ಇಬ್ಬರು ಶಂಕಿತ ಉಗ್ರರ ಬಂಧನ

7

ಇಬ್ಬರು ಶಂಕಿತ ಉಗ್ರರ ಬಂಧನ

Published:
Updated:

ಇಂಫಾಲ (ಪಿಟಿಐ): ಪಶ್ಚಿಮ ಇಂಫಾಲ ಹಾಗೂ ಮಣಿಪುರದ ಥೌಬಾಲ್ ಜಿಲ್ಲೆಯಲ್ಲಿ ಕಾರ್‌ನಲ್ಲಿ ಬಾಂಬ್ ಇರಿಸಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಪೊಲೀಸರು ಎರಡು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿ ಸ್ಫೋಟಿಸಲು ಸಂಚು ರೂಪಿಸಿದ್ದ ಇಬ್ಬರನ್ನು ಹಾಗೂ ಬಾಂಬ್ ಇರಿಸಿದ್ದ ಕಾರನ್ನು ವಶಪಡಿಸಿಕೊಳ್ಳುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತರಿಂದ ಸುಧಾರಿತ ಸ್ಫೋಟಕ ಮತ್ತು 12 ಸ್ಫೋಟಿಸುವುದಕ್ಕೆ ಬಳಸುವ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry