ಬುಧವಾರ, ನವೆಂಬರ್ 13, 2019
23 °C

ಇಬ್ಬರು ಅಂಪೈರ್‌ಗಳ ಮೇಲೆ ನಿಷೇಧ

Published:
Updated:

ಕರಾಚಿ (ಪಿಟಿಐ): ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ತನ್ನ ಇಬ್ಬರು ಅಂಪೈರ್‌ಗಳ ಮೇಲೆ ನಿಷೇಧ ಹೇರಿದೆ.ಅನೀಸ್ ಸಿದ್ದಿಕಿ ಮತ್ತು ನದೀಮ್ ಘೋರಿ ಶಿಕ್ಷೆಗೆ ಗುರಿಯಾದ ಅಂಪೈರ್‌ಗಳಾಗಿದ್ದು, ಕ್ರಮವಾಗಿ ಮೂರು ಮತ್ತು ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದ ಖಾಸಗಿ ಸುದ್ದಿವಾಹಿನಿ `ಇಂಡಿಯಾ ಟಿವಿ' ನಡೆಸಿದ್ದ ಮಾರುವೇಷದ ಕಾರ್ಯಾಚರಣೆಯಲ್ಲಿ ಇಬ್ಬರೂ ಅಂಪೈರ್‌ಗಳ ಭ್ರಷ್ಟಾಚಾರ ಬಯಲಾಗಿತ್ತು.ನದೀಮ್ ಮತ್ತು ಅನೀಸ್, ಹಣಕ್ಕಾಗಿ ತೀರ್ಪನ್ನು ಬದಲಾಯಿಸಲು ಒಪ್ಪಿಕೊಂಡಿರುವುದು ಆ ಕಾರ್ಯಾಚರಣೆಯಲ್ಲಿ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪಿಸಿಬಿ ಅಧ್ಯಕ್ಷ ಜಾಕಾ ಅಶ್ರಫ್ ನೇತೃತ್ವದ ತಂಡ, ಶನಿವಾರ ಇಬ್ಬರನ್ನೂ ನಿಷೇಧಿಸಿ ಪ್ರಕಟಣೆ ಹೊರಡಿಸಿತು. ನದೀಮ್ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಿಗೆ ತೀರ್ಪುಗಾರರಾಗಿದ್ದು, ಸಿದ್ದಿಕಿ ಪ್ರಥಮ ದರ್ಜೆ ಪಂದ್ಯಗಳಿಗೆ ಅಂಪೈರ್ ಆಗಿದ್ದರು.

ಪ್ರತಿಕ್ರಿಯಿಸಿ (+)