ಇದ್ದೂ ಇಲ್ಲದಂತಾದ ಅಂಗನವಾಡಿ

ಶಿರಹಟ್ಟಿ: ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೆಗ್ಗಿನಭಾವನೂರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವು ಇದ್ದೂ ಇಲ್ಲದಂತಾದ ಸ್ಥಿತಿಗೆ ತಲುಪಿದೆ. ಕಾರಣ ಮಕ್ಕಳು ಇರಬೇಕಾದ ಕಟ್ಟಡದಲ್ಲಿ ಕುಟುಂಬವೊಂದು ಬೀಡುಬಿಟ್ಟಿದೆ.
ಬಡ ಮಕ್ಕಳ ಕಲಿಕೆಗಾಗಿ, ಆರೋಗ್ಯ ಸುಧಾರಣೆಗಾಗಿ ತೆರೆಯಲಾದ ಅಂಗನವಾಡಿ ಕೇಂದ್ರಕ್ಕೆ ಒದಗಿ ಬಂದಿರುವ ಸ್ಥಿತಿಯನ್ನು ಬದಲಾಯಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ ಬಡಿಗೇರ ಆಗ್ರಹಿಸಿದ್ದಾರೆ.
ಸರ್ಕಾರ ಬಡ ಮಕ್ಕಳ ಕಲಿಕೆಗಾಗಿ ಕೋಟ್ಯಂತರ ಹಣ ಸುರಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಲಾಭ ಸದುಪಯೋಗವಾಗುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯ ಹೆಚ್ಚಾಗಿರುವ ಗ್ರಾಮದಲ್ಲಿ ವ್ಯವಸ್ಥಿತವಾಗಿ ಅಂಗನವಾಡಿ ಕೇಂದ್ರವಿಲ್ಲ. ಮುಖ್ಯವಾಗಿ ಶಿಕ್ಷಕಿ ಹುದ್ದೆ ಖಾಲಿ ಇದೆ. ಶಿಕ್ಷಕಿ ಇಲ್ಲದೇ ಇರುವುದರಿಂದ ಮಕ್ಕಳಿಗೆ ಸರ್ಕಾರದ ಯಾವ ಮೂಲ ಸೌಕರ್ಯಗಳು ದೊರಕುತ್ತಿಲ್ಲ ಎಂದು ಆರೋಪಿಸಿದರು.
ಶೌಚಾಲಯ ನಿರ್ಮಾಣ ಮಾಡಿದರೂ ಅಪೂರ್ಣಗೊಂಡಿದೆ. ಅದಕ್ಕೆ ನೀರು ಪೂರೈಕೆ ವ್ಯವಸ್ಥೆ ಮಾಡಿಲ್ಲ. ಒಟ್ಟಾರೆ ಕಾಟಾಚಾರಕ್ಕಾಗಿ ಕಾಮಗಾರಿಗಳು ನಡೆದಿವೆ. ಅಂಗನವಾಡಿ ಕೇಂದ್ರವನ್ನು ದುರಸ್ತಿಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.