ಇದೇ 8,9 ರಂದು ಮರಗಳ ಉತ್ಸವ

7

ಇದೇ 8,9 ರಂದು ಮರಗಳ ಉತ್ಸವ

Published:
Updated:

ಬೆಂಗಳೂರು: ನಗರದ ಪಾಕೃತಿಕ  ಸೊಬ­ಗನ್ನು ಹಿಡಿದಿಟ್ಟಿರುವ ವೃಕ್ಷಗಳ ಕುರಿತ ‘ನೆರಳು’–ಬೆಂಗಳೂರು ಮರ­ಗಳ ಉತ್ಸವವನ್ನು ಫೆಬ್ರುವರಿ 8 ಹಾಗೂ 9 ರಂದು ಕಬ್ಬನ್‌ ಉದ್ಯಾನ­ದಲ್ಲಿ ಆಯೋಜಿಸಲಾಗಿದೆ.ವೃಕ್ಷಗಳಿಂದಾಗಿಯೇ ನಗರಕ್ಕೆ ಪಾರಂ­ಪರಿಕ ಮೆರುಗು ದೊರಕಿದೆ. ಜಾಗತೀ­ಕ­ರಣದ ಹಿನ್ನೆಲೆಯಲ್ಲಿ  ಸಾಗುತ್ತಿ­ರುವ ಅಭಿವೃದ್ಧಿಯ ಭರಾಟೆಯಲ್ಲಿ ಮರಗಳ ಮಾರಣಹೋಮ ನಡೆ­ಯು­ತ್ತಿದೆ. ಈ  ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವೃಕ್ಷಗಳ ಕುರಿತು ಎರಡು ದಿನಗಳ ಅಭಿಯಾನಕ್ಕೆ ಕಬ್ಬನ್ ಉದ್ಯಾನ ವೇದಿಕೆಯಾಗಲಿದೆ.ಸಾರ್ವಜನಿಕ ಉದ್ಯಾನಗಳು ಹಾಗೂ ಅವುಗಳ ಸಂರಕ್ಷಣೆ, ಸ್ಥಳೀಯ, ಜಾಗತಿಕ ಮಟ್ಟದಲ್ಲಿ ಮರ­ಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಜೈವಿಕ ವೈವಿಧ್ಯ ಕುರಿತ ಕತೆ ನಿರೂಪಣೆ, ಮರಗಳ ಅಪ್ಪಿಕೊ ಅಭಿಯಾನ ನಡೆಯಲಿದ್ದು, ಪರಿಸರ ಪ್ರೇಮಿಗಳು, ತಜ್ಞರು, ತಂತ್ರಜ್ಞರು, ಇತಿಹಾ­ಸಜ್ಞರು ಕೈಜೋಡಿಸಲಿದ್ದಾರೆ. ಕಾರ್ಯಕ್ರಮವು ಕ್ರೌಡ್‌ ಫಂಡಿಂಗ್ (ಜನಧನ) ಮೂಲಕ ಆಯೋಜನೆ­ಗೊಳ್ಳುತ್ತಿದ್ದು, ಆಸಕ್ತರು ಕೆಳಕಂಡ ವೆಬ್‌ಸೈಟ್‌ ಸಂಪರ್ಕಿಸ­ಬ­ಹುದು. www.neralu.in/donate/

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry