ಇನ್ಫೊಸಿಸ್‌ನಿಂದ ಮತ್ತೊಬ್ಬ ಹಿರಿಯ ಅಧಿಕಾರಿ ನಿರ್ಗಮನ

7

ಇನ್ಫೊಸಿಸ್‌ನಿಂದ ಮತ್ತೊಬ್ಬ ಹಿರಿಯ ಅಧಿಕಾರಿ ನಿರ್ಗಮನ

Published:
Updated:

ನವದೆಹಲಿ (ಪಿಟಿಐ): ಇನ್ಫೊಸಿಸ್‌ನಿಂದ ಮತ್ತೊಬ್ಬ ಹಿರಿಯ ಅಧಿಕಾರಿ ಹೊರ­ನಡೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕಂಪೆನಿಯ ಹೊರಗುತ್ತಿಗೆ(ಬಿಪಿಒ) ಮಾರಾಟ ವಿಭಾಗದ ಮುಖ್ಯ­ಸ್ಥರಾಗಿದ್ದ ಕಾರ್ತಿಕ್‌ ಜಯರಾಮನ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ­ದ್ದಾರೆ.ಮೆಲ್ಬರ್ನ್‌ನಲ್ಲಿ ಆಕ್ಸೆಂಚರ್‌ ಕಂಪೆನಿ  ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ತಿಕ್ ಅಧಿಕಾರ ವಹಿಸಿಕೊಂ­ಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಾರ್ತಿಕ್‌ ರಾಜೀನಾಮೆ ಕುರಿತು ಪ್ರತಿಕ್ರಿಯೆ ಪಡೆಯಲು ಸುದ್ದಿಸಂಸ್ಥೆ ಸಿಬ್ಬಂದಿ ಇನ್ಫೊಸಿಸ್‌ ವಕ್ತಾರರನ್ನು ಸಂಪರ್ಕಿಸಿದಾಗ, ‘ಕಂಪೆನಿಯಿಂದ ಹೊರ­ನಡೆಯುವವರ ಬಗ್ಗೆ ಮತ್ತು ಹೊಸ­ದಾಗಿ ಕಂಪೆನಿಗೆ ಸೇರ್ಪಡೆಗೊ­ಳ್ಳುವವರ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಈ ಕುರಿತು ಚರ್ಚೆ ಅನಗತ್ಯ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry