ಇನ್ನು ಆನ್‌ಲೈನ್ ಹರಾಜು

7

ಇನ್ನು ಆನ್‌ಲೈನ್ ಹರಾಜು

Published:
Updated:

ಬೆಂಗಳೂರು: ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರಿಗೆ ಮತ್ತೊಂದು ಅವಕಾಶವಿದೆ. ಅದು ಆನ್‌ಲೈನ್ ಹರಾಜು!`ಪ್ರತಿ ತಂಡಗಳು ತಲಾ 11 ಮಂದಿ ವಿದೇಶಿ ಆಟಗಾರರನ್ನು ಹೊಂದಬಹುದು. ಕಡಿಮೆ ಇದ್ದವರು ಆನ್‌ಲೈನ್ ಮೂಲಕ ಹರಾಜಿಗೆ ಬಿಡ್ ಸಲ್ಲಿಸಬಹುದು~ ಎಂದು ಐಪಿಎಲ್ ಆಡಳಿತ ತಿಳಿಸಿದೆ.`ಈಗ ಒಟ್ಟು 119 ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಇದರಲ್ಲಿ ಭಾರತದ ವಿ.ವಿ.ಎಸ್.ಲಕ್ಷ್ಮಣ್ ಹಾಗೂ ವಿ.ಆರ್.ವಿ.ಸಿಂಗ್ ಇದ್ದಾರೆ. ಹಾಗಾಗಿ ಯಾರಿಗೆ ಈ ಆಟಗಾರರು ಬೇಕು ಹಾಗೂ ಎಷ್ಟು ಹಣ ನೀಡುತ್ತಿರಿ ಎಂಬುದನ್ನು ನಮಗೆ ತಿಳಿಸಬೇಕು~ ಎಂದು ಐಪಿಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ ರಾಜನ್ ಹೇಳಿದ್ದಾರೆ.ಪ್ರತಿ ತಂಡ ಒಟ್ಟು 33 ಆಟಗಾರರನ್ನು ಹೊಂದಲು ಅವಕಾಶವಿದೆ. ಇದರಲ್ಲಿ 11 ವಿದೇಶಿ ಆಟಗಾರರು ಇರಬಹುದು. ಆದರೆ ಆಡುವ 11 ಮಂದಿಯಲ್ಲಿ ವಿದೇಶದ 4 ಆಟಗಾರರಿಗೆ ಮಾತ್ರ ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry