`ಇನ್ನಷ್ಟು ಅಧಿಕ ಮೊತ್ತ ಪೇರಿಸಬೇಕಿತ್ತು'

7

`ಇನ್ನಷ್ಟು ಅಧಿಕ ಮೊತ್ತ ಪೇರಿಸಬೇಕಿತ್ತು'

Published:
Updated:

ಬೆಂಗಳೂರು: ಉತ್ತಮ ಆರಂಭದ ಹೊರತಾಗಿಯೂ ಸವಾಲಿನ ಮೊತ್ತ ಪೇರಿಸಲು ವಿಫಲವಾದದ್ದು ಪಾಕಿಸ್ತಾನ ವಿರುದ್ಧದ ಸೋಲಿಗೆ ಕಾರಣ ಕಾರಣ ಎಂದು ಮಹೇಂದ್ರ ಸಿಂಗ್ ದೋನಿ ನುಡಿದಿದ್ದಾರೆ.ಇಂತಹ ಪಿಚ್‌ನಲ್ಲಿ ಗೆಲುವಿಗೆ ಕನಿಷ್ಠ 145 ರನ್‌ಗಳಾದರೂ ಅಗತ್ಯ ಎಂದು ಭಾರತ ತಂಡದ ನಾಯಕ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು. `ನಮ್ಮ ತಂಡ ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳು ಶ್ರೇಷ್ಠ ಪ್ರದರ್ಶನ ತೋರಿದರು. ಆದರೆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳು ಬಿದ್ದವು. 10 ಅಥವಾ 15 ರಷ್ಟು ಅಧಿಕ ರನ್ ಪೇರಿಸಿದ್ದರೆ, ಗೆಲುವು ಸಾಧಿಸುವ ಅವಕಾಶವಿತ್ತು' ಎಂದರು.`ಅದೆ ರೀತಿ ನಮ್ಮ ಬೌಲರ್‌ಗಳು ಎದುರಾಳಿಗೆ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟರು' ಎಂದ ದೋನಿ ಯಾರ ಹೆಸರನ್ನೂ ಹೇಳಲು ಬಯಸಲಿಲ್ಲ. ರವೀಂದ್ರ ಜಡೇಜ ಮತ್ತು ಯುವರಾಜ್ ಸಿಂಗ್ ರನ್ ನಿಯಂತ್ರಿಸುವಲ್ಲಿ ವಿಫಲರಾಗಿದ್ದರು.ಭಾರತ ಈ ಪಂದ್ಯದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮೂವರು ಸ್ಪೆಶಲಿಸ್ಟ್ ಬೌಲರ್‌ಗಳೊಂದಿಗೆ ಕಣಕ್ಕಿಳಿದಿತ್ತು. ದೋನಿ ಅವರ ಈ ಯೋಜನೆ ತಲೆಕೆಳಗಾಯಿತು.ಸಂತಸ ನೀಡಿದ ಗೆಲುವು: ಮಹತ್ವದ ಪಂದ್ಯದಲ್ಲಿ ಗೆಲುವು ಪಡೆಯಲು ಸಾಧ್ಯವಾದದ್ದು ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ಹಫೀಜ್‌ಗೆ ಸಹಜವಾಗಿ ಸಂತಸ ನೀಡಿದೆ. ಆಕರ್ಷಕ ಅರ್ಧಶತಕದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಫೀಜ್ `ಪಂದ್ಯಶ್ರೇಷ್ಠ' ಗೌರವವನ್ನೂ ತಮ್ಮದಾಗಿಸಿಕೊಂಡರು.`ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸುವುದು ನಮ್ಮ ಉದ್ದೇಶವಾಗಿತ್ತು. ಮೊಹಮ್ಮದ್ ಇರ್ಫಾನ್ ಚೊಚ್ಚಲ ಟಿ-20 ಪಂದ್ಯದಲ್ಲೇ ಎಲ್ಲರ ಗಮನ ಸೆಳೆದರು. ಉಮರ್ ಗುಲ್ ನಮ್ಮ ತಂಡದ ಪ್ರಮುಖ ಬೌಲರ್. ಅವರು ನಿರೀಕ್ಷೆ ಹುಸಿಗೊಳಿಸಲಿಲ್ಲ' ಎಂದು ಹಫೀಜ್ ಪ್ರತಿಕ್ರಿಯಿಸಿದರು.`ಭಾರತವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದೆವು. ಆ ಬಳಿಕ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಿದೆವು. ಗೆಲುವಿನ ಸಾಧ್ಯತೆ ಇದೆ ಎಂಬುದು ಖಚಿತವಾದ ಬಳಿಕ ದೊಡ್ಡ ಹೊಡೆತಗಳಿಗೆ ಮುಂದಾದೆವು. ಈ ಗೆಲುವು ಪಾಕಿಸ್ತಾನದ ಜನತೆಗೆ ಉಡುಗೊರೆ' ಎಂದರು.ಒತ್ತಡದ ಸಂದರ್ಭದಲ್ಲಿ ಉತ್ತಮ ಆಟವಾಡಲು ಸಾಧ್ಯವಾದದ್ದು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಅಜೇಯ ಅರ್ಧಶತಕ ಗಳಿಸಿದ ಶೋಯಬ್ ಮಲಿಕ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry