ಇದ್ದುದರಲ್ಲೇ ಆರಾಮವಾಗಿರೋಣ

7

ಇದ್ದುದರಲ್ಲೇ ಆರಾಮವಾಗಿರೋಣ

Published:
Updated:

ಎಲ್ಲವೂ ಬೇಕೆಂಬ ಹಠ ಬೇಡ. ಇದು ನಮ್ಮ ರಾಜ್ಯದ ರೈಲುಗಳಿಗೆ ಸಂಬಂಧಪಟ್ಟದ್ದಾಗಿದೆ. ಈಗ ಹರಿಹರ-ಶಿವಮೊಗ್ಗ ರೈಲಿನ ಬಗ್ಗೆ ಚಿಂತನೆ ನಡೆಯುತ್ತಿದೆ. ಇದರಿಂದ ಆಗುವ ಒಳಿತಿಗಿಂತ ಹಾನಿಯಾಗುವುದೇ ಬಹಳ.ಬೆಲೆಯುಳ್ಳ ಕೃಷಿಭೂಮಿ ಹಾಳಾಗುತ್ತದೆ. ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಅರಣ್ಯ ನಾಶವಾಗುತ್ತದೆ. ಈಗ ಹರಿಹರ-ಶಿವಮೊಗ್ಗ ಬಸ್ಸಿನ ವ್ಯವಸ್ಥೆ ಬಹಳ ಚೆನ್ನಾಗಿದೆ. ಅದರಲ್ಲಿಯೇ ಸಮಾಧಾನ ಪಡೋಣ.ಇನ್ನೊಂದು ಹುಬ್ಬಳ್ಳಿ-ಅಂಕೋಲಾ ರೈಲು ಇದರಿಂದಲೂ ಹಾನಿಯೇ ಬಹಳ. ಬೆಲೆಯುಳ್ಳ ಅರಣ್ಯ ನಾಶವಾಗುತ್ತದೆ. ಅರಣ್ಯದಲ್ಲಿ ಗಿಡವನ್ನು ಕಡಿಯಲು ಪರವಾನಿಗೆ ಕೊಟ್ಟರೆ, ಒಂದು ಗಿಡದ ಬದಲಿಗೆ ಹತ್ತು ಗಿಡ ಕಡಿಯುತ್ತಾರೆ. ಇದು ತುಂಬಾ ಅಪಾಯಕಾರಿ ವಿಷಯ.ಹುಬ್ಬಳ್ಳಿ-ಅಂಕೋಲಾ ಬಸ್ಸು ಸೌಕರ್ಯ ಚೆನ್ನಾಗಿದೆ. ಅದರಲ್ಲಿಯೇ ಆರಾಮವಾಗಿರೋಣ. ಇನ್ನು, ದಾವಣಗೆರೆ-ತುಮಕೂರು ರೈಲಿನ ವಿಚಾರ. ಈಗ ರೈಲು ಲೈನು ಇದೆ. ದಾವಣಗೆರೆ-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಮೇಲಿವೆ. ಅದರಲ್ಲಿಯೇ ಸಮಾಧಾನ ಹೊಂದೋಣ.ಇನ್ನೊಂದು, ಧಾರವಾಡ-ಬೆಳಗಾವಿ ಲೈನು. ಅದು ಸುತ್ತಿಕೊಂಡು ಹೋಗುತ್ತಿರಬಹುದು. ಧಾರವಾಡ, ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಮೇಲಿವೆ, ಬೇರೆ ನೇರ ರೈಲಿನ ವಿಚಾರ ಬೇಡ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಮರುಚಿಂತನೆ ನಡೆಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry