ಇದ್ದೂ ಇಲ್ಲದಂತಾದ ದ್ವಿತೀಯ ಘಟಕ

7

ಇದ್ದೂ ಇಲ್ಲದಂತಾದ ದ್ವಿತೀಯ ಘಟಕ

Published:
Updated:
ಇದ್ದೂ ಇಲ್ಲದಂತಾದ ದ್ವಿತೀಯ ಘಟಕ

ಬಳ್ಳಾರಿ: ರಾಜ್ಯ ಎದುರಿಸುತ್ತಿರುವ ಭೀಕರ ವಿದ್ಯುತ್ ಕೊರತೆಯನ್ನು ನಿವಾರಿ ಸಲೆಂದೇ ಆರಂಭಿಸಲಾಗಿದ್ದ ಬಳ್ಳಾರಿ ಶಾಖೋತ್ಪನ್ನ ಕೇಂದ್ರದ (ಬಿಟಿಪಿಎಸ್) ದ್ವಿತೀಯ ಘಟಕವು ಉತ್ಪಾದನೆ ಆರಂಭಿ ಸಿದ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದೆ.ಕಳೆದ ಆಗಸ್ಟ್ 27ರಿಂದ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆ ಆರಂಭಿಸಿದ್ದ ಘಟಕಕ್ಕೆ ಕಲ್ಲಿದ್ದಲು ಕೊರತೆ ಎದುರಾಗಿದ್ದು, ಕಳೆದ 10 ದಿನಗಳಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿ ಜಿ.ರತ್ನಮ್ಮ `ಪ್ರಜಾವಾಣಿ~ಗೆ ತಿಳಿಸಿದರು.`500 ಮೆಗಾವಾಟ್ (11 ದಶಲಕ್ಷ ಯೂನಿಟ್) ಉತ್ಪಾದನಾ ಸಾಮರ್ಥ್ಯದ ದ್ವಿತೀಯ ಘಟಕಕ್ಕೆ ನಿತ್ಯ 7,200 ಮೆಟ್ರಿಕ್ ಟನ್ (ಸರಕು ಸಾಗಣೆ ರೈಲಿನ ಎರಡು ರೇಕ್‌ಗಳಷ್ಟು) ಕಲ್ಲಿದ್ದಲು ಬೇಕು. ಅಲ್ಲದೆ, ಕನಿಷ್ಠ 10 ದಿನಗಳಿಗೆ ಸಾಕಾಗುವಷ್ಟು ಹೆಚ್ಚುವರಿ ಸಂಗ್ರಹ ಸಹ ಇರಬೇಕು. ಆದರೆ, ಸದ್ಯ ನಿತ್ಯವೂ ಕೇವಲ 3,600 ಟನ್ ಕಲ್ಲಿದ್ದಲು ಸರಬರಾಜು ಆಗುತ್ತಿರುವುದ ರಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಮೊದಲ ಘಟಕವನ್ನು ವಾರ್ಷಿಕ ನಿರ್ವಹಣೆಗಾಗಿ ಒಂದು ತಿಂಗಳ  ಕಾಲ  ಸ್ಥಗಿತಗೊಳಿಸಲಾಗಿತ್ತು. ಹತ್ತು ದಿನ ಗಳಿಂದ ಮೊದಲ ಘಟಕದಲ್ಲಿ ಉತ್ಪಾ ದನೆ ಪುನರಾರಂಭವಾಗಿದೆ~ ಎಂದರು.`ಆರಂಭವಾದ ಕೆಲವೇ ದಿನಗಳಲ್ಲಿ ನಿತ್ಯ 9 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದ್ದ ದ್ವಿತೀಯ ಘಟಕ, 11 ದಶಲಕ್ಷ ಯೂನಿಟ್ ಉತ್ಪಾದಿಸುವ  ಹಂತದಲ್ಲಿತ್ತು. ಆದರೆ, ಕಲ್ಲಿದ್ದಲಿನ ಕೊರತೆಯಿಂದ ಅಡ್ಡಿಯಾಗಿದೆ~ ಎಂದು ಅವರು ಹೇಳಿದರು.ತಲಾ 500 ಮೆಗಾವಾಟ್ ಸಾಮ ರ್ಥ್ಯದ ಈ ಎರಡೂ ಘಟಕಗಳು ಸತತ ವಾಗಿ ಕಾರ್ಯನಿರ್ವಹಿಸಿದರೆ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಬೇಡಿಕೆಯ ಶೇ 20ರಷ್ಟು ಪೂರೈಸಬಹುದಾಗಿದೆ. ಆದರೆ, ಇದುವರೆಗೆ ಎರಡು ಘಟಕ ಗಳಲ್ಲಿ ಏಕಕಾಲಕ್ಕೆ ಉತ್ಪಾದನೆ ಸಾಧ್ಯ ವಾಗಿಲ್ಲ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry