ಭಾನುವಾರ, ಅಕ್ಟೋಬರ್ 20, 2019
27 °C

ಇಬ್ಬರು ಭಾರತೀಯರ ವಿರುದ್ಧ ಮೊಕದ್ದಮೆ

Published:
Updated:

ವಾಷಿಂಗ್ಟನ್ (ಪಿಟಿಐ): ಅಕ್ರಮ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇರೆಗೆ ಇಬ್ಬರು ಭಾರತೀಯರ ವಿರುದ್ಧ ಸ್ಥಳೀಯ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಲಾಗಿದೆ.

ಕ್ಯಾಲಿಫೋರ್ನಿಯಾ ನಿವಾಸಿಯಾದ ದೀಪಕ್ ಸಿಂಘಾಲ್ ಮತ್ತು ಭಾರತೀಯ ನಿವಾಸಿಯಾಗಿರುವ ಅವನ ತಾಯಿ ಮೀರಾ ಸಿಂಘಾಲ್ ವಿರುದ್ಧ ಉತ್ತರ ಇಲಿನಾಯ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಈ ಮೊಕದ್ದಮೆ ಹೂಡಲಾಗಿದೆ.

ಇವರಿಬ್ಬರೂ ಅಮೆರಿಕದ ಸರಕು ವಿನಿಮಯ ಕಾಯ್ದೆ ಮತ್ತು ಸ್ಪರ್ಧಾರಹಿತ ವ್ಯಾಪಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

Post Comments (+)