ಮಂಗಳವಾರ, ಜೂನ್ 22, 2021
28 °C

ಇಬ್ಬರು ವಿದ್ಯಾರ್ಥಿಗಳು ನಿಗೂಢ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್‌ (ಪಿಟಿಐ): ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತದ ವಿದ್ಯಾರ್ಥಿ­ಗಳಿಬ್ಬರು ನಿಗೂಢವಾಗಿ ಕಣ್ಮರೆ­ಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ.

ಕೆಲವು ದಿನಗಳ ಹಿಂದೆ ಒಬ್ಬ ವಿದ್ಯಾರ್ಥಿ ಫ್ಲಾರಿಡಾದ ಪನಾಮಾ ಕಡಲ ಕಿನಾರೆಯಿಂದ ಹಾಗೂ ಮತ್ತೊಬ್ಬ ನರ್ಸಿಂಗ್‌ ವಿದ್ಯಾರ್ಥಿನಿ ನ್ಯೂಯಾರ್ಕ್‌ನಿಂದ ಕಣ್ಮರೆ ಆ­ಗಿದ್ದು, ಶೋಧ ಕಾರ್ಯಚರಣೆ ಮುಂದುವರಿದಿದೆ.ಗೆಳೆಯರ ಜೊತೆ ರಜೆ ಕಳೆಯಲು ಪನಾಮಾ ಕಡಲ ಕಿನಾರೆಗೆ ತೆರಳಿದ್ದ ರೈಸ್‌ ವಿಶ್ವವಿದ್ಯಾಲಯದ ಮೆಕ್ಯಾನಿ ಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ರೆನಿಜೋಸ್‌ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾನೆ.ಸಂಜೆ ವಾಯು ವಿಹಾರಕ್ಕೆ ತೆರಳಿದ್ದ ಜೋಸ್‌ ಮತ್ತೆ ಮರಳಿ ಬಂದಿಲ್ಲ ಎಂದು ಆತನ ಮಿತ್ರರು ಪೊಲೀಸರಿಗೆ ತಿಳಿಸಿ­ದ್ದಾರೆ. ಆತ ತಂಗಿದ್ದ ಮನೆಯ ಬಳಿಯ ಕಸದ ತೊಟ್ಟಿಯಲ್ಲಿ ಆತನ ಮೊಬೈಲ್‌ ಹಾಗೂ ಇತರ ವಸ್ತುಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ನಡುವೆ ಕಳೆದ ತಿಂಗಳು  ನ್ಯೂಯಾರ್ಕ್‌­ನಿಂದ ನಾಪತ್ತೆಯಾದ  ಕೇರಳ ಮೂಲದ 22 ವರ್ಷದ  ನರ್ಸಿಂಗ್‌ ವಿದ್ಯಾರ್ಥಿನಿ  ಜಾಸ್ಮಿನ್‌ ಜೋಸೆಫ್‌ ಇನ್ನೂ ಪತ್ತೆಯಾಗಿಲ್ಲ.ನ್ಯೂಯಾರ್ಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿದ್ಯಾರ್ಥಿನಿಯಾಗಿ­ರುವ ಜಾಸ್ಮಿನ್‌ ಕಾಲೇಜಿಗೆ ಹೋದವಳು ಮತ್ತೆ ತಿರುಗಿ ಮನೆಗೆ ಬಂದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.ಆಕೆ ತಮ್ಮ ಕಾಲೇಜು ವಿದ್ಯಾರ್ಥಿ­ನಿಯೇ ಅಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿರುವುದು ಅನೇಕ ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತದ ಮತ್ತೊಬ್ಬ ವಿದ್ಯಾರ್ಥಿ ಪ್ರವೀಣ್‌ ವರ್ಗಿಸ್‌ ಹೆಣವಾಗಿ ಪತ್ತೆ­ಯಾ­ಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.