ಇಬ್ಬಗೆಯ ನೀತಿ ಕೈಬಿಡಿ: ಕೇಂದ್ರಕ್ಕೆ ಮೋದಿ ಸಲಹೆ
ಜುನಾಗಡ (ಗುಜರಾತ್) (ಪಿಟಿಐ): ಪ್ರಧಾನಿಯ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, `ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆ, ಮುಂಬೈ ಹಿಂಸಾಚಾರದಂತಹ ಜ್ವಲಂತ ಘಟನೆಗಳ ಕುರಿತು ಅವರು ಮೌನಕ್ಕೆ ಶರಣಾಗಿದ್ದಾರೆ~ ಎಂದು ಟೀಕಿಸಿದ್ದಾರೆ.
`ಬಾಂಗ್ಲಾ ಅಕ್ರಮ ನುಸುಳುಕೋರರ ಸಮಸ್ಯೆಯ ಒಂದು ಭಾಗವಾಗಿ ಈಚೆಗೆ ಅಸ್ಸಾಂನಲ್ಲಿ ನಿರಂತರ ಘರ್ಷಣೆ ನಡೆದಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಈಗಿನ ತುರ್ತು ಅಗತ್ಯ ಎನಿಸಿದೆ. ಸರ್ಕಾರ ಈ ಸಮಸ್ಯೆಗೆ ಯಾವ ಪರಿಹಾರ ಕಂಡುಕೊಂಡಿದೆ ಎಂಬುದನ್ನು ಪ್ರಧಾನಿ ತಿಳಿಸಬೇಕಿತ್ತು. ಅವರ ಭಾಷಣ ಪ್ರಧಾನಿಯ ಭಾಷಣ ಎನಿಸದೆ ಸಾಮಾನ್ಯ ವ್ಯಕ್ತಿಯ ಭಾಷಣದಂತಿದೆ~ ಎಂದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.