ಇನ್ನೂ ನಿರ್ಧಾರವಾಗದ ನಾಯಕತ್ವ

7

ಇನ್ನೂ ನಿರ್ಧಾರವಾಗದ ನಾಯಕತ್ವ

Published:
Updated:

ಕರಾಚಿ (ಪಿಟಿಐ): ವಿಶ್ವಕಪ್ ಕ್ರಿಕೆಟ್‌ಗೆ ಪಾಕಿಸ್ತಾನದ ಅಂತಿಮ ಹದಿನೈದು ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ ತಂಡಕ್ಕೆ ನಾಯಕ ಯಾರೆನ್ನುವುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ.ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ರಾಷ್ಟ್ರೀಯ ಆಯ್ಕೆ ಸಮಿತಿಯು ತಂಡವನ್ನು ಪ್ರಕಟಿಸುವ ಜೊತೆಗೆ ನಾಯಕನ ಹೆಸರನ್ನೂ ಪ್ರಕಟಿಸುವ ದಿಟ್ಟತನ ತೋರಿಲ್ಲ. ಈ ವಿಷಯದಲ್ಲಿ ಸಾಕಷ್ಟು ಗೊಂದಲ ಇರುವ ಕಾರಣ ಇನ್ನೂ ಕೆಲವು ದಿನಗಳ ನಂತರವೇ ಈ ವಿಷಯವಾಗಿ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.ಆಯ್ಕೆ ಸಮಿತಿಯು ಅಚ್ಚರಿಯೊಂದನ್ನು ನೀಡಿದೆ. 90 ಟೆಸ್ಟ್ ಹಾಗೂ 288 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಮೊಹಮ್ಮದ್ ಯೂಸುಫ್ ಅವರನ್ನು ತಂಡದಿಂದ ಹೊರಗಿಡುವ ಮೂಲಕ ಬೆರಗುಗೊಳ್ಳುವಂತೆ ಮಾಡಿದೆ. ಯೂಸುಫ್ ಬದಲಿಗೆ ಅಸದ್ ಶಫೀಕ್‌ಗೆ ಸ್ಥಾನ ನೀಡಲಾಗಿದೆ.ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ರಚಿಸಲಾದ ತಂಡದಲ್ಲಿ ಒಂದಿಷ್ಟೂ ಬದಲಾವಣೆ ಮಾಡಿಲ್ಲ. ದೇಶಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಲಾಹೋರ್ ತಂಡವನ್ನು ಮುನ್ನಡೆಸುತ್ತಿರುವ ಯೂಸುಫ್‌ಗೆ ಸ್ಥಾನ ದೊರೆಯುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.ನಾಯಕನ ಆಯ್ಕೆ ಕುರಿತು ಇನ್ನೂ ಚರ್ಚೆ ನಡೆದಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಟ್ವೆಂಟಿ-20 ಹಾಗೂ ಏಕದಿನ ತಂಡಕ್ಕೆ ನಾಯಕರಾಗಿರುವ ಶಾಹೀದ್ ಆಫ್ರಿದಿ ಅವರೇ ಈ ಸ್ಥಾನಕ್ಕೆ ಸೂಕ್ತವೆನ್ನುವ ಅಭಿಪ್ರಾಯ ಬಲವಾಗಿದೆ. ಆದರೆ ಟೆಸ್ಟ್ ತಂಡದ ನಾಯಕ ಮಿಸ್ಬಾಹ್ ಉಲ್ ಹಕ್ ಅವರಿಗೆ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುವ ಹೊಣೆ ನೀಡಬೇಕು ಎನ್ನುವ ಯೋಚನೆಯು ಕ್ರಿಕೆಟ್ ಮಂಡಳಿಯಲ್ಲಿ ಮೊಳಕೆಯೊಡೆದಿದೆ.ತಂಡ : ಮೊಹಮ್ಮದ್ ಹಫೀಜ್, ಅಹ್ಮದ್ ಶೆಹ್ಜಾದ್, ಯೂನಿಸ್ ಖಾನ್, ಮಿಸ್ಬಾಹ್ ಉಲ್ ಹಕ್, ಉಮರ್ ಅಕ್ಮಲ್, ಅಸದ್ ಶಫೀಕ್, ಕಮ್ರನ್ ಅಕ್ಮಲ್, ಶಾಹಿದ್ ಆಫ್ರಿದಿ, ಅಬ್ದುಲ್ ರಜಾಕ್, ಅಬ್ದುರ್ರಹಮಾನ್, ಸಯೀದ್ ಅಜ್ಮಲ್, ಶೋಯಬ್ ಅಖ್ತರ್, ಉಮರ್ ಗುಲ್, ವಹಾಬ್ ರಿಯಾಜ್, ಸೊಹೇಲ್ ತನ್ವೀರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry