ಶನಿವಾರ, ಮೇ 15, 2021
29 °C

ಇನ್ನಾದರೂ ವೀಳ್ಯದೆಲೆಗೆ ಬಂದೀತೆ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಇಲ್ಲಿನ ಯರಗೇರಾ, ಕುಂಬಳಾವತಿ, ಮದ್ನಾಳ, ಮಡಿಕೇರಿ ಸೇರಿದಂತೆ ಹಲವಾರು ಗ್ರಾಮಗಳ ರೈತರು ಗುಟ್ಕಾ ನಿಷೇಧಿಸಿದ್ದರಿಂದ ಎಲೆಗೆ ಮತ್ತೆ ಬೆಲೆ ಬಂದಿತೇ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.ಕಳೆದ ಎರಡು ದಶಕಗಳ ಹಿಂದೆ ಗುಟ್ಕಾ, ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ಅಂಗಡಿಗಳಲ್ಲಿ ಹಾಜರಾಗುತ್ತಿದ್ದಂತೆ ಅ್ಲ್ಲಲಿಯವರೆಗೆ ಎಲೆಯನ್ನೆ ನಂಬಿದ್ದ ವೃದ್ಧರಾದಿಯಾಗಿ ಹಳ್ಳಿಗರು ತಮ್ಮ ಎಲೆಚೆಂಚಿ(ಚೀಲ) ಎಸೆದು ಬಣ್ಣದ ಚೀಟುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದರಿಂದ ಕ್ರಮೇಣ ಎಲೆ ತನ್ನ ಬೆಲೆ ಕಳೆದುಕೊಳ್ಳುವಂತಾಗಿತ್ತು.ಈಗಲೂ ತಿಂಗಳಿಗೆ ಹತ್ತು ಸಾವಿರಕ್ಕೂ ಹೆಚ್ಚು ಎಲೆ ಪೆಂಡಿಗಳು ಸುತ್ತಲಿನ ಪಟ್ಟಣಗಳಿಗೆ ಹೋಕ್ತಾವ್ರಿ, ಗುಟ್ಕಾದ ಸಮಸ್ಯೆಯ ಜೊತೆಗೆ ಆಂಧ್ರದ ಎಲೆ ಮಾರುಕಟ್ಟೆಯಲ್ಲಿ ಮೇಲಾಟ ನಡೆಸುತ್ತಿರುವುದರಿಂದ ಎಲೆಗೆ ಬೆಲೆ ಇಲ್ಲದಂತಾಗಿದೆ. ಶ್ರಾವಣ ಮಾಸದ ಸೀಜನನಲ್ಲಿ ಎಲೆ ಹೆಚ್ಚು ಇಳುವರಿ ಬರುತ್ತೆ. ಆಗ ಸ್ವಲ್ಪು ರೇಟ್ ಹೆಚ್ಚಿರುತ್ತೆ. ಗುಟ್ಕಾ ನಿಷೇಧಿಸಿದ್ದರಿಂದ ಮುಂದೆ ಇಡೀ ವರ್ಷ ಶ್ರಾವಣ ಮಾಸದ ಸೀಜನ್ ನೋಡ್ರಿ ಎಂದು ಕುಂಬಳಾವತಿಯ ಯಲ್ಲನಗೌಡ, ಯರಗೇರಿಯ ಧರ್ಮಣ್ಣ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.