ಇನ್ಫೋಸಿಸ್ ಲಾಭ ರೂ2369 ಕೋಟಿ

7

ಇನ್ಫೋಸಿಸ್ ಲಾಭ ರೂ2369 ಕೋಟಿ

Published:
Updated:
ಇನ್ಫೋಸಿಸ್ ಲಾಭ ರೂ2369 ಕೋಟಿ

ಬೆಂಗಳೂರು: ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿ ಇನ್ಫೋಸಿಸ್ ರೂ 9,858 ಕೋಟಿ ವರಮಾನ ಮತ್ತು ್ಙ2,369 ಕೋಟಿ ನಿವ್ವಳ ಲಾಭ ಗಳಿಸಿದೆ.ಕಳೆದ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪೆನಿಯ ಒಟ್ಟು ವರಮಾನ ಮತ್ತು ನಿವ್ವಳ ಲಾಭ ಕ್ರಮವಾಗಿ ಶೇ 21.7 ಮತ್ತು ಶೇ 24.3ರಷ್ಟು ಹೆಚ್ಚಿದೆ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ.ಶಿಬುಲಾಲ್ ಹೇಳಿದರು.ಬನ್ಸಾಲ್ ನೂತನ `ಸಿಎಫ್‌ಒ~:
ನವೆಂಬರ್ 1ರಿಂದ ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ರಾಜೀವ್ ಬನ್ಸಾಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸದ್ಯ ಹಣಕಾಸು ವಿಭಾಗದ ಉಪಾಧ್ಯಕ್ಷರಾಗಿರುವ ಅವರು ಕಳೆದ 13 ವರ್ಷಗಳಿಂದ ಇನ್ಫೋಸಿಸ್‌ನಲ್ಲಿದ್ದಾರೆ.`6 ವರ್ಷಗಳಿಂದ `ಸಿಎಫ್‌ಒ~ ಆಗಿದ್ದ ವಿ.ಬಾಲಕೃಷ್ಣನ್ ಸ್ವಯಂಪ್ರೇರಿತವಾಗಿ ಬನ್ಸಾಲ್‌ಗೆ ತಮ್ಮ ಹುದ್ದೆ ಬಿಟ್ಟುಕೊಟ್ಟಿದ್ದಾರೆ. ನಿರ್ದೇಶಕ ಮಂಡಳಿ ಸದಸ್ಯರಾಗಿರುವ ಬಾಲಕೃಷ್ಣನ್ ಅವರಿಗೆ `ಹೊರಗುತ್ತಿಗೆ, ಫಿನಾಕಲ್,ಭಾರತೀಯ  ಐ.ಟಿ. ವ್ಯವಹಾರಗಳ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಬಾಲಕೃಷ್ಣನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಸುಳ್ಳು ಸುದ್ದಿ~ ಎಂದು ಶಿಬುಲಾಲ್ ಸ್ಪಷ್ಟಪಡಿಸಿದರು.ಅಸ್ಥಿರತೆ ಸವಾಲು: `ಜಾಗತಿಕ ಆರ್ಥಿಕ ಅಸ್ಥಿರತೆ ಸವಾಲು ಇನ್ನೂ ಮುಂದುವರೆದಿದೆ. ಇದರಿಂದ ಯೂರೋಪ್ ಮತ್ತು ಅಮೆರಿಕ ಮಾರುಕಟ್ಟೆಗಳಿಂದ ನಿರೀಕ್ಷೆಗಿಂತ ಕಡಿಮೆ ವಹಿವಾಟು ದಾಖಲಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಒಟ್ಟಾರೆ ಕಾರ್ಯನಿರ್ವಹಣೆಯ ಲಾಭ ತಗ್ಗಿದೆ ಎಂದು ವಿ.ಬಾಲಕೃಷ್ಣನ್ ಹೇಳಿದರು.ಸ್ವಿಟ್ಜರ್‌ಲೆಂಡ್ ಮೂಲದ `ಲೋಡ್‌ಸ್ಟೋನ್~ ಕಂಪೆನಿ ಸ್ವಾಧೀನ ಪ್ರಕ್ರಿಯೆ ಮುಂದಿನ ತ್ರೈಮಾಸಿಕದೊಳಗೆ ಪೂರ್ಣಗೊಳ್ಳಲಿದೆ ಎಂದರು.

ವೇತನ ಪರಿಷ್ಕರಣೆ :ಅ.1ರಿಂದ ಜಾರಿಗೆ ಬರುವಂತೆ ಇನ್ಫೋಸಿಸ್ ಭಾರತೀಯ ನೌಕರರ ವೇತನವನ್ನು ಶೇ 6ರಷ್ಟು ಮತ್ತು ವಿದೇಶಿ ನೌಕರರ ವೇತನವನ್ನು ಶೇ 2-3ರಷ್ಟು ಹೆಚ್ಚಿಸಿದೆ.

`ಜಾಗತಿಕ ಆರ್ಥಿಕ ಅಸ್ಥಿರತೆ ನಡುವೆಯೂ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡುತ್ತಿರುವ ಮೊದಲ ಸಂಸ್ಥೆ ನಮ್ಮದು~ ಎಂದು ಶಿಬುಲಾಲ್ ಹೇಳಿದರು.ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ  2,610 ನೌಕರರು ಹೊಸದಾಗಿ ನೇಮಕಗೊಂಡಿದ್ದಾರೆ. 39 ಗ್ರಾಹಕ ಸಂಸ್ಥೆಗಳು ಸೇರ್ಪಡೆ ಆಗಿದ್ದು, 20 ಕೋಟಿ ಡಾಲರ್ ವಿನಿಯೋಗಿಸಿ ವಿವಿಧ ಕಂಪೆನಿಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry