ಶನಿವಾರ, ಜೂನ್ 19, 2021
21 °C

ಇನ್ ಬಾಕ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಮನಬಿಲ್ಲು ಪುರವಣೆಯಲ್ಲಿ ಮೂಡಿಬರುತ್ತಿರುವ ಲೇಖನಗಳು ಅದ್ಭುತವಾಗಿವೆ. ಅದರಲ್ಲೂ ಮಾರ್ಚ್ 8 ರಂದು ಪ್ರಕಟಗೊಂಡ `ಆಟವೇನು ನೋಟವೇನು~ ಎಂಬ ಶೀರ್ಷಿಕೆಯ ಲೇಖನ ಮಾರ್ಮಿಕವಾಗಿತ್ತು.

 

ಕ್ರೀಡಾಲೋಕದಲ್ಲಿ ಮಹಿಳೆಯರು ಸಾಧನೆ ಮಾಡಬೇಕೆಂದರೆ ಒಂದಲ್ಲಾ ಒಂದು ದಿನ ರ‌್ಯಾಂಪ್ ಹತ್ತಿ ತಮ್ಮದಲ್ಲದ ಬೆಕ್ಕಿನ ನಡಿಗೆಯನ್ನು ಮಾಡಲೇಬೇಕಾದ ಈ ಕಾಲದಲ್ಲಿ ರ‌್ಯಾಂಪ್ ಹತ್ತದೇ ಇರುವ ಕ್ರೀಡಾ ಲೋಕದ ಮಹಿಳೆಯರು ಎಲೆ ಮರೆ ಕಾಯಿಯಾಗಿ ಉಳಿಯುತ್ತಿದ್ದಾರೆ, ಇನ್ನು ಇಂತಹವರ ಮೇಲೆ ಬೀಳದ ಛಾಯಾಗ್ರಾಹಕರ ಕಣ್ಣು ಕೇವಲ ಆಟದ ಜೊತೆ ಮೈಮಾಟ ತೋರುವವರ ಕಡೆಗೆ ಬೀಳುತ್ತಿರುವುದು ದುರಾದೃಷ್ಟ. ಇಂತಹ ನಿಜವಾದ ಚಿತ್ರಣವನ್ನು ನಮ್ಮ ಮುಂದೆ ತಂದಿರುವ ಕಾಮನಬಿಲ್ಲಿಗೆ ಧನ್ಯವಾದಗಳು.

 -ಭಾರತೀ.ಜಿ.ಮಾಗುಂಡ.ಮಾರ್ಚ್ 8, 1858 ನ್ಯೂಯಾರ್ಕ್ ನಗರದ ಸಿದ್ಧ ಉಡುಪು ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳಾ ಕಾರ್ಮಿಕರು ಬೀದಿಗಿಳಿದು ಪ್ರತಿಭಟಿಸಿದ ಐತಿಹಾಸಿಕ ದಿನ. ಬಿಡಿಗಾಸಿಗೆ ಹೀನಾಯವಾಗಿ ದುಡಿಸಿಕೊಳ್ಳುವುದರ ವಿರುದ್ದ ಹೋರಾಟ ನಡೆಸಿದ ದಿನವನ್ನು ಸಾಂಕೇತಿಕವಾಗಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲು ಕರೆ ಕೊಟ್ಟವರು ರಷ್ಯಾದ ಹೋರಾಟಗಾರ್ತಿ ಕ್ಲಾರಾ ಜೆಟ್ಕಿನ್ . ಮಾರ್ಚ್ 8, 2012: ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಸುಮಾರು 900 ಮಹಿಳೆಯರು ಉರಿಬಿಸಿಲಲ್ಲಿ ಮಕ್ಕಳ ಕೂಟದಿಂದ ಬನ್ನಪ್ಪ ಪಾರ್ಕ್‌ನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕನಿಷ್ಠ ವೇತನ, ದೌರ್ಜನ್ಯ, ಮುಕ್ತ ಕೆಲಸದ ವಾತಾವರಣಕ್ಕಾಗಿ ಅವರು ಹೋರಾಡುತ್ತಿದ್ದಾರೆ.ಸಮಾನತೆ, ಆತ್ಮಘನತೆ, ದುಡಿಮೆಗೆ ತಕ್ಕ ಗೌರವದಂತಹ ಮಹಿಳೆಯರ ಮಾನವ ಹಕ್ಕುಗಳಿಗಾಗಿ ಮಹಿಳಾ ಚಳವಳಿ ಹೋರಾಡುತ್ತಲೇ ಬಂದಿವೆ. ಲಿಂಗ ತಾರತಮ್ಯದ ಮೂಲಗಳನ್ನು ಹುಡುಕಿ ವಿಶ್ಲೇಷಿಸುವಂತಹ ಚಿಂತನೆಯನ್ನು ಸ್ತ್ರೀವಾದಿ ಅಧ್ಯಯನ ನಡೆಸಿಕೊಂಡು ಬಂದಿದೆ.ಈ ಹೋರಾಟ, ಚಿಂತನೆಯ ಪ್ರಭಾವ ಎಂತಹುದೆಂದರೆ ಸ್ತ್ರೀವಾದ ಬೋರು, ಕಠಿಣ, ಸವಕಲು, ಜಿಡ್ಡು, ಎನ್ನುವಂತಹ ಲಲನಾವಾದಿಗಳು ಸಹ ತಮ್ಮ ಲಲನಾವಾದವನ್ನು ಪ್ರತಿಪಾದಿಸುವಾಗ ಇದು ಸ್ತ್ರೀವಾದ ಅಥವಾ ಸ್ತ್ರೀವಾದಿಗಳ ನಿರಾಕರಣೆ ಅಲ್ಲ ಎಂದು ಹೇಳಲೇಬೇಕಾದ ಅನಿವಾರ್ಯತೆಗೆ ಸಿಕ್ಕಿ ಬೀಳುವಷ್ಟು.ಇವರು ಮುಂದಿಟ್ಟಿರುವ ಲಲನಾವಾದ ಸ್ತ್ರೀವಾದದ ಪರಿಷ್ಕರಣೆಯ ಒಂದು ಚಿಂತನೆಯಲ್ಲ. ಕೆಲಸವಿಲ್ಲದೆ ಬೋರಾದಾಗ ಹಾಗೇ ಸುಮ್ಮನೆ ಬಿಟ್ಟಿರುವ ಉಡಾಫೆಯ ಹೇಳಿಕೆಯಂತಿದೆ.

 -ಗುಣಪ್ರಕಾಶ್, ಬೆಂಗಳೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.