ಇದೋ...ದೇವರು ಮೆಚ್ಚುವ ಕ್ರಮ

7

ಇದೋ...ದೇವರು ಮೆಚ್ಚುವ ಕ್ರಮ

Published:
Updated:

ಅನಂತಪದ್ಮನಾಭ ದೇವಾಲಯದಲ್ಲಿ 32 ಸಾವಿರ ಕೋಟಿ ರೂ. ಮೌಲ್ಯ ಮೀರಿದ ಚಿನ್ನ ಇದೆ. ತಿರುಪತಿ ಒಂದು ಸಾವಿರ ಟನ್, ಶಿರಡಿ 280 ಕೆ.ಜಿ., ಮುಂಬೈ ಗಣೇಶ, ಸ್ವರ್ಣ ದೇಗುಲ ಚಿನ್ನ ಸೇರಿ ದೇವಾಲಯಗಳಲ್ಲಿ 30 ಸಾವಿರ ಟನ್ ಚಿನ್ನ ಇದೆ. ಜನ, ರಾಜಕಾರಣಿ ಎಲ್ಲರನ್ನೂ `ಚಿನ್ನ ಕೊಡಿ' ಅಂತ ಕೇಳಿದರೆ ದೇಶಕ್ಕಾಗಿ ಕೊಡುತ್ತಾರೆ. ಆರ್.ಬಿ.ಐ. ಖರೀದಿಸಿ, ಕಂತುಗಳಲ್ಲಿ ಹಣ ನೀಡಲಿ. ಇಲ್ಲದಿದ್ದರೆ ಕಳ್ಳರ ಪಾಲಾಗುತ್ತದೆ ಈ ಚಿನ್ನ.ಕಾಲಜ್ಞಾನದಲ್ಲಿ ಹೇಳಿದೆ ಬಂಗಾರ ಮಾಯವಾಗುತ್ತೆ ಅಂತ! ಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಜನ  ಇಟ್ಟಿರುವ ಕಪ್ಪು ಹಣವನ್ನು ತರಿಸಿ; ಇಟ್ಟವರ ಮುಖಾಂತರವೇ. ಕೆಲವರು ತಂದಿದ್ದಾರೆ ನಮ್ಮ ದೇಶಕ್ಕೆ. ಬೇರೆ ದೇಶಗಳಿಂದ ನಮ್ಮಂತೆ ಪೆಟ್ರೋಲ್, ಡೀಸೆಲ್ ಖರೀದಿ ಮಾಡದೇನೆ ಚೀನಾ ಮುಂದುವರಿದಿದೆ. ಸಂಸಾರ ಒಂದಕ್ಕೆ ಒಂದೇ ಮಗು ಇದೆ. ನಮ್ಮ ದೇಶ ಈ ರೀತಿ ಮಾಡಲಿ.ದೇವರೂ ಈ ಕ್ರಮ ಸರಿ ಅಂತ ಒಪ್ಪಿಕೊಳ್ತಾನೆ. ದೇವರೇ ಜನ - ಜನವೇ ದೇವರು. ಸರ್ಕಾರ ಕೇಳಿದರೆ ದೇವಸ್ಥಾನದ ಆಡಳಿತ ಮಂಡಳಿ `ಬೇಡ' ಅನ್ನೋಲ್ಲ. ಹಸಿದವರು ಅನ್ನ ತಿನ್ನಲು ಹಾತೊರೆಯುವರು, ಚಿನ್ನವನ್ನಲ್ಲ. ದೇಶದ ಕಷ್ಟಕ್ಕೆ ತಾನೇ ಚಿನ್ನ ಇರುವುದು, ನಂತರ ಜನಗಳ ಕಷ್ಟಕ್ಕೆ. ಮೊದಲು ದೇಶ, ನಂತರ ನಾವು. ನಾವೇ ದೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry