ಗುರುವಾರ , ನವೆಂಬರ್ 21, 2019
27 °C

ಇನ್ ಬಾಕ್ಸ್

Published:
Updated:

ಗಣಿತಜ್ಞನ ಇತಿಹಾಸದ ಹಾದಿ, ಚಾರಿತ್ರಿಕ ವಿಕ್ರಮ ಲೇಖನ ಸ್ಪೂರ್ತಿದಾಯಕವಾಗಿತ್ತು. ಕೇವಲ ಐಷಾರಾಮಿ ಜೀವನದ ಆಸೆ ಪಡುತ್ತಾ ಅದರೆಡೆಗೆ ಗಮನಹರಿಸುವ ಇಂದಿನ ಯುವಜನತೆಗೆ ವಿಕ್ರಮ್ ಅವರ ಸಾಹಸಗಳು ಖಂಡಿತ ಮಾದರಿ. ಇತಿಹಾಸವನ್ನು ಕೆದಕುತ್ತಾ ತಾವೇ ಇತಿಹಾಸ ನಿರ್ಮಿಸುವತ್ತ ಸಾಗಿರುವ ಇವರ ಸಾಧನೆ ಅದ್ಭುತ. ಇಂತಹವರ ಸಂಖ್ಯೆ ಹೆಚ್ಚಲಿ

-ನಿತ್ಯಶ್ರೀ ಆರ್., ಮೈಸೂರು.ಗ್ಯಾಜೆಟ್ ಲೋಕ ಗಣಕದತ್ತಲೂ ವಿಸ್ತರಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ಕುರಿತ ಪರಿಚಯ, ಸಮೀಕ್ಷೆ ಮತ್ತು ವಿಮರ್ಶೆಗಳನ್ನು ಎದುರು ನೋಡಬಹುದೆಂದು ಭಾವಿಸಿದ್ದೇನೆ.

- ಎಲ್. ನಿರಂಜನ, ಹಾಸನ.ಕರ್ನಾಟಕದ ಮೂಲೆ ಮೂಲೆಗಳಿಂದ ಯುವ ಸಾಧಕರನ್ನು ಹೆಕ್ಕಿ ಪರಿಚಯಿಸುತ್ತಿರುವ ಕಾಮನಬಿಲ್ಲು ಪುರವಣಿಗೆ ಧನ್ಯವಾದಗಳು. ಪ್ರತಿಯೊಂದು ಸಂಚಿಕೆಯೂ ಸಂಗ್ರಾಹ್ಯವೂ, ಮಾಹಿತಿ ಪೂರ್ಣವೂ ಆಗಿರುತ್ತದೆ. ಇಂಥದ್ದೊಂದು ಪುರವಣಿಯನ್ನು ರೂಪಿಸುತ್ತಿರುವ ಪ್ರಜಾವಾಣಿಗೆ ವಿಶೇಷಾಭಿನಂದನೆಗಳು.

- ವೈ. ಕುಮಾರಸ್ವಾಮಿ, ಮಂಡ್ಯ.`ಭಲೇ ಕಾಮನಬಿಲ್ಲೆ', ಪ್ರೇಮ ಪತ್ರ ಬರೆದು ಬೈಸಿಕೊಂಡವರುಂಟು, ಒದೆ ತಿಂದವರುಂಟು, ಪ್ರೇಮಪತ್ರದ ನಿರೀಕ್ಷೆಯಲ್ಲಿ ಉಸಿರು ಬಿಗಿ ಹಿಡಿದು ನಿಂತವರುಂಟು. ಅನ್ಯರನ್ನು ಗೋಗರೆದು ಪ್ರೇಮಪತ್ರ ಬರೆಸಿಕೊಂಡು ಅದಕ್ಕೆ ತಮ್ಮ ಸಹಿ ಹಾಕಿ ಪ್ರಿಯ/ಪ್ರಿಯೆಗೆ ತಲುಪಿಸಿದವರುಂಟು. ಅಂತೂ ತೀರಾ ಕದ್ದು ಮುಚ್ಚಿ ಓಡಾಡುತ್ತಿದ್ದ ಒಲವಿನೋಲೆಗಳಿಗೆ ಸಾರಾಸಗಟಾಗಿ ಬಹಿರಂಗ ಸ್ಪರ್ಧೆ ಏರ್ಪಡಿಸಿ, ಪುರಸ್ಕಾರ ನೀಡಿದ ಮೊದಲ ಗಟ್ಟಿಗ ನೀನೇ ಇದ್ದಿರಬೇಕು. ಅಭಿನಂದನೆಗಳು. ಪ್ರಕಟವಾಗಿರುವ ಎಲ್ಲಾ ಪತ್ರಗಳೂ ಪ್ರೇಮದ ವಿವಿಧ ಮುಖಗಳ ಆಖ್ಯಾನಗಳಂತಿವೆ. ಪ್ರಾಂಜಲ ಪ್ರೇಮದ ಘನತೆಯನ್ನು ಬಿಂಬಿಸಿವೆ. ಚಂದದ ಒಲವಿನೋಲೆಗಳನ್ನು ಹೊತ್ತು ತಂದ ನೀನು ಪ್ರೇಮದ ಬಿಲ್ಲೇ ಸೈ.

-ಮೇ. ನಾ. ತರಂಗಿಣಿ, ತುಮಕೂರು.ಕಾಮನಬಿಲ್ಲುವಿನ ಗ್ಯಾಜೆಟ್ ಲೋಕದಲ್ಲಿ ಮೂಡಿಬರುತ್ತಿರುವ ವಾಹನಗಳ ಕುರಿತ ಲೇಖನ ಆಸಕ್ತಿ ಮೂಡಿಸುವಂತಿವೆ. `ಮುಗಿಯದ ಅಂಬಾಸಿಡರ್ ಕಾಲ' ಲೇಖನವು ಕಾರುಗಳ ಹಣೆಬರಹವನ್ನು ಸೂಚಿಸಿದೆ. ಅಂಬಾಸಿಡರ್ ಕಾರು ಗಟ್ಟಿಮುಟ್ಟಾಗಿತ್ತು. ಓಲ್ಡ್ ಈಸ್ ಗೋಲ್ಡ್ ಎಂಬಂತಿತ್ತು.

- ಎ.ಪಿ. ರಂಗನಾಥ್, ಮೈಸೂರು.ಕಾಮನಬಿಲ್ಲು ಹೆಸರಿಗೆ ತಕ್ಕಂತೆ ಇದೆ. ಗಣಕ ಅಥವಾ ಲ್ಯಾಪ್ ಟಾಪ್? ಬಗ್ಗೆ ಗ್ಯಾಜೆಟ್ ಲೋಕದಲ್ಲಿ ಇಂದಿನ ರಿಸ್ಥಿತಿಗೆ ತಕ್ಕಂತೆ ಉತ್ತಮ ಮಾಹಿತಿ ನೀಡಲಾಗಿದೆ. ಇದು ತುಂಬಾ ಉಪಯುಕ್ತ. ಜೊತೆಗೆ ಗ್ಯಾಜೆಟ್ ಸಲಹೆಯಲ್ಲಿ ವೈರಸ್‌ಬಗ್ಗೆ ತಿಳಿಸಿರುವುದು ಸಹ ಒಳ್ಳೆಯ ಮಾಹಿತಿ. ಆದರೆ ವೈರಸ್ ಸ್ಕ್ಯಾನ್ ಮಾಡಲು ವೈರಸ್ ನಿರೋಧಕ ತಂತ್ರಾಂಶ ಎಲ್ಲಿ ಸಿಗುತ್ತದೆ. ಯಾವ ರೀತಿ ಸಿಗುತ್ತದೆ ಎಂಬ ಮಾಹಿತಿ ತಿಳಿಸಬೇಕೆಂದು ಕೋರಿಕೆ.

- ಜಯಣ್ಣ, ಕೆಂಚನಹಳ್ಳಿ. ಕುಣಿಗಲ್.

ಪ್ರತಿಕ್ರಿಯಿಸಿ (+)