ಇನ್ನೊಂದು ಮುತ್ತಿನಕಥೆ

7

ಇನ್ನೊಂದು ಮುತ್ತಿನಕಥೆ

Published:
Updated:
ಇನ್ನೊಂದು ಮುತ್ತಿನಕಥೆ

`ಜನ್ನತ್ 2~ ಕ್ರೈಂ-ಥ್ರಿಲ್ಲರ್ ಕಥಾಹಂದರವುಳ್ಳ ಸಿನಿಮಾ. ಇದು 2008ರಲ್ಲಿ ಯಶಸ್ಸು ಕಂಡ `ಜನ್ನತ್~ ಚಿತ್ರದ ಮುಂದುವರಿದ ಭಾಗ. ಇದಕ್ಕೆ ವಿಶೇಷ್ ಭಟ್ ಕಥೆ ಹೆಣೆದಿದ್ದು, ಕುನಾಲ್ ದೇಶ್‌ಮುಖ್ ನಿರ್ದೇಶಿಸಿದ್ದಾರೆ. ಮಹೇಶ್ ಭಟ್ ಹಾಗೂ ಮುಖೇಶ್ ಭಟ್ ನಿರ್ಮಾಪಕರು.ಈ ಚಿತ್ರದಲ್ಲಿ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಹಾಗೂ ನಟಿ ಇಶಾ ಗುಪ್ತಾ ಕೆಮಿಸ್ಟ್ರಿ ಸಖತ್ತಾಗಿ ವರ್ಕೌಟ್ ಆಗಿದೆಯಂತೆ. ಚಿತ್ರದ ಸ್ಟಿಲ್‌ಗಳಲ್ಲೇ ಇದು ಢಾಳಾಗಿ ಕಾಣುತ್ತಿದೆ ಎಂಬುದು ಬಾಲಿವುಡ್ಡಿಗರ ಅಂಬೋಣ. ಹಶ್ಮಿ ಸಿನಿಮಾದಲ್ಲಿ ಬೆಡ್‌ರೂಂ ಸೀನ್‌ಗಳಿಗೇನೂ ಬರವಿಲ್ಲ. `ಜನ್ನತ್ 2~ನಲ್ಲೂ ಅದಕ್ಕೆ ಕೊರತೆ ಇಲ್ಲ. ಹಾಗಾಗಿ ಈತನ ಅಭಿಮಾನಿಗಳು ಚಿತ್ರ ನೋಡಲು ಕಾತರಿಸುತ್ತಿದ್ದಾರಂತೆ.ಮೊದಲ ಬಾರಿ ಮುಖಕ್ಕೆ ಬಣ್ಣ ಹಚ್ಚುತ್ತಿರುವ ಇಶಾ ಗುಪ್ತಾ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ಟೈಟಲ್‌ನ್ನು ಮುಡಿಗೇರಿಸಿಕೊಂಡವಳು. 2010ರಲ್ಲಿ ಈಕೆ ಕಿಂಗ್‌ಫಿಷರ್ ಕ್ಯಾಲೆಂಡರ್‌ಗೂ ಮೈ ಒಡ್ಡಿ ದೇಹಸಿರಿ ಪ್ರದರ್ಶಿಸಿದ್ದಳು. ಈಕೆ ಬಿ-ಟೌನ್‌ಗೆ ಕಾಲಿಡುವುದಕ್ಕೂ ಮುಂಚೆ ರ‌್ಯಾಂಪ್ ಮೇಲೆ ಕ್ಯಾಟ್‌ವಾಕ್ ಮಾಡುತ್ತಿದ್ದಳು.ಮಾಡೆಲಿಂಗ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದಳು. ಮಾಸ್ ಕಮ್ಯುನಿಕೇಷನ್ ಓದಿರುವ ಈ ಹುಡುಗಿ ಕಥಕ್ ಮತ್ತು ಜಾಸ್ ನೃತ್ಯದಲ್ಲೂ ಪಳಗಿದ್ದಾಳೆ. ಅಂದಹಾಗೆ, `ಜನ್ನತ್ 2~ನಲ್ಲಿ ಹಶ್ಮಿ ಜತೆ ನಟಿಸುವಾಗ ಸಿಕ್ಕ ರೋಚಕ ಅನುಭವ ಈಕೆಗೆ ಥ್ರಿಲ್ ನೀಡಿದೆಯಂತೆ. ರಣ್‌ದೀಪ್ ಹೂಡಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಮೇ 4ಕ್ಕೆ ತೆರೆಕಾಣಲಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry