ಗುರುವಾರ , ಅಕ್ಟೋಬರ್ 17, 2019
21 °C

ಇನ್ಫೋಸಿಸ್: ನಿವ್ವಳ ಲಾಭ ಹೆಚ್ಚಳ

Published:
Updated:
ಇನ್ಫೋಸಿಸ್: ನಿವ್ವಳ ಲಾಭ ಹೆಚ್ಚಳ

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆಯಾಗಿರುವ ಇನ್ಫೋಸಿಸ್, ಅಕ್ಟೋಬರ್ - ಡಿಸೆಂಬರ್ ತಿಂಗಳ 3ನೇ ತ್ರೈಮಾಸಿಕದಲ್ಲಿ  ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ನಿವ್ವಳ  ಲಾಭ ಗಳಿಸಿದೆ.ಆದರೆ, ಯೂರೋಪ್ ಒಕ್ಕೂಟದ  ಬಿಕ್ಕಟ್ಟಿನ ಕಾರಣಕ್ಕೆ ಹಣಕಾಸು ವರ್ಷದಲ್ಲಿ ಸಂಸ್ಥೆಯ ಒಟ್ಟು ವರಮಾನವು ಕಡಿಮೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಂಸ್ಥೆಯ ಷೇರು ಬೆಲೆ ಶೇ 8ರಷ್ಟು ಕುಸಿತ ದಾಖಲಿಸಿತು.ಕಳೆದ ವರ್ಷದ ಇದೇ ಅವಧಿಗೆ (್ಙ 1,780 ಕೋಟಿ) ಹೋಲಿಸಿದರೆ ನಿವ್ವಳ ಲಾಭವು ಶೇ 33ರಷ್ಟು ( ್ಙ 2,372 ಕೋಟಿ)  ಮತ್ತು ದ್ವಿತೀಯ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 24ರಷ್ಟು ಹೆಚ್ಚಳವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಡಿ. ಶಿಬುಲಾಲ್ ಅವರು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅನಿಶ್ಚಿತ ಆರ್ಥಿಕ ಪರಿಸ್ಥಿತಿ ಮತ್ತು ಕರೆನ್ಸಿ ವಿನಿಮಯ ದರದ ತೀವ್ರ ಏರಿಳಿತವು ದೇಶಿ ಐ.ಟಿ ಉದ್ದಿಮೆಗೆ ತೀವ್ರ ಸ್ವರೂಪದ ಸವಾಲು ಒಡ್ಡಿದೆ ಎಂದು ಸಂಸ್ಥೆಯ ಮುಖ್ಯ ಹಣಕಾಸು ಕಾರ್ಯ ನಿರ್ವಾಹಕ ವಿ. ಬಾಲಕೃಷ್ಣನ್ ಅಭಿಪ್ರಾಯಪಟ್ಟರು. ಡಾಲರ್ ಎದುರು ರೂಪಾಯಿ ವಿನಿಮಯ ದರವು ಕುಸಿದಿರುವುದರಿಂದ  ಪ್ರಸಕ್ತ ಹಣಕಾಸು ವರ್ಷದ ವರಮಾನವನ್ನು ಸಂಸ್ಥೆಯು ಪರಿಷ್ಕರಿಸಿದ್ದು, ್ಙ33,795 ಕೋಟಿಗಳಿಂದ ್ಙ 34,282 ಕೋಟಿಗಳಿಗೆ (ಶೇ 1.5ರಷ್ಟು) ಹೆಚ್ಚಲಿದೆ ಎಂದು ತಿಳಿಸಿದೆ.ರೂಪಾಯಿ ಬೆಲೆ ಕುಸಿತವು ತೃತೀಯ ತ್ರೈಮಾಸಿಕದಲ್ಲಿ ಸಂಸ್ಥೆಯ ವರಮಾನವನ್ನು ಈ ಮೊದಲಿನ  ಗುರಿಯಾಗಿರುವ  ್ಙ 8,919 ಕೋಟಿಗಳಿಂದ ್ಙ 9,298 ಕೋಟಿಗಳಿಗೆ ಹೆಚ್ಚುವಂತೆ ಮಾಡಿದೆ.ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ವರಮಾನವು ಕಳೆದ ವರ್ಷಕ್ಕಿಂತ ಶೇ 30ರಷ್ಟು (್ಙ 9,402 ಕೋಟಿ) ಹೆಚ್ಚುವ ಅಂದಾಜು ಇದೆ. ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿನ ನಿಧಾನ ಗತಿಯ ಬೆಳವಣಿಗೆ ಮತ್ತು ಯೂರೋಪ್ ಒಕ್ಕೂಟದಲ್ಲಿನ ಬಿಕ್ಕಟ್ಟು ದೇಶಿ ಐ.ಟಿ ರಂಗದ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.ಉದ್ಯೋಗಾವಕಾಶ: ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯು 15,352 ತಂತ್ರಜ್ಞರನ್ನು ಹೊಸದಾಗಿ ನೇಮಿಸಿಕೊಂಡಿದೆ.  6,389 ಉದ್ಯೋಗಿಗಳು ಸಂಸ್ಥೆ ತೊರೆದಿದ್ದಾರೆ. ಸದ್ಯಕ್ಕೆ ಸಂಸ್ಥೆಯ ಒಟ್ಟು ಉದ್ಯೋಗಿಗಳ ಸಂಖ್ಯೆ   1,45,088 ರಷ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 45 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮತ್ತು ಅವರಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ನಿರ್ಧರಿಸಿದೆ.

Post Comments (+)