಚರಿಸುತ್ತಿದ್ದಾರೆ. ಹಾಗಿದ್ದರೆ ನಮ್ಮಲ್ಲಿ ತಪ್ಪು ಮಾಡಿರುವ ಸಂಜಯ್ ದತ್ ಮತ್ತು ಜೈಬುನ್ನೀಸಾ ಖಾದ್ರಿಯವರಿಗೆ ಕ್ಷಮಾದಾನ ನೀಡುವಂತಹ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕೆ ಕಟ್ಜುರವರೇ?

 

ಪ್ರತಿಕ್ರಿಯಿಸಿ (+)