ಇನ್ ಬಾಕ್ಸ್

7

ಇನ್ ಬಾಕ್ಸ್

Published:
Updated:

ಕಾಮನಬಿಲ್ಲು  ಪುರವಣಿಯಲ್ಲಿ ಪ್ರಕಟವಾದ  ಯೋಗೇಶ್ ಮಾರೇನಹಳ್ಳಿ ಅವರ `ಪಾಠ-1 ಮೊಬೈಲ್ ಫೋನ್~  ಲೇಖನ ಚೆನ್ನಾಗಿ ಮೂಡಿಬಂದಿದೆ. ಅಶೋಕ ವಿ ಬದ್ದಿ  ಅವರ ಕಾರ್ಯಶೈಲಿ ತುಂಬಾ ಮೆಚ್ಚುಗೆಯಾಯಿತು. ತಮ್ಮ ಉದ್ಯೋಗದೊಂದಿಗೆ ಸಮಾಜದಲ್ಲಿ ಇತರರಿಗೆ ಸ್ವಉದ್ಯೋಗಕ್ಕೂ ಅನುಕೂಲವಾಗಲು `ಬ್ಲೂಸ್ಟಾರ್  ಆಕಾಡೆಮಿ~ ಸ್ಥಾಪಿಸಿರುವುದು ಶ್ಲಾಘನೀಯ.ಮೊಬೈಲ್ ರಿಪೇರಿ ತರಬೇತಿಯಿಂದ ಸಾವಿರಾರು ಆಸಕ್ತರು ಸ್ವಉದ್ಯೋಗ ಕಲ್ಪಿಸಿಕೊಳ್ಳುವಲ್ಲಿ ಪ್ರೇರಣೆ ನೀಡುತ್ತಿರುವುದು ಸಂತಸ ತಂದಿತು. ಅವರು ಇನ್ನೂ ಹೆಚ್ಚೆಚ್ಚು ವಿದ್ಯಾರ್ಥಿಗಳಿಗೆ ಆರ್ದಶರಾಗಲಿ. ನಿರಂಜನ್ ಕುಮಾರ್ ಮಠದ್,ರಾಯಚೂರು.

ಕಾಮನಬಿಲ್ಲುವಿನ ಕಳೆದ ಬಾರಿಯ ಲೇಖನ `ಪಾಠ 1, ಮೊಬೈಲ್ ಫೋನ್ ಸ್ಫೂರ್ತಿದಾಯಕವಾಗಿತ್ತು. ಅಶೋಕ್. ವಿ. ಬದ್ದಿ ಅವರ ಸಾಮಾಜಿಕ ಕಾಳಜಿಯೂ ಗಮನಾರ್ಹ. ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿರುವ ಈ ದೇಶದಲ್ಲಿ ಇಂತಹ ಸ್ವ ಉದ್ಯೋಗ ದಾರಿಯನ್ನು ಹಿಡಿದರೆ ಯುವಜನ ಚಿಂತಿಸುವ ಅಗತ್ಯವೇ ಇಲ್ಲ. ಇಂತಹ ಯೋಜನೆಯನ್ನು `ಬ್ಲೂ ಸ್ಟಾರ್ ಅಕಾಡೆಮಿ~ ಸಂಸ್ಥೆ ಮೂಲಕ ಪರಿಚಯಿಸಿರುವ ಅಶೋಕ್ ಅವರಿಗೆ ಅಭಿನಂದನೆ.

 ನಯನ, ಮೈಸೂರು.

ಕಳೆದ ಸಂಚಿಕೆಯಲ್ಲಿನ ಅವನಿ ಅವರ ಬಿಡಿ ಬಿಡಿ ಲೇಖನ ಸೊಗಸಾಗಿತ್ತು. ಪ್ರಕೃತಿ ಸೃಷ್ಟಿಸಿದ ಕೆಲವು ನಯನ ಮನೋಹರ ಜಲಪಾತಗಳ ಹುಟ್ಟು ಮತ್ತು ಜಲಧಾರೆಯ ವಿಸ್ತಾರಗಳ ಕುರಿತ ಮಾಹಿತಿ ಹಾಗೂ ಚಿತ್ರಗಳು ಮನಮೋಹಕವಾಗಿ ಮೂಡಿಬಂದಿತ್ತು. 

ಸೋಮಶೇಖರ್, ಭದ್ರಾವತಿ.`ಸೀಟ್ ಬೆಲ್ಟ್ ಜೀವರಕ್ಷಕ~ ಲೇಖನ ಓದಿದೆ. ಸೀಟ್‌ಬೆಲ್ಟ್‌ಗಳು ಪ್ರಾಣವನ್ನು ಉಳಿಸುವಲ್ಲಿ ತುಂಬಾ ಮಹತ್ವದ್ದು. ಈಗಿನ ಕಾರುಗಳು ಹಗುರವಾಗಿರುತ್ತವೆ. ಹಾಗೂ ಬೇಗ ಪಲ್ಟಿ ಹೊಡೆಯುವುದು, ಅಪಘಾತವಾಗುವುದು ಸಹಜವಾಗಿದೆ.ಇಂತಹ ಸಂದರ್ಭದಲ್ಲಿ ಜೀವರಕ್ಷಕವಾಗಿ ಕೆಲಸ ನಿರ್ವಹಿಸುವ ಸೀಟ್‌ಬೆಲ್ಟ್‌ಗಳು ಅವಶ್ಯಕ. ಹಿಂದಿನ ಕಾಲದ `ಅಂಬಾಸಿಡರ್~ ಕಾರು ಬಹಳ ಗಟ್ಟಿಯಾಗಿತ್ತು. ಮೈಲೇಜ್ ಕಮ್ಮಿ ಕೊಟ್ಟರೂ ಒಳ್ಳೆಯ ಕಾರು ಮತ್ತು ಸುರಕ್ಷಿತ ಎನ್ನಲಾಗಿತ್ತು. ಆದ್ದರಿಂದ ಆ ಕಾಲಕ್ಕೆ ಸೀಟ್‌ಬೆಲ್ಟ್‌ಗಳ ಅವಶ್ಯಕತೆ ಹೆಚ್ಚಿರಲಿಲ್ಲ ಎನ್ನಬಹುದು.

 ಎ. ಪಿ. ರಂಗನಾಥ್

`ಕಾಮನಬಿಲ್ಲು~ ಪುರವಣಿಯ ಕೊನೆಯ ಪುಟದ ಪುಟ್ಟ ಪುಟ್ಟ ಲೇಖನಗಳ ಸಂಗ್ರಹ ಸೊಗಸಾಗಿತ್ತು. ಅವನಿ ಅವರು ಜಲಪಾತಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿರುವುದು ಖುಷಿ ನೀಡಿತು. ಜತೆಗೆ ಪ್ರಕೃತಿ ತನ್ನ ಸೃಷ್ಟಿಯಲ್ಲಿ ಹುದುಗಿಸಿಟ್ಟ ರಹಸ್ಯಗಳ ಅನಾರವಣವೂ ಆಯಿತು.

  ಸುಮನಾ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry