ಮಂಗಳವಾರ, ಜೂನ್ 22, 2021
24 °C

ಇಬ್ಬರು ಮಹಿಳೆಯರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕುಮಾರಸ್ವಾಮಿ ಲೇಔಟ್ ಮತ್ತು ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕುಮಾರಸ್ವಾಮಿ ಲೇಔಟ್ ಎರಡನೇ ಹಂತದ 12ನೇ ಅಡ್ಡರಸ್ತೆ ನಿವಾಸಿ ಉಮಾಶಂಕರ್ ಎಂಬುವರ ಪತ್ನಿ ಸಿಂಧುಮತಿ (22) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ವಿವಾಹವಾಗಿ ನಾಲ್ಕೂವರೆ ವರ್ಷವಾಗಿತ್ತು ಮತ್ತು ಅವರಿಗೆ ಒಂದು ವರ್ಷದ ಗಂಡು ಮಗುವಿದೆ.ಉಮಾಶಂಕರ್ ವ್ಯಾಪಾರಿಯಾಗಿದ್ದಾರೆ. ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಸಿಂಧುಮತಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.`ಮಗಳು ಮತ್ತು ಅಳಿಯ ಅನ್ಯೋನ್ಯವಾಗಿದ್ದರು. ಆಕೆ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಗೊತ್ತಿಲ್ಲ~ ಎಂದು ಸಿಂಧುಮತಿ ತಂದೆ ಕೃಷ್ಣೇಗೌಡ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕುಮಾರಸ್ವಾಮಿಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಜೆ.ಪಿ.ನಗರ ಸಮೀಪದ ಚಿಕ್ಕಸ್ವಾಮಿಲೇಔಟ್ ಮೂರನೇ ಮುಖ್ಯರಸ್ತೆ ನಿವಾಸಿ ವೆಂಕಟೇಶ್ ಎಂಬುವರ ಪತ್ನಿ ಸುಮಾ (20) ಅವರು ವರದಕ್ಷಿಣೆ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2011ರ ಫೆಬ್ರುವರಿಯಲ್ಲಿ ಸುಮಾ ಅವರ ವಿವಾಹವಾಗಿತ್ತು. ವೆಂಕಟೇಶ್ ಖಾಸಗಿ ಕಾಲೇಜು ಒಂದರಲ್ಲಿ ಉದ್ಯಾನ ನಿರ್ವಹಣೆಯ ಕೆಲಸ ಮಾಡುತ್ತಾರೆ. ಪತಿ ಮತ್ತು ಅತ್ತೆ ಮುನಿಲಕ್ಷ್ಮಮ್ಮ ಅವರು ಹೊರಗೆ ಹೋಗಿದ್ದಾಗ ಸುಮಾ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಜೆ.ಪಿ.ನಗರ ಪೊಲೀಸರು ತಿಳಿಸಿದ್ದಾರೆ.`ವೆಂಕಟೇಶ್, ಆತನ ತಾಯಿ ಮುನಿಲಕ್ಷ್ಮಮ್ಮ, ಸಹೋದರ ರಾಜೇಶ್ ಮತ್ತು ಸಹೋದರಿ ಶಾಂತಾ ಅವರು ವರದಕ್ಷಿಣೆ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರಗೊಂಡು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಸಾವಿಗೆ ಅಳಿಯ ಮತ್ತು ಆತನ ಕುಟುಂಬ ಸದಸ್ಯರೇ ಕಾರಣ~ ಎಂದು ಸುಮಾ ತಾಯಿ ಜಯಮ್ಮ ದೂರು ಕೊಟ್ಟಿದ್ದಾರೆ.ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.