ಇಬ್ಬರು ಯುವಕರ ಬರ್ಬರ ಹತ್ಯೆ

7

ಇಬ್ಬರು ಯುವಕರ ಬರ್ಬರ ಹತ್ಯೆ

Published:
Updated:
ಇಬ್ಬರು ಯುವಕರ ಬರ್ಬರ ಹತ್ಯೆ

ನೆಲಮಂಗಲ: ಇಲ್ಲಿಗೆ ಸಮೀಪದ ಮಾದ­ನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿ ಮಾಚೋಹಳ್ಳಿಯಲ್ಲಿ ಇಬ್ಬರು ಯುವಕ­ರನ್ನು ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಶನಿವಾರ ಮುಂಜಾನೆ ನಡೆದಿದೆ.ಕೊಲೆಯಾದವರನ್ನು   ಗಾಯತ್ರಿ ನಗರದ ಆಟೊ ಚಾಲಕ­ ಉಮೇಶ್‌ ಬಾಬು(35), ಲಗ್ಗೆರೆ ನಿವಾಸಿ ಮಂಜು­ನಾಥ್‌(34) ಎಂದು ಗುರು­ತಿಸಲಾಗಿದೆ. ಹಳೆ ವೈಷಮ್ಯ ಹಾಗೂ ಹಣಕಾಸು ವಿವಾದವೇ ಕೊಲೆಗೆ ಕಾರಣವಿರಬ­ಹುದು ಎಂದು ಪೊಲೀಸರು ಶಂಕಿಸಿ­ದ್ದಾರೆ. ಆದರೆ, ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಮಾಚೋಹಳ್ಳಿಯ ಟಕ್ಕರ್‌ಬಾಬಾ ಸಂಸ್ಥೆಯ(ಮಾಗಡಿ ರಸ್ತೆ) ಬಳಿ ಹಿಂಭಾಗ ಇವರಿಬ್ಬರ ಶವ ಪತ್ತೆಯಾಗಿದೆ.ಶುಕ್ರವಾರ ರಾತ್ರಿ ಉಮೇಶ್‌ ಮತ್ತು ಮಂಜುನಾಥ್‌ ಇತರೆ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೆ, ಮುಂಜಾನೆ ಅವರಿ­ಬ್ಬರು ಶವವಾಗಿ ಪತ್ತೆಯಾಗಿದ್ದಾರೆ.ರಾತ್ರಿ ಮದ್ಯದ ನಶೆಯಲ್ಲಿದ್ದಾಗ ಸ್ನೇಹಿತರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು ಚಾಕುವಿನಿಂದ ಇರಿದು ಗುರುತು ಸಿಗಬಾರದೆಂದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರಬಹುದು. ಸ್ನೇಹಿ­ತರು ಅಥವಾ ಪರಿಚಿತರು ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಕೊಲೆಯಾದವರ ಮೇಲೆ ಕಾಮಾಕ್ಷಿ­ಪಾಳ್ಯ ಮತ್ತು ರಾಜಗೋಪಾಲನಗರ ಪೊಲೀಸ್‌ ಠಾಣೆಯಲ್ಲಿ ಹಲವು ಪ್ರಕರಣ­ಗಳು ದಾಖಲಾಗಿವೆ. ಘಟನಾ ಸ್ಥಳಕ್ಕೆ ಐಜಿಪಿ ಅಮರ್‌ಕುಮಾರ್ ಪಾಂಡೆ, ಎಸ್ಪಿ ರಮೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry