ಇದೇನಾ ಸಭ್ಯತೆ?

7

ಇದೇನಾ ಸಭ್ಯತೆ?

Published:
Updated:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಕೆ.ಎ.-01-ಎಫ್-8708. ಘಟಕ-4ನೇ ಸಂಖ್ಯೆ, ಬೆಳಿಗ್ಗೆ ಸುಮಾರು 8.50ಕ್ಕೆ ದಿನಾಂಕ 12.12.12 ರಂದು ಬನಶಂಕರಿಯಿಂದ ಹೊರಟು ಜೀವನಭೀಮಾನಗರಕ್ಕೆ ಹೋಗುವ 201ಜಿ ವಾಹನದ ನಿರ್ವಾಹಕನಿಗೆ ರೂ. 10 ನೀಡಿದೆ. ಈಸ್ಟ್ ಎಂಡ್ ಬಸ್ ನಿಲ್ದಾಣಕ್ಕೆ ಚೀಟಿ ಕೇಳಲಾಗಿ ನಂತರ ನನಗೆ ರೂ. 5 ಚಿಲ್ಲರೆ ನೀಡಿದರು. ತಕ್ಷಣ ಚೀಟಿ ಕೇಳಲಾಗಿ ಆತ `ಇಲ್ಲಿಂದಿಲ್ಲಿಗೆ ಯಾವ ಚೀಟಿ ಕೊಡಬೇಕು ನಿನಗೆ ಹೋಗಯ್ಯೋ!' ಹಿಂದೆ ಎಂದು ನಿಂದಿಸಿದ. ಆದರೂ ಅಸಹಾಯಕನಾಗಿ ನಿಂತೆ. ಹಿಂದೆ ಹೋಗಯ್ಯೋ ಎಂದು ಕತ್ತು ಹಿಡಿದು ಸಾರ್ವಜನಿಕರ ಮುಂದೆ ಟಿಕೆಟ್ ನೀಡದೆ ನೂಕಿದ. ನಾನು ಸಹ ವೃತ್ತಿಯಲ್ಲಿ ಮುಖ್ಯೋಪಾಧ್ಯಾಯನಾಗಿದ್ದೇನೆ. ಇಂತಹ ನಿರ್ವಾಹಕ ಹಾಗೂ ಸಿಬ್ಬಂದಿಯನ್ನು ಸಂಸ್ಥೆ ಗಮನಿಸಿ ತನಿಖೆ, ಕ್ರಮ ಕೈಗೊಳ್ಳುವುದಿಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry