ಮಂಗಳವಾರ, ಏಪ್ರಿಲ್ 13, 2021
23 °C

ಇದೊಂದು ಸವಾಲಿನ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದೊಂದು ಸವಾಲಿನ ಸರಣಿ

ನವದೆಹಲಿ (ಪಿಟಿಐ): `ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಕ್ರಿಕೆಟ್ ಸರಣಿ ಸವಾಲಿನಿಂದ ಕೂಡಿರಲಿದೆ. ಹೆಚ್ಚಿನವರು ರಣಜಿ ಪಂದ್ಯಗಳಲ್ಲಿ ಆಡ್ದ್ದಿದು ಉತ್ತಮ ಸಿದ್ಧತೆ ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ~ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ನುಡಿದಿದ್ದಾರೆ.ಸೆಹ್ವಾಗ್ ರಣಜಿ ಟ್ರೋಫಿ ಋತುವಿನ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಶತಕ ಗಳಿಸುವ ಮೂಲಕ ಫಾರ್ಮ್‌ಗೆ ಮರಳಿರುವ ಸೂಚನೆ ನೀಡಿದ್ದಾರೆ. ಗಾಜಿಯಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ದೆಹಲಿ ತಂಡದಲ್ಲಿ ಆಡಿದ್ದ ವೀರೂ ಬೆರಳಿಗೆ ಗಾಯಮಾಡಿಕೊಂಡಿದ್ದರೂ ಉತ್ತಮ ಪ್ರದರ್ಶನ ತೋರಿದ್ದರು.`ಉತ್ತರ ಪ್ರದೇಶ ವಿರುದ್ಧ ಶತಕ ಗಳಿಸಿದ್ದೇನೆ. ಇದು ಸಹಜವಾಗಿಯೇ ನನ್ನಲ್ಲಿ ವಿಶ್ವಾಸ ಮೂಡಿಸಿದೆ. ನಾನು ಫಾರ್ಮ್‌ಗೆ ಮರಳಿದ್ದೇನೆಯೇ ಇಲ್ಲವೇ ಅದು ಬೇರೆ ಪ್ರಶ್ನೆ. ಆದರೆ ಉತ್ತಮ ಪ್ರದರ್ಶನ ತೋರಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುವ ಭರವಸೆ ಇದೆ~ ಎಂದಿದ್ದಾರೆ.`ಇಂಗ್ಲೆಂಡ್ ಕೂಡ ನಮ್ಮಷ್ಟೇ ಉತ್ತಮ ತಂಡ. ಈ ಸವಾಲಿನ ಸರಣಿಗೆ ನಾವು ಚೆನ್ನಾಗಿಯೇ ಸಿದ್ಧತೆ ನಡೆಸುತ್ತ್ದ್ದಿದೇವೆ. ನವೆಂಬರ್ 9ರಿಂದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದೇವೆ~ ಎಂದೂ ಸೆಹ್ವಾಗ್ ತಿಳಿಸಿದ್ದಾರೆ.

`ಆದರೆ ಇದು ಸೇಡಿನ ಸರಣಿ ಎಂಬುದನ್ನು ನಾನು ಒಪ್ಪುವುದಿಲ್ಲ. ಇದು ಮಾಧ್ಯಮಗಳ ಗ್ರಹಿಕೆ ಅಷ್ಟೆ. ನಾವು ಉತ್ತಮ ಪ್ರದರ್ಶನ ತೋರುವುದರತ್ತ ಚಿತ್ತ ಹರಿಸಲಿದ್ದೇವೆ. ಈ ಸರಣಿಯಲ್ಲಿ ಗೆಲ್ಲುವುದು ನಮ್ಮ ಉದ್ದೇಶ~ ಎಂದು ಅವರು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೀರೂ ಶತಕ ಸಂಭ್ರಮವೊಂದಕ್ಕೆ ಕಾರಣರಾಗಲಿದ್ದಾರೆ. ಏಕೆಂದರೆ ಅವರು ಇದುವರೆಗೆ 98 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಇನ್ನು ಎರಡು ಪಂದ್ಯಗಳಲ್ಲಿಆಡಿದರೆ ನೂರರ ಗಡಿ ಮುಟ್ಟಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.