ಇನ್ನು ಚಾಲಕರಿಗೆ ಮೊಬೈಲೇ ನಿಷ್ಠ ಸಹಾಯಕ..!

7

ಇನ್ನು ಚಾಲಕರಿಗೆ ಮೊಬೈಲೇ ನಿಷ್ಠ ಸಹಾಯಕ..!

Published:
Updated:

ನ್ಯೂಯಾರ್ಕ್ (ಪಿಟಿಐ): ಮುಂದಿನ ದಿನಗಳಲ್ಲಿ ವಾಹನ ಚಾಲಕರಿಗೆ ಮೊಬೈಲ್ ಫೋನೇ ನಿಷ್ಠ ಸಹಾಯಕ!ಇಂತಹ ಸ್ಮಾರ್ಟ್‌ಫೋನ್ ತಂತ್ರಾಂಶವನ್ನು ಇದೀಗ ಅಭಿವೃದ್ಧಿಪಡಿಸಲಾಗಿದೆ. ವಾಹನ ಚಾಲಕರು ನಿದ್ದೆಗೆ ಜಾರುತ್ತಿದ್ದಂತೆಯೇ ಅಥವಾ ಚಾಲನಾ ರೀತಿಯಲ್ಲಿ ವ್ಯತ್ಯಾಸ ಕಾಣುತ್ತಿದ್ದಂತೆಯೇ ಇದು ಮಿಣುಕು ದೀಪಗಳನ್ನು ಮಿನುಗಿಸಿ ಅಥವಾ ಬೀಪ್ ಶಬ್ದಗಳನ್ನು ಹೊರಡಿಸಿ ಎಚ್ಚರಿಕೆ  ನೀಡಲಿದೆ. ವಾಹನದ ಡ್ಯಾಶ್ ಬೋರ್ಡ್ ಮೇಲೆ ಇರಿಸಲಾಗುವ ಎರಡೂ ಭಾಗಗಳಲ್ಲಿ ಪ್ರತ್ಯೇಕ ಕ್ಯಾಮೆರಾ ಹೊಂದಿರುವ ಆಧುನಿಕ ಫೋನ್‌ಗಳಿಗೆ ಈ ತಂತ್ರಾಂಶ ಅಳವಡಿಸಿದರೆ, ಅದು ಚಾಲಕನ ಶಿರದ ಭಂಗಿ, ಕಣ್ಣು, ರೆಪ್ಪೆ ಮಿಟುಕಿಸುವ ಅವಧಿ ಇತ್ಯಾದಿಗಳ ಮೇಲೆ ನಿಗಾ ಇರಿಸಿರುತ್ತದೆ. ಒಮ್ಮೆ ಇವುಗಳಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣ ಎಚ್ಚರಿಕೆ ದೀಪ ಮಿಣುಕಿಸಿ ಮುನ್ಸೂಚನೆ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry