ಭಾನುವಾರ, ಮಾರ್ಚ್ 26, 2023
31 °C
ಆಸ್ಪತ್ರೆ ಅವ್ಯವಸ್ಥೆ 10 ಹಾಸನ

ಇಬ್ಬರು ಬಾಣಂತಿಯರಿಗೆ ಒಂದೇ ಹಾಸಿಗೆ

ಪ್ರಜಾವಾಣಿ ವಾರ್ತೆ/ ಉದಯ ಯು. Updated:

ಅಕ್ಷರ ಗಾತ್ರ : | |

ಇಬ್ಬರು ಬಾಣಂತಿಯರಿಗೆ ಒಂದೇ ಹಾಸಿಗೆ

ಹಾಸನ: ಆಸ್ಪತ್ರೆಯಲ್ಲಿ ನೀರಿಲ್ಲದ ಕಾರ ಣಕ್ಕೆ ಕೆಲವು ಶಸ್ತ್ರಚಿಕಿತ್ಸೆಗಳನ್ನೇ ಮುಂದೂಡಿಹಾಸನದ ಜಯಚಾಮ ರಾಜೇಂದ್ರ ಸರ್ಕಾರಿ ಆಸ್ಪತ್ರೆ 6 ತಿಂಗಳ ಹಿಂದೆ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗ ಅಂಥ ಸಮಸ್ಯೆ ಇಲ್ಲ. ಆದರೆ, ಆರು ದಶಕಗಳಿಗೂ ಹಿಂದಿನ ಈ ಆಸ್ಪತ್ರೆಯಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ.



ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿದ್ದ ಈ ಆಸ್ಪತ್ರೆಯನ್ನು ಹಾಸನ ವೈದ್ಯಕೀಯ ವಿಜ್ಞಾನಗಳ ಕಾಲೇಜಿಗೆ ಮಾನ್ಯತೆ ಪಡೆಯುವ ಸಲುವಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸ ಲಾಯಿತು. ವೈದ್ಯಕೀಯ ಕಾಲೇಜಿಗೆ ಮಾನ್ಯತೆ ಸಿಗಬೇಕಾದರೆ ಕನಿಷ್ಠ 570 ಹಾಸಿಗೆಗಳ ಆಸ್ಪತ್ರೆ ಇರಬೇಕು. ಹಾಸನದ ಸರ್ಕಾರಿ ಆಸ್ಪತ್ರೆ 350 ಹಾಸಿಗೆಗಳದ್ದಾಗಿತ್ತು. ಮಾನ್ಯತೆ ಪಡೆ ಯುವ ಉದ್ದೇಶದಿಂದ ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು ನೀಡದೆಯೇ ಹಾಸಿಗೆ ಸಂಖ್ಯೆಯನ್ನು 580ಕ್ಕೆ ಹೆಚ್ಚಿಸ ಲಾಯಿತು. ಇಲ್ಲಿಂದ ಸಾಲು ಸಾಲು ಸಮಸ್ಯೆಗಳೂ ಆರಂಭವಾದವು.



ಹೊರರೋಗಿಗಳು, ರೋಗಿಯ ಕಡೆಯವರು ಬಂದು ಕುಳಿತುಕೊಳ್ಳಲು ಮೀಸಲಿಟ್ಟ ಜಾಗವೆಲ್ಲ ವಾರ್ಡ್‌ಗ ಳಾದವು. ಜನರು ಆಸ್ಪತ್ರೆಯ ಮೆಟ್ಟಿಲು ಗಳ ಮೇಲೆ ಕುಳಿತು ಕಾಯುವ ಸ್ಥಿತಿ ನಿರ್ಮಾಣವಾಯಿತು. ಆಸ್ಪತ್ರೆಗೆ ಪ್ರತಿದಿನ ಸರಾಸರಿ 1,000ದಿಂದ 1,200 ಹೊರರೋಗಿಗಳು, 150ರಿಂದ 200 ಒಳರೋಗಿಗಳು ಬರುತ್ತಾರೆ. ಇವರಿಗೆ ಓಡಾಡಲೂ ಜಾಗವಿಲ್ಲ. 



ಹೆರಿಗೆ ವಾರ್ಡ್‌ನ ಸಮಸ್ಯೆ ಹೇಳತೀರ ದಂಥದ್ದು, 50 ವರ್ಷಗಳ ಹಿಂದೆ ಇರುವ ಸೌಲಭ್ಯವೇ ಈಗಲೂ ಇವೆ. ಆಸ್ಪತ್ರೆಯಲ್ಲಿ ಪ್ರತಿ ದಿನ 20 ರಿಂದ 30 ಹೆರಿಗೆಗಳಾಗುತ್ತವೆ. ಇಡೀ ಜಿಲ್ಲೆಯಲ್ಲಿ ಪ್ರತಿ ದಿನ ಆಗುವ ಒಟ್ಟು ಹೆರಿಗೆಗಳಲ್ಲಿ ಶೇ 50ರಷ್ಟು ಹೆರಿಗೆಗಳು ಈ ಆಸ್ಪತ್ರೆಯಲ್ಲೇ ಆಗುತ್ತವೆ. ವಾರ್ಡ್‌ನಲ್ಲಿ ಜಾಗವಿಲ್ಲದೆ ಒಂದೇ ಹಾಸಿಗೆಯಲ್ಲಿ ಇಬ್ಬಿಬ್ಬರು ಬಾಣಂತಿಯರು ಮಲಗಬೇ ಕಾಗುತ್ತಿದೆ. ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಇರುವುದರಿಂದ ಬಡವರು ಹೆರಿಗೆಗೆ ಜಿಲ್ಲಾ ಆಸ್ಪತ್ರೆಯನ್ನೇ ಅವಲಂಬಿ ಸಬೇಕಾಗಿದೆ. ಗಡಿಯಲ್ಲಿರುವ ನೆರೆ ಜಿಲ್ಲೆಗಳಿಂದಲೂ ಹೆರಿಗೆಗೆ ಈ ಆಸ್ಪತ್ರೆಗೆ ಬರುತ್ತಾರೆ.



ಬಾಣಂತಿಯರಷ್ಟೇ ಅಲ್ಲ, ನವಜಾತ ಶಿಶುಗಳ ಐಸಿಯು (ಎನ್‌ಐಸಿಯು) ದಲ್ಲೂ ಇಂಥದ್ದೇ ಸಮಸ್ಯೆ ಇದೆ. ಆಸ್ಪತ್ರೆಯಲ್ಲಿ 8 ಇನ್‌ಕ್ಯುಬೇಟರ್‌ಗಳಿವೆ. ಆದರೆ, ಇದರ ಅಗತ್ಯವಿರುವ ಮಕ್ಕಳ ಸಂಖ್ಯೆ ಎರಡು ಪಟ್ಟು, ಕೆಲವೊಮ್ಮೆ ಮೂರು ಪಟ್ಟು ಇರುತ್ತದೆ. ಒಂದು ಹಾಸಿಗೆಯಲ್ಲಿ ಇಬ್ಬಿಬ್ಬರು ಬಾಣಂತಿ ಯರು ಮಲಗಿದಂತೆ, ಒಂದು ಇನ್‌ಕ್ಯು ಬೇಟರ್‌ನಲ್ಲಿ ಎರಡು, ಕೆಲವೊಮ್ಮೆ ಮೂರು ಮಕ್ಕಳು ಮಲಗಿರುತ್ತವೆ. ಹೆಚ್ಚಿನ ವ್ಯವಸ್ಥೆ ಮಾಡಲು ಆಸ್ಪತ್ರೆಯಲ್ಲಿ ಸ್ಥಳಾವಕಾಶವೂ ಇಲ್ಲ.



ಜಿಲ್ಲೆಯಲ್ಲಿ ವಿಷಾಹಾರ ಸೇವನೆ ಅಥವಾ ಇನ್ಯಾವುದೋ ಸಮಸ್ಯೆಯಿಂದ ಒಮ್ಮೆಲೇ ನೂರಾರು ಜನರು ಆಸ್ಪತ್ರೆಗೆ ಬಂದರೆ ಅವರಿಗೆ ಚಿಕಿತ್ಸೆ ನೀಡಲು ಜಾಗವಿಲ್ಲ. ಇಂಥ ಸಂದರ್ಭಗಳಲ್ಲಿ ಜಗಲಿಯಲ್ಲೇ ಅವರನ್ನು ಮಲಗಿಸ ಲಾಗುತ್ತದೆ.



ತೀವ್ರ ನಿಗಾ ಘಟಕದಲ್ಲಿ 11 ವೆಂಟಿಲೇಟರ್‌ಗಳಿವೆ. ಅದರಲ್ಲಿ ಒಂದು ಇತ್ತೀಚೆಗೆ ಬಂದಿದ್ದು, ಇನ್ನೂ ಅಳವ ಡಿಸಿಲ್ಲ. ಉಳಿದ ಹತ್ತರಲ್ಲಿ ಒಂದು ಅಥವಾ ಎರಡು ಸದಾ ಕೆಟ್ಟಿರುತ್ತವೆ.



ಹಸ್ತಾಂತರವಾಗದ ಕಟ್ಟಡ: ವೈದ್ಯ ಕೀಯ ಕಾಲೇಜಿಗೆ ಐಎಂಎ ಮಾನ್ಯತೆ ಲಭಿಸಬೇಕಾದರೆ ಕಾಲೇಜಿಗೆ ಹೊಂದಿ ಕೊಂಡು ಆಸ್ಪತ್ರೆಯೂ ಇರಬೇಕು. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲು ಕಟ್ಟಡ ಕಾಮಗಾರಿಯನ್ನು 2007ರಲ್ಲಿ ಆರಂಭಿಸಲಾಗಿತ್ತು. 2009ರ ಮೇ ತಿಂಗಳಲ್ಲಿ ಅದರ ಹಸ್ತಾಂತರವಾಗ ಬೇಕಾಗಿತ್ತು. ಆದರೆ, ಇನ್ನೂ ಹಸ್ತಾಂತರಗೊಂಡಿಲ್ಲ.



ಆಸ್ಪತ್ರೆ ಉದ್ಘಾಟನೆಯಾಗಿ ಹಾಸಿಗೆ ಗಳ ಸಂಖ್ಯೆ ಇನ್ನೂ 400ರಷ್ಟು ಹೆಚ್ಚಿದರೆ ಎಂಬಿಬಿಎಸ್‌ ಸೀಟ್‌ಗಳ ಸಂಖ್ಯೆ 100ರಿಂದ 150ಕ್ಕೆ ಏರಿಕೆಯಾಗುತ್ತದೆ. ಆದರೆ, ಆಸ್ಪತ್ರೆಯ ಐದು ಅಂತಸ್ತಿನ ಕಟ್ಟಡ ಸಿದ್ಧವಾಗಿದ್ದರೂ, ಪೀಠೋ ಪಕರಣ ಹಾಗೂ ಇತರ ಸೌಲಭ್ಯಗ ಳಾಗಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡದೆ ಕಟ್ಟಡ ಹಸ್ತಾಂತರ ವಿಳಂಬ ವಾಗುತ್ತಿದೆ. ಈಗಿಂದೀಗ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದರೂ ಸೌಲಭ್ಯ ಕಲ್ಪಿಸಲು ಮೂರು ತಿಂಗಳು ಬೇಕಾಗುತ್ತದೆ ಎಂದು ಸಿಬ್ಬಂದಿ ಹೇಳು ತ್ತಿದ್ದಾರೆ.



ಆಸ್ಪತ್ರೆಯ ಡಯಾಲಿಸಿಸ್‌ ವಿಭಾ ಗದಿಂದ ನೂರಾರು ಜನರು ಅನುಕೂಲ ಪಡೆಯುತ್ತಿದ್ದಾರೆ. 10 ಯಂತ್ರಗಳಲ್ಲಿ ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡ ಲಾಗುತ್ತಿದೆ. ಎರಡು ಯಂತ್ರಗ ಳನ್ನು ಎಚ್‌ಐವಿ ಬಾಧಿತರಿಗಾಗಿಯೇ ಮೀಸ ಲಿಡಲಾಗಿದೆ. ಉಳಿದವುಗಳಲ್ಲಿ ಎರಡನ್ನು ತುರ್ತು ಸಂದರ್ಭದಲ್ಲಿ ಬಳಸಲಾ ಗುತ್ತಿದೆ. ಬಡವರಿಗೆ ಕನಿಷ್ಠ ಶುಲ್ಕದಲ್ಲಿ ಹಾಗೂ ಕಡು ಬಡವರಿಗೆ ಉಚಿತವಾಗಿ ಸೇವೆ ನೀಡಲಾಗುತ್ತಿದೆ.



ಹಸ್ತಾಂತರದಿಂದ ಅನುಕೂಲ

ಸರ್ಕಾರಿ ಆಸ್ಪತ್ರೆಯನ್ನು ವೈದ್ಯ ಕೀಯ ಕಾಲೇಜಿಗೆ ಹಸ್ತಾಂತರಿಸಿದ್ದನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ವಿರೋಧಿಸಿದ್ದಾರೆ. ಬೇರೆ ತಾಲ್ಲೂಕು ಗಳಲ್ಲಿ ಸೇವೆ ಮಾಡುತ್ತಿರುವವರಿಗೆ ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಮಾಡಿಸಿಕೊಳ್ಳಲಾಗದ ಸ್ಥಿತಿ ಬಂದಿದೆ. ಆದರೆ, ರೋಗಿಗಳಿಗೆ ಇದರಿಂದ ಅನುಕೂಲವಾಗಿದೆ. ಆಸ್ಪತ್ರೆ ಕಾಲೇಜಿಗೆ ಹಸ್ತಾಂತರವಾಗಿದ್ದರಿಂದ ಬರುವ ಅನುದಾನ ಹೆಚ್ಚಾಗಿದೆ. ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಐದರಿಂದ ಆರು ಕೋಟಿ ರೂಪಾಯಿ ಅನುದಾನ ಬಂದರೆ; ಈ ಒಂದೇ ಆಸ್ಪತ್ರೆಗೆ ಅಷ್ಟು ಅನುದಾನ ಬರುತ್ತಿದೆ. ‘ಬಡವರಿಗೆ ದುಬಾರಿ ಔಷಧಗಳನ್ನೂ ಉಚಿ ತವಾಗಿ ನೀಡುತ್ತಿದ್ದೇವೆ. ಮಧುಮೇ ಹಿಗಳಿಗೆ ಬೇರೆ ಯಾವ ಆಸ್ಪತ್ರೆ ಯಲ್ಲೂ ಇನ್‌ಸುಲಿನ್‌ ಮನೆಗೆ ಒಯ್ಯಲು ಕೊಡುವುದಿಲ್ಲ. ಈ ಆಸ್ಪ ತ್ರೆಯಲ್ಲಿ ಕೊಡಲಾಗುತ್ತಿದೆ’ ಎಂದು ಸಿಬ್ಬಂದಿ ಹೇಳುತ್ತಾರೆ.



‘ರೇಡಿಯಾಲಜಿ’ ಸಮಸ್ಯೆ

ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್‌ ಸಮಸ್ಯೆ ಇದೆ. ಹಲವು ಬಾರಿ ಈ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರೂ ಯಾರೂ ಬಂದಿಲ್ಲ. ಈಗ ಗುತ್ತಿಗೆ ಆಧಾರದಲ್ಲಿ ವೈದ್ಯರೊಬ್ಬರ ಸೇವೆ ಪಡೆಯಲಾಗುತ್ತಿದೆ. ಈ ಸಮಸ್ಯೆ ಕಾಲೇಜಿನಲ್ಲೂ ಇದೆ. ರೇಡಿಯಾಲಜಿ ವಿಭಾಗದಲ್ಲಿ ಉಪನ್ಯಾಸಕರ ಹುದ್ದೆಗೂ ಯಾರೂ ಬರುತ್ತಿಲ್ಲ.

-ಡಾ.ಶಂಕರ್‌



ಭ್ರಷ್ಟಾಚಾರ ಇಲ್ಲ

ರೋಗಿಗಳಿಂದ ಹಣ ಕೀಳುವ ಪ್ರಕರಣಗಳು ನಮ್ಮ ಆಸ್ಪತ್ರೆಯಲ್ಲಿ ನಡೆಯುತ್ತಿಲ್ಲ. ಬೇಕಾದರೆ ನೀವೇ ಸ್ವತಂತ್ರ ತನಿಖೆ ಮಾಡಿಸಿ, ಅತ್ಯಂತ ಕೆಳಮಟ್ಟದಲ್ಲಿ ಅಂದರೆ ಗಾಡಿ ತಳ್ಳುವವರು ಅಥವಾ ಆ ಹಂತದ ಇತರ ಸಿಬ್ಬಂದಿ ರೋಗಿ ಕಡೆಯವರೇ ಕೊಟ್ಟರೆ ಐದೋ ಹತ್ತೋ ರೂಪಾಯಿ ಪಡೆಯಬಹುದು. ಆದರೆ, ಹಣಕ್ಕಾಗಿ ಪೀಡಿಸುವ ಸಿಬ್ಬಂದಿ ಇಲ್ಲ. ಒಂದೆರಡು ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಅಂಥವರನ್ನು ಕರೆದು ಎಚ್ಚರಿಕೆ ನೀಡಿದ್ದೇವೆ.

– ಡಾ.ಶಂಕರ್‌, ಜಿಲ್ಲಾ ಶಸ್ತ್ರಚಿಕಿತ್ಸಕ



ಅಲೆದಾಡಿಸಿದರು, ಹಣ ಕೇಳಿಲ್ಲ

‘ಆಸ್ಪತ್ರೆಗೆ ಬಂದಾಗ ಅಲ್ಲಿ–ಇಲ್ಲಿ ಅಲೆದಾಡಿಸಿದ್ದು ಬಿಟ್ಟರೆ ಬೇರೆ ತೊಂದರೆ ಆಗಿಲ್ಲ. ಹಾಸಿಗೆ ಇಲ್ಲದೆ ಸಮಸ್ಯೆಯಾಗಿದೆ. ಹಣಕ್ಕಾಗಿ ಯಾರೂ ಪೀಡಿಸಿಲ್ಲ. ಹೆರಿಗೆ ಆಗುತ್ತಿದ್ದಂತೆ ಮಡಿಲು ಕಿಟ್‌ ಕೊಡುವುದಾಗಿ ಹೇಳಿದ್ದಾರೆ.

– ಮಂಜೇಗೌಡ

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆಯ ಸಂಬಂಧಿ




ಒಳ್ಳೆ ಕೆಲಸ

ಜಿಲ್ಲಾ ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ಬರುತ್ತಿರುವ ವರದಿಗಳನ್ನು ಗಮನಿಸಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಮ್ಮ ಪತ್ರಿಕೆ ಇಂಥ ವರದಿಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ,   ಸ್ವಾಗತಾರ್ಹ.

ಯು.ಟಿ. ಖಾದರ್‌, ಆರೋಗ್ಯ ಸಚಿವ







ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.