`ಇನ್ಫೊಸಿಸ್'ನಿಂದ ಅಂಡ್ರಾಡೆ ನಿರ್ಗಮನ

7

`ಇನ್ಫೊಸಿಸ್'ನಿಂದ ಅಂಡ್ರಾಡೆ ನಿರ್ಗಮನ

Published:
Updated:

ಬೆಂಗಳೂರು(ಪಿಟಿಐ): ದೇಶದ ಮಾಹಿತಿ ತಂತ್ರಜ್ಞಾನ ಸೇವೆಗಳ ಕ್ಷೇತ್ರದ ಎರಡನೇ ದೊಡ್ಡ ಕಂಪೆನಿ ಎನಿಸಿಕೊಂಡಿರುವ `ಇನ್ಫೊಸಿಸ್'ನಿಂದ ಮತ್ತೊಬ್ಬ ಪ್ರಮುಖ ಉದ್ಯೋಗಿ ಶುಕ್ರವಾರ ನಿರ್ಗಮಿಸಿದ್ದಾರೆ.ಲ್ಯಾಟಿನ್ ಅಮೆರಿಕದಲ್ಲಿ `ಇನ್ಫೊಸಿಸ್'ನ ಹೊರಗುತ್ತಿಗೆ ಸೇವಾ ವಿಭಾಗದ ಮುಖ್ಯಸ್ಥರಾಗಿದ್ದ ಹಂಬೆರ್ಟೊ ಅಂಡ್ರಾಡೆ ರಾಜೀನಾಮೆ ನೀಡಿದ್ದಾರೆ.ಅಂಡ್ರಾಡೆ ನಿರ್ಗಮನವನ್ನು ಪ್ರಕಟಣೆಯಲ್ಲಿ ಖಚಿತಪಡಿಸಿರುವ ಇನ್ಫೊಸಿಸ್, ಅನಿಕೇತ್ ಮಯಿಂದರ್‌ಕರ್ ಕಂಪೆನಿಗೆ ಮತ್ತೆ ಸೇರಿಕೊಂಡಿದ್ದು, ಅಮೆರಿಕದಲ್ಲಿನ ಹೊರಗುತ್ತಿಗೆ ಸೇವಾ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದೂ ಹೇಳಿದೆ.ಕಳೆದ ತಿಂಗಳು ಅಶೋಕ್ ವೇಮೂರಿ ಮತ್ತು  ಸುಧೀರ್ ಚತುರ್ವೇದಿ ಇನ್ಫೊಸಿಸ್‌ನಿಂದ ನಿರ್ಗಮಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry