ಭಾನುವಾರ, ಡಿಸೆಂಬರ್ 8, 2019
25 °C

ಇಪ್ಪತ್ತೇಳು ಮುತ್ತುಗಳು

Published:
Updated:
ಇಪ್ಪತ್ತೇಳು ಮುತ್ತುಗಳು

‘ಕಾಯ್‌ ಪೊ ಚೆ’ ಖ್ಯಾತಿಯ ನಟ ಸುಶಾಂತ್‌ ಸಿಂಗ್‌ ರಜ್‌ಪೂತ್‌ ತಮ್ಮ ಹೊಸ ಚಿತ್ರ ‘ಶುದ್ಧ್‌ ದೇಸಿ ರೊಮ್ಯಾನ್ಸ್’ ಚಿತ್ರದಲ್ಲಿ ಬರೋಬ್ಬರಿ 27 ಬಾರಿ ಲಿಪ್‌ಲಾಕ್‌ ಮಾಡಿದ್ದಾರೆ. ಸುಶಾಂತ್‌ ತುಟಿಗೆ ತುಟಿ ಒತ್ತಿ ಚುಂಬನದ ಸವಿ ಉಂಡವರು ನಟಿ ಪರಿಣೀತಿ ಚೋಪ್ರಾ ಮತ್ತು ವಾಣಿ ಕಪೂರ್.ಬಾಲಿವುಡ್‌ನಲ್ಲಿ ನಟಿಸುವ ಕನಸು ಹೊತ್ತು ಬರುವ ಈಗಿನ ಬಹುತೇಕ ಯುವ ನಟ–ನಟಿಯರು ಲಿಪ್‌ಲಾಕ್‌ ದೃಶ್ಯಗಳಲ್ಲಿ ಯಾವುದೇ ಮುಜುಗರವಿಲ್ಲದೇ ನಟಿಸುವ ಧೈರ್ಯ ತೋರುತ್ತಿದ್ದಾರೆ. ಬಾಲಿವುಡ್‌ನ ಹೊಸ ಚಿಗುರುಗಳಾದ ಆಯುಷ್ಮಾನ್‌ ಖುರಾನಾ, ಸಿದ್ಧಾರ್ಥ್‌ ಮಲ್ಹೋತ್ರಾ, ಅರ್ಜುನ್‌ ಕಪೂರ್, ರಣ್‌ವೀರ್‌ ಸಿಂಗ್‌ ಮೊದಲಾದ ನಟರೆಲ್ಲಾ ತಾವು ನಟಿಸುವ ಚಿತ್ರದಲ್ಲಿ ಕಥೆಯು ಚುಂಬನ ದೃಶ್ಯವನ್ನು ಬೇಡುವಂತಿದ್ದರೆ ಬಹಳ ಸಂತೋಷದಿಂದ ಒಪ್ಪಿ ನಟಿಸುತ್ತಾರಂತೆ.

ಆದರೆ, ಸುಶಾಂತ್‌ ಇವರೆಲ್ಲರನ್ನೂ ಹಿಂದಿಕ್ಕುವಂತೆ ತಮ್ಮ ಹೊಸಚಿತ್ರದಲ್ಲಿ 27 ಬಾರಿ ತುಟಿಗೆ ತುಟಿ ಬೆಸೆದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಂದಹಾಗೆ, ಸುಶಾಂತ್‌ ಅವರು ಸೀರಿಯಲ್‌ ಕಿಸ್ಸರ್‌ ಇಮ್ರಾನ್‌ ಹಶ್ಮಿ ಹಾಗೂ ಬಾಲಿವುಡ್‌ನ ಮತ್ತಿತರ ಚುಂಬನ ಶೂರರ ದಾಖಲೆಗಳನ್ನೆಲ್ಲಾ ಮುರಿದಿದ್ದಾರಂತೆ.

ಈ ಹಿಂದೆ ತೆರೆಕಂಡ ಯಾವ ಬಾಲಿವುಡ್‌ ಚಿತ್ರದಲ್ಲೂ ಇಷ್ಟೊಂದು ಚುಂಬನ ದೃಶ್ಯಗಳು ಇರಲಿಲ್ಲವಾದ್ದರಿಂದ ಈ ಚಿತ್ರ ಅತಿ ಹೆಚ್ಚು ಲಿಪ್‌ಲಾಕ್‌ ದೃಶ್ಯಗಳಿರುವ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಿದೆ. ‘ಶುದ್ಧ್‌ ದೇಸಿ ರೊಮ್ಯಾನ್ಸ್‌’ನಲ್ಲಿ ಇಬ್ಬಿಬ್ಬರು ನಟಿಯರೊಂದಿಗೆ ಲಿಪ್‌ಲಾಕ್‌ ಮಾಡಿರುವ ನಟ ಸುಶಾಂತ್‌ ಬಿ–ಟೌನ್‌ನ ಹೊಸ ಸೀರಿಯಲ್‌ ಕಿಸ್ಸರ್‌ ಆಗಬಹುದೇ? ಎಂಬ ಪ್ರಶ್ನೆ ಹರಿದಾಡುತ್ತಿದೆ.

ಪ್ರತಿಕ್ರಿಯಿಸಿ (+)