ಇನ್ನೊಬ್ಬ ಮಹಿಳಾ ನ್ಯಾಯಮೂರ್ತಿ

7

ಇನ್ನೊಬ್ಬ ಮಹಿಳಾ ನ್ಯಾಯಮೂರ್ತಿ

Published:
Updated:

ಬೆಂಗಳೂರು: ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶೆಯಾಗಿರುವ ಬಿ.ಎಸ್. ಇಂದ್ರಕಲಾ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಿ ರಾಷ್ಟ್ರಪತಿಗಳು ಬುಧವಾರ ಆದೇಶಿಸಿದ್ದಾರೆ.

ಇದರಿಂದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 39ಕ್ಕೆ ಏರಲಿದೆ.ಪ್ರಥಮ ಮಹಿಳಾ ನ್ಯಾಯಮೂರ್ತಿಯಾಗಿದ್ದ ಮಂಜುಳಾ ಚೆಲ್ಲೂರು ಅವರು ಕೇರಳ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದ ಮೇಲೆ, ಸದ್ಯ ಹೈಕೋರ್ಟ್‌ನಲ್ಲಿ ಒಬ್ಬರೇ ಮಹಿಳಾ ನ್ಯಾಯಮೂರ್ತಿ (ನ್ಯಾ.ಬಿ.ವಿ.ನಾಗರತ್ನಾ) ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದ್ರಕಲಾ ಅವರ ನೇಮಕದಿಂದ ಮಹಿಳೆಯರ ಸಂಖ್ಯೆ ಎರಡಕ್ಕೆ ಏರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry