ಇನ್ನೂ 3 ತಿಂಗಳು ಬೆಲೆ ಏರಿಕೆ ಬಿಸಿ!

ಶನಿವಾರ, ಜೂಲೈ 20, 2019
28 °C

ಇನ್ನೂ 3 ತಿಂಗಳು ಬೆಲೆ ಏರಿಕೆ ಬಿಸಿ!

Published:
Updated:

ಚೆನ್ನೈ (ಪಿಟಿಐ): `ದೇಶದ ಜನತೆ ಇನ್ನೂ ಮೂರು ತಿಂಗಳವರೆಗೆ ಬೆಲೆ ಏರಿಕೆ ಬಿಸಿ ಅನುಭವಿಸಲೇಬೇಕು. ಹಣದುಬ್ಬರ ಸದ್ಯಕ್ಕೇನೂ ಇಳಿಯುವ ಸೂಚನೆ ಕಾಣುತ್ತಿಲ್ಲ~ ಎಂದು ಹಿರಿಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಹೇಳಿದ್ದಾರೆ.`ಆಹಾರ ಹಣದುಬ್ಬರ ದರ ಸೆಪ್ಟೆಂಬರ್ ವೇಳೆಗೆ ಶೇ 7ರ ಗಡಿಯತ್ತ ಬರುವ ಸೂಚನೆ ಇದೆ. ಅಲ್ಲಿವರೆಗೂ ಜನತೆ ಬೆಲೆ ಏರಿಕೆಯ ಹೊರೆ ಅನುಭವಿಸುವುದು ಅನಿವಾರ್ಯ~ ಎಂದು ಅವರು ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಯೋಜಿಸಿದ್ದ ಸಭೆಯಲ್ಲಿ ಅಭಿಪ್ರಾಯಪಟ್ಟರು.ಪೂರೈಕೆ ಭಾಗದಲ್ಲಿನ ಲೋಪಗಳನ್ನು ಸರಿಪಡಿಸುವುದು ಸೇರಿದಂತೆ ಸರ್ಕಾರ ಹಣದುಬ್ಬರ ತಗ್ಗಿಸಲು ಹಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಪೆಟ್ರೋಲ್ ಮತ್ತು ತರಕಾರಿಗಳ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಿದೆ.ಈ ಹಿನ್ನೆಲೆಯಲ್ಲಿ `ಆರ್‌ಬಿಐ~ ಇತ್ತೀಚೆಗೆ ಪ್ರಕಟಿಸಿದ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ಬಡ್ಡಿ ದರವನ್ನು ತಗ್ಗಿಸಲಿಲ್ಲ ಎಂದು ವಿಶ್ಲೇಷಿಸಿದರು. ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಣದುಬ್ಬರ ಕನಿಷ್ಠ ಮಟ್ಟದಲ್ಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry