ಇನ್ನೊಂದು ವರ್ಷ ನಟನೆ ಇಲ್ಲ

7

ಇನ್ನೊಂದು ವರ್ಷ ನಟನೆ ಇಲ್ಲ

Published:
Updated:
ಇನ್ನೊಂದು ವರ್ಷ ನಟನೆ ಇಲ್ಲ

ತಾಯ್ತನ ಅಂದ್ರೆ ಸುಲಭವಲ್ಲ. ಅದು ಸಂಪೂರ್ಣ ಸಮಯವನ್ನು ಬಯಸುತ್ತದೆ. ಹಾಗಾಗಿ ಇನ್ನೊಂದು ವರ್ಷ ನಟಿಸುವುದಿಲ್ಲ ಅಂತ ಶಿಲ್ಪಾ ಶೆಟ್ಟಿ ಹೇಳುತ್ತಿದ್ದಾರೆ.

“ಮಗ ವಿಯಾನ್ ಜೊತೆಗೆ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ.ನಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅದೀಗ ಅಸಾಧ್ಯವಾಗುತ್ತದೆ. ಹಾಗೆಂದು ನಾನು ಏನೂ ಮಾಡುತ್ತಿಲ್ಲ ಎಂದರ್ಥವಲ್ಲ. ನನ್ನ ವ್ಯವಹಾರಗಳತ್ತ ಗಮನ ಹರಿಸತೊಡಗಿದ್ದೇನೆ. ಇನ್ನಿತರ ವಾಣಿಜ್ಯ ವಹಿವಾಟಿನತ್ತಲೂ ಗಮನ ಹರಿಸುತ್ತಿದ್ದೇನೆ.ನನ್ನ ಸ್ಪಾದ `ಫ್ರಾಂಚೈಸಿ~ಗಳನ್ನು ಇತರ ನಗರಗಳಲ್ಲಿಯೂ ತೆರೆಯುವ ಯೋಜನೆ ಇದೆ. ಆ ಯೋಜನೆಗಳನ್ನು  ಕಾರ್ಯರೂಪಕ್ಕೆ ತರಬೇಕಿದೆ. ಇವಕ್ಕೆಲ್ಲ ಸಮಯ ಹೊಂದಿಸಿಕೊಳ್ಳಬಲ್ಲೆ. ಆದರೆ ನಟನೆ ಹಾಗಲ್ಲ. ವಿಯಾನ್ ಇನ್ನಷ್ಟು ದೊಡ್ಡವನಾದ ಮೇಲೆ ಆ ಬಗ್ಗೆ ಯೋಚಿಸುವೆ~ ಎಂದು 37ರ ಹೊಸ್ತಿಲಲ್ಲಿರುವ ಶಿಲ್ಪಾ ಹೇಳಿದ್ದಾರೆ.`ಈಗ ಮದುವೆಯ ನಂತರ ಹೀರೊಯಿನ್‌ಗೆ ಕಾಲವಿಲ್ಲ ಎಂಬಂತೇನೂ ಇಲ್ಲ. ಕರಿಶ್ಮಾ ವಾಪಸ್ ಬಂದರು. ಶ್ರೀದೇವಿ ಸಹ ಮರಳಿದರು. ನಮಗೆ ಹೊಂದುವ ಪಾತ್ರ ಮತ್ತು ಸ್ಕ್ರಿಪ್ಟ್ ಬಂದರೆ ಖಂಡಿತವಾಗಿಯೂ ನಟನೆಯಲ್ಲಿ ಮುಂದುವರಿಯುತ್ತೇನೆ. ರಾಜ್‌ಗೆ ಸಹ ಈ ಬಗ್ಗೆ ಏನೂ ತಕರಾರಿಲ್ಲ~ ಎಂದು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry