ಮಂಗಳವಾರ, ಜೂನ್ 15, 2021
21 °C

ಇಬ್ಬರು ಅಪಹೃತರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುಜಾ (ಪಿಟಿಐ): ನೈಜೀರಿಯಾದ ತೀವ್ರಗಾಮಿ ಸಂಘಟನೆಯೊಂದು ಕಳೆದ ವರ್ಷ ಅಪಹರಣ ಮಾಡಿದ್ದ ಬ್ರಿಟನ್ ಹಾಗೂ ಇಟಲಿಯ ಪ್ರಜೆಗಳಿಬ್ಬರು ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.ಅಪಹರಣಕ್ಕೆ ಒಳಗಾಗಿದ್ದ ಬ್ರಿಟನ್ ಪ್ರಜೆ ಕ್ರಿಸ್ ಮಿಕ್‌ಮನಸ್ ಮತ್ತು ಇಟಲಿಯ ಫ್ರಾಂಕೊ ಲಾಮೊಲಿನರಾ ಅವರ ರಕ್ಷಣೆಗೆ ಬ್ರಿಟನ್ ಮತ್ತು ನೈಜೀರಿಯಾದ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು.ನೈಜೀರಿಯಾದ ಉತ್ತರದಲ್ಲಿರುವ ಬರ್ನಿನ್ ಕೆಬ್ಬಿ ನಗರದ ಮನೆಯೊಂದರಿಂದ ಕಳೆದ ವರ್ಷ ಅಪಹರಣಕ್ಕೆ ಒಳಗಾಗಿದ್ದರು.ಅಬುಜಾದಲ್ಲಿರುವ ಇಟಲಿ ಮೂಲದ ಕಂಪೆನಿ ಬಿ ಸ್ಟಾಬಿಲಿನಿಯಲ್ಲಿ ಅವರಿಬ್ಬರು ಕಾರ್ಯನಿರ್ವಹಿಸುತ್ತಿದ್ದರು.

ಅವರ ಸಾವಿಗೆ ತೀವ್ರಗಾಮಿ ಮುಸ್ಲಿಂ ಸಂಘಟನೆಯಾದ ಬೊಕೊ ಹರಮ್ ಕಾರಣ ಎಂದು ನೈಜೀರಿಯಾ ಅಧ್ಯಕ್ಷ  ಜೊನಾಥನ್ ಆರೋಪಿಸಿದ್ದಾರೆ. ಇಬ್ಬರ ಸಾವಿಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.ಇಬ್ಬರನ್ನು ಒತ್ತೆ ಇಟ್ಟಿರುವ ಪ್ರದೇಶದ ಬಗ್ಗೆ ಖಚಿತ ಮಾಹಿತಿ ದೊರಕಿದ್ದ ಹಿನ್ನೆಲೆಯಲ್ಲಿ ಅವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುವುದಕ್ಕೆ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಭದ್ರತಾ  ಪಡೆಗೆ ಅನುಮತಿ ನೀಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.