ಮಂಗಳವಾರ, ಏಪ್ರಿಲ್ 13, 2021
30 °C

ಇನಾಂ ಭೂಮಿ ವಿವಾದ: ಮಾರ್ಗೋಪಾಯ

ಪ್ರಜಾವಾಣಿ ವಾರ್ತೆ ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

ಕಳಸ: ಹೋಬಳಿಯ ಕೃಷಿಕ ಸಮುದಾಯವನ್ನು ಬಾಧಿಸುತ್ತಿರುವ ಇನಾಂ ವಿವಾದದ ಪರಿಹಾರಕ್ಕೆ ಇರುವ ಅವಕಾಶಗಳ ಬಗ್ಗೆ ಚಿಂತನೆ ನಡೆಸಿದಾಗ ಎರಡು  ಬಗೆಯ ಪರಿಹಾರಗಳು ಲಭ್ಯವಿದೆ.ಮೊದಲನೆಯದಾಗಿ ಹೈಕೋರ್ಟ್ ತೀರ್ಪನ್ನು ಮತ್ತು 1928ರ ಅಧಿಸೂಚನೆಯ ಕ್ರಮಬದ್ಧ ತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದು. ಎರಡನೆಯದು ರಾಜ್ಯ ಸರ್ಕಾರ ಇನಾಂ ವಿವಾದ ಬಗೆ ಹರಿಸಲು ಬದ್ಧತೆಯಿಂದ ಆಡಳಿ ತಾತ್ಮಕ ನಿರ್ಧಾರಗಳನ್ನು ತೆಗೆದು ಕೊಳ್ಳುವುದು.ಕಾನೂನು ಸಮರದ ಅವಕಾಶ ಪರಿಗಣಿಸಿದಾಗ 1928ರ ಅಧಿಸೂಚನೆಯ ನಂತರ ದೀರ್ಘಕಾಲದವರೆಗೆ  6777 ಎಕರೆ ಪ್ರದೇಶ ಅರಣ್ಯ ಇಲಾಖೆಗೆ ವರ್ಗಾವಣೆಗೊಂಡಿಲ್ಲ. ಸಂಬಂಧಪಟ್ಟ ಸೆಟ್ಲ್‌ಮೆಂಟ್ ಅಧಿಕಾರಿಯ ನೇಮಕವಾಗಿಲ್ಲ ಮತ್ತು ದೇವಸ್ಥಾನಕ್ಕೆ ಪರಿಹಾರ ಹಣದ ಪಾವತಿಯೂ ಆಗಿಲ್ಲ. ಸರ್ಕಾರದ ಯಾವ ದಾಖಲೆಗಳಲ್ಲೂ 2002ರವರೆಗೂ ವಿವಾದಿತ 6777 ಎಕರೆ ಪ್ರದೇಶ ಅರಣ್ಯ ಎಂಬ ದಾಖಲೆ ಇಲ್ಲ.2002ರ ನಂತರವಷ್ಟೇ ಪಹಣಿಯಲ್ಲಿ ಈ ಭೂಮಿಯನ್ನು  ಅರಣ್ಯ ಎಂದು ನಮೂ ದಿಸಲಾಗಿದೆ ಎಂಬುದು ಕಾನೂನಿನ ದೃಷ್ಟಿಯಲ್ಲಿ ಮಹತ್ವದ ಅಂಶ ಎಂಬುದನ್ನು ಇನಾಂ ವಿವಾದದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಎನ್.ಎಂ.ಹರ್ಷ ಹೇಳುತ್ತಾರೆ.1928ರಲ್ಲಿ 6777 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಉಸ್ತುವಾರಿಗಾಗಿ ಮಾತ್ರ ವರ್ಗಾಯಿಸಲಾಗಿದೆ. ಆದರೆ ಅದನ್ನು ಇದೀಗ ಮೀಸಲು ಅರಣ್ಯವೆಂದು ಅರ್ಥೈಸಲಾಗಿದೆ ಎಂಬ ವಾದವೂ ಇದೆ. 1933ರಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯೇ ಸ್ಥಳೀಯರಿಗೆ ಭವಿಷ್ಯದಲ್ಲಿ ಆದ್ಯತೆ ಮೇರೆಗೆ ಈ ಭೂಮಿ ಮಂಜೂರು ಮಾಡಬಹುದಾಗಿದೆ ಎಂದು ಷರಾ ಬರೆದಿದ್ದಾರೆ ಎಂಬ ಅಂಶ ಕೂಡ ಗಮನಾರ್ಹ.1970ರ ಇನಾಂ ರದ್ದತಿ ಕಾಯ್ದೆಯ ಸಂದರ್ಭ ದಲ್ಲಿ ದೇವಸ್ಥಾನದ 14,357 ಎಕರೆ ಭೂಮಿ ಯನ್ನು ಸರ್ಕಾರ ವಶಪಡಿಸಿಕೊಂಡಿತು. ಆಗಲೂ ಮೇಲಿನ 6,777 ಎಕರೆ ದೇವಸ್ಥಾನದ ವಶದಲ್ಲೇ ಇತ್ತು ಎಂಬುದು ಕೂಡ ಮಹತ್ವದ ಅಂಶವೇ. ಮೇಲಿನ ಅಂಶಗಳು ಕಾನೂನು ಸಮರದ ಸಂದರ್ಭ ದಲ್ಲಿ ಕೃಷಿಕರ ನೆರವಿಗೆ ಬರಬಹುದು.ಒಂದು ವೇಳೆ ಕಾನೂನು ಸಮರದಲ್ಲಿ ಕೃಷಿಕರ ವಿರುದ್ಧ ತೀರ್ಪು ಬಂದರೆ ಆನಂತರ ರಾಜ್ಯ ಸರ್ಕಾರವೇ ಕೃಷಿಕರ ನೆರವಿಗೆ ಬರಬೇಕಲ್ಲದೆ ಬೇರೆ ದಾರಿ ಇಲ್ಲ. 1 ಸಾವಿರಕ್ಕೂ ಹೆಚ್ಚು ಕುಟುಂಬಗಳ 5 ಸಾವಿರಕ್ಕೂ ಹೆಚ್ಚು ಜನರ ಅಸ್ತಿತ್ವದ ಪ್ರಶ್ನೆ ಆಗಿರುವುದರಿಂದ ರಾಜ್ಯ ಸರ್ಕಾರ 1928ರ ಅಧಿಸೂಚನೆ ರದ್ದುಗೊಳಿಸುವ ಅಧಿಕಾರ ಬಳಕೆ ಮಾಡುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆ.ರಾಜ್ಯ ಸರ್ಕಾರವು ವಿವಾದಿತ ಭೂಮಿಯನ್ನು ಕೃಷಿಕರಿಗೇ ಮಂಜೂರು ಮಾಡುವ ಬಗ್ಗೆ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಈ ಬಗ್ಗೆ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ರವಾನಿ ಸಬೇಕು. ಕೇಂದ್ರ ಸಚಿವ ಸಂಪುಟವೂ ಇದಕ್ಕೆ ಅನು ಮೋದನೆ ನೀಡಿದರೆ ಇಲ್ಲಿನ ಕೃಷಿಕರಿಗೆ ಅವರು ಸಾಗು ವಳಿ ಮಾಡಿದ ಭೂಮಿಯ ಒಡೆತನ ನೀಡಲು ಸಾಧ್ಯ ಎಂಬ ಪರಿಹಾರ ಮಾರ್ಗವೂ ಕೇಳಿಬರುತ್ತಿದೆ. ಇನ್ನು ಕೃಷಿಕರ ವಿರುದ್ಧ ನ್ಯಾಯಾಲ ಯದಲ್ಲಿ ತೀರ್ಪು ಬಂದರೂ ಪಾರಂಪರಿಕ ಅರಣ್ಯ ಕಾಯ್ದೆ ಯ ಅನ್ವಯ ಕೃಷಿಕರನ್ನು ಅರಣ್ಯದಲ್ಲೇ ಉಳಿಸುವ ದಾರಿಯೂ ಮುಕ್ತವಾಗಿದೆ. ಹೀಗೆ ಸಾವಿರಕ್ಕೂ ಹೆಚ್ಚು ಕುಟುಂಬಗಳ ಭವಿಷ್ಯದ ಬಗೆಗಿನ ಚಿಂತೆ ದೂರವಾಗಿಸಲು ಮಾರ್ಗಗಳು ಇವೆ. ಆದರೆ ಇನಾಂ ವಿವಾದ ಪರಿಹರಿಸುವ ಬಗ್ಗೆ ಕೆ.ಎ.ಎಸ್. ಶ್ರೇಣಿಯ ಅಧಿಕಾರಿಯನ್ನು ನೇಮಕ ಮಾಡುವುದಾಗಿ ಭರವಸೆ ನೀಡಿ ಅದನ್ನು ಮರೆತ ಸರ್ಕಾರದ ಬದ್ಧತೆಯ ಬಗೆಗಿನ ಅನುಮಾನ ದಟ್ಟವಾಗಿದೆ. ಅದು ಈ ಕ್ಷಣದಲ್ಲಿ ಇನಾಂ ಸಾಗುವಳಿದಾರರ ಚಿಂತೆ ಇನ್ನಷ್ಟು ಹೆಚ್ಚಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.