ಭಾನುವಾರ, ಮೇ 9, 2021
25 °C

ಇನ್ನೂ ಬಾರದ ಕೊಲ್ಹಾರ ಯಾತ್ರಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಹಾರ (ವಿಜಾಪುರ ಜಿಲ್ಲೆ):  ಉತ್ತರ ಭಾರತಕ್ಕೆ ಪ್ರವಾಸ ಕೈಕೊಂಡಿರುವ ಕೊಲ್ಹಾರದ ಯಾತ್ರಿಕರು ಇನ್ನೂ ಮರಳಿ ಊರಿಗೆ ಬಾರದೇ ಇರುವುದರಿಂದ ಅವರ ಕುಟುಂಬದವರಲ್ಲಿ ಆತಂಕ ಮೂಡಿದೆ.ಇಲ್ಲಿಯ ಜಯತೀರ್ಥ ನರಸಿಂಹ ಕಟ್ಟಿ ಹಾಗೂ ಅವರ ಪತ್ನಿ ಮಂಗಲಾ ಜಯತೀರ್ಥ ಕಟ್ಟಿ ಮತ್ತು ಭೀಮಸೇನ ಶ್ರಿನಿವಾಸ ಪಾಶ್ಚಾಪುರ, ಅವರ ಪತ್ನಿ ಕಮಲಾ ಭೀಮಸೇನ ಪಾಶ್ಚಾಪುರ ಅವರು ವಿಜಾಪುರದಲ್ಲಿರುವ ತಮ್ಮ ಸಮಾಜದ ಬಂಧುಗಳೊಂದಿಗೆ 15 ದಿನಗಳ ಕಾಲ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಾರೆ.ಬದರಿನಾಥ ಸಮೀಪದ ಬಾಂದ್ರಾದಲ್ಲಿರುವ ಪೇಜಾವರ ಮಠದಲ್ಲಿ ಆಶ್ರಯ ಪಡೆದಿದ್ದೇವೆ ಎಂದು ಹೇಳುತ್ತಾರಾದರೂ ಅವರು ಖಚಿತವಾಗಿ ಎಲ್ಲಿದ್ದಾರೆಂಬುದು ತಿಳಿಯದೇ ಕೊಲ್ಹಾರದಲ್ಲಿರುವ ಜಯತೀರ್ಥರ ಮಗ ಪ್ರಮೋದ ಕಟ್ಟಿ ಮತ್ತು ಕುಟುಂಬದವರು ಚಿಂತೆಗೀಡಾಗಿದ್ದಾರೆ.`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪ್ರಮೋದ ಕಟ್ಟಿ, `ಮೊಬೈಲ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದಿದ್ದೇವೆ ಎಂದು ತಂದೆಯವರು ತಿಳಿಸುವಷ್ಟರಲ್ಲಿಯೇ ಸಂಪರ್ಕ ಕಡಿದು ಹೋಯಿತು. ಅವರು ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಪರಿಹಾರ ಕಾರ್ಯದಲ್ಲಿ ತೊಡಗಿರುವ ರಾಜ್ಯದ ಅಧಿಕಾರಿಗಳಾದ ಹೇಮಂತಕುಮಾರ ನಿಂಬಾಳ್ಕರ್ ಹಾಗೂ ಕರೀಗೌಡರನ್ನು ನಂತರ ಸಂಪರ್ಕಿಸಿ ಮಾತನಾಡಿದ್ದೇನೆ. ಅವರಿಂದ ತಮ್ಮ ಪಾಲಕರ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿದೆ. ಡೆಹ್ರಾಡೂನ್ ಮಾರ್ಗವಾಗಿ ದೆಹಲಿಗೆ ಕಳುಹಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.  ಆಸ್ತಮಾದಿಂದ ಬಳಲುತ್ತಿರುವ ತಂದೆಯವರ ತೊಂದರೆಯಾಗಬಹುದು ಎಂಬುದು ಆತಂಕಕ್ಕೆ ಕಾರಣ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.