ಸೋಮವಾರ, ಮಾರ್ಚ್ 8, 2021
31 °C

ಇನ್ನೋವೇಶನ್ ಕ್ಲಸ್ಟರ್ 2013ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನೋವೇಶನ್ ಕ್ಲಸ್ಟರ್ 2013ಕ್ಕೆ

ಬೆಂಗಳೂರು: ಅನಿಮೇಶನ್ ಉದ್ಯಮ ಉತ್ತೇಜಿಸಲೆಂದು ಬೆಂಗಳೂರಿನ ಯಲಹಂಕ ಬಳಿ ರೂ.130 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ `ಇನ್ನೋವೇಶನ್ ಕ್ಲಸ್ಟರ್~ ಮುಂದಿನ ವರ್ಷಾಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಸರ್ಕಾರದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಹೇಳಿದರು.ಮಂಗಳವಾರ ಇಲ್ಲಿ, ಬೆಂಗಳೂರು ಅನಿಮೇಶನ್ ಉದ್ಯಮಗಳ ಒಕ್ಕೂಟ (ಎಬಿಎಐ) ಆಯೋಜಿಸಿದ್ದ ಎರಡು ದಿನಗಳ `ಅನಿಮೇಶನ್, ವಿಶ್ಯುವಲ್ ಎಫೆಕ್ಟ್, ಗೇಮಿಂಗ್ ಅಂಡ್ ಕಾಮಿಕ್ಸ್ (ಎವಿಜಿಸಿ) ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಅನಿಮೇಶನ್ ಉದ್ಯಮಕ್ಕೆ ಉತ್ತೇಜನ ನೀಡಲು ಮತ್ತು ಹೆಚ್ಚಿನ ಹೂಡಿಕೆ ಆಕರ್ಷಿಸಲು ರಾಜ್ಯ ಸರ್ಕಾರ ಹೊಸ ಅನಿಮೇಷನ್ ನೀತಿ ಪ್ರಕಟಿಸಿದೆ. ಪ್ರಸ್ತಾವಿತ `ಇನ್ನೋವೇಶನ್ ಕ್ಲಸ್ಟರ್~ ಮೂಲಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್‌ಎಂಇ) ಪ್ರಗತಿಗೆ ಆದ್ಯತೆ ನೀಡಲಾಗಿದೆ. ಕ್ಲಸ್ಟರ್ ನಿರ್ಮಾಣ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಭರಿಸಲಿವೆ ಎಂದರು.ಬರುವ ಜೂನ್ 7 ಮತ್ತು 8ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಈ ಬಾರಿ  ರೂ.700 ಕೋಟಿಗಳಷ್ಟು ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ. ಅನಿಮೇಶನ್, ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ ವಲಯಗಳಿಗೆ ಹೆಚ್ಚಿನ ಬಂಡವಾಳ ಹರಿದುಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.`ಅತ್ಯುತ್ತಮ ಮೂಲಸೌಕರ್ಯ ಮತ್ತು ಉದ್ಯಮ ಸ್ನೇಹಿ ವಾತಾವರಣವನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸುತ್ತಿದ್ದೇವೆ~ ಎಂದು ಬೆಂಗಳೂರು ಅನಿಮೇಶನ್ ಉದ್ಯಮದಾರರ ಒಕ್ಕೂಟದ ಅಧ್ಯಕ್ಷ ಬಿರೇನ್ ಘೋಷ್ ಹೇಳಿದರು. `ಎಬಿಎಐ~ ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ ಮತ್ತಿತರರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.