ಬುಧವಾರ, ಡಿಸೆಂಬರ್ 11, 2019
20 °C

ಇನ್‌ಫ್ರಾ ಬಾಂಡ್ ಬಿಡುಗಡೆ

Published:
Updated:
ಇನ್‌ಫ್ರಾ ಬಾಂಡ್ ಬಿಡುಗಡೆ

ಬೆಂಗಳೂರು: ಬ್ಯಾಂಕೇತರ ಹಣಕಾಸು ಸಂಸ್ಥೆ ಶ್ರೇಯ್ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್ (ಎಸ್‌ಐಎಫ್‌ಎಲ್), ತೆರಿಗೆ ಉಳಿತಾಯದ ಸೌಲಭ್ಯ ಇರುವ ದೀರ್ಘಾವಧಿಯ ಇನ್‌ಫ್ರಾ ಬಾಂಡ್‌ಗಳನ್ನು ಬಿಡುಗಡೆ ಮಾಡಿದೆ.

ರೂ. 1 ಸಾವಿರ ಮುಖಬೆಲೆಯ ಈ ಬಾಂಡ್‌ಗಳು ಕಳೆದ ಡಿಸೆಂಬರ್ 31ರಂದು ಬಿಡುಗಡೆಯಾಗಿದ್ದು, ಜನವರಿ 31ರಂದು ಕೊನೆಗೊಳ್ಳಲಿದೆ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ   `ಎಸ್‌ಐಎಫ್‌ಎಲ್~ನ ಬಂಡವಾಳ ಮಾರುಕಟ್ಟೆ ಮುಖ್ಯಸ್ಥ ಉದಯಬಾನು ಠಾಕೂರ್ ತಿಳಿಸಿದರು.

10 ರಿಂದ 15 ವರ್ಷ ಅವಧಿಯ ಈ ಬಾಂಡ್‌ಗಳು ನಾಲ್ಕು ಆಯ್ಕೆಗಳಲ್ಲಿ ಲಭ್ಯ ಇವೆ. ವಾರ್ಷಿಕ ಶೇ 8.90ರಷ್ಟು ಬಡ್ಡಿ ದರ, ವಾರ್ಷಿಕ ಪಾವತಿ ಮತ್ತು 5 ವರ್ಷಗಳ ಕೊನೆಯಲ್ಲಿ ಮರು ಖರೀದಿ ಅವಕಾಶವೂ ಇದೆ ಎಂದು ಉದಯಬಾನು ಹೇಳಿದರು.

ಇನ್‌ಫ್ರಾ ಬಾಂಡ್‌ಗಳ ಮೂಲಕ ಒಟ್ಟು ರೂ. 500 ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ ರೂ. 300 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಮೂಲಸೌಕರ್ಯ ಯೋಜನೆಗಳಿಗೆ ಸಾಲ ನೀಡಲು ಈ ಬಂಡವಾಳ ಬಳಸಿಕೊಳ್ಳಲಾಗುವುದು ಎಂದು ಕಂಪೆನಿಯ ಜಂಟಿ ನಿರ್ದೇಶಕ ಸೌದ್ ಸಿದ್ದಿಕಿ ತಿಳಿಸಿದರು.

ಪ್ರತಿಕ್ರಿಯಿಸಿ (+)