ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

7

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

Published:
Updated:

ಸೋಮವಾರಪೇಟೆ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಹರಗ ಗ್ರಾಮದಲ್ಲಿ ಬುಧವಾರ ನಡೆದಿದೆ.ಪ್ರಕಾಶ್ ಎಂಬುವವರ ಪತ್ನಿ ಕವಿತಾ, ಮಕ್ಕಳಾದ ಸ್ವಸ್ತಿಕ್ (9) ಹಾಗೂ ಏಕಾಂತ್ (7) ಮೃತಪಟ್ಟವರು. ಇಬ್ಬರೂ ಮಕ್ಕಳು ಸೋಮವಾರಪೇಟೆಯ ಪೇಯಿಂಗ್ ಗೆಸ್ಟ್‌ನಲ್ಲಿ ಉಳಿದುಕೊಂಡು ಸಾಂದೀಪನಿ ಶಾಲೆಯಲ್ಲಿ ಓದುತ್ತಿದ್ದರು.

 

ಬುಧವಾರ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ತಂದೆ ಹಾಗೂ ಅಜ್ಜಿ ಹರಗದಿಂದ ಬಂದು ಮಕ್ಕಳಿಗೆ ಚಿಕಿತ್ಸೆ ಕೊಡಿಸಿ, ಅವರನ್ನು ಊರಿಗೆ ಕಳುಹಿಸಿ ತಾವು ಸೋಮವಾರಪೇಟೆಯಲ್ಲೇ ಉಳಿದುಕೊಂಡರು.ಈ ಮಧ್ಯೆ ಕವಿತಾ ಗಂಡನಿಗೆ ದೂರವಾಣಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದರು ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಪ್ರಕಾಶ್ ಹಾಗೂ ಅವರ ತಾಯಿ ಹರಗಕ್ಕೆ ತೆರಳಿ, ಮನೆಗೆ ಹೋಗಿ ನೋಡಿದಾಗ ಕವಿತಾ ಹಾಗೂ ಮಕ್ಕಳು ನಾಪತ್ತೆ ಆಗಿದ್ದರು. ಎಲ್ಲ ಕಡೆ ಹುಡುಕಿದರೂ ಸಿಗಲಿಲ್ಲ.ಇದರಿಂದ ಆತಂಕಗೊಂಡ ಪ್ರಕಾಶ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಗುರುವಾರ ಮಧ್ಯಾಹ್ನ ಅವರ ಗದ್ದೆಯಂಚಿನ ಕೆರೆಯಲ್ಲಿ ಕವಿತಾಳ ಶವ ಕಂಡು ಬಂದಿತು. ಆದರೆ ಮಕ್ಕಳ ಕುರುಹು ಕಾಣಿಸಲಿಲ್ಲ. ಗ್ರಾಮಸ್ಥರು ಕೆರೆಯ ನೀರನ್ನು ಖಾಲಿ ಮಾಡಿ ನೋಡಿದಾಗ ಸಂಜೆ ವೇಳೆಗೆ ಮಕ್ಕಳಿಬ್ಬರ ಶವವೂ ಪತ್ತೆಯಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry