ಶುಕ್ರವಾರ, ನವೆಂಬರ್ 15, 2019
20 °C

ಇಬ್ಬರು ಶಾಸಕರ ರಾಜೀನಾಮೆ ಅಂಗೀಕಾರ

Published:
Updated:

ಬೆಂಗಳೂರು: ಮೈಸೂರಿನ ಚಾಮರಾಜ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿಯ ಎಚ್.ಎಸ್.ಶಂಕರಲಿಂಗೇಗೌಡ ಮತ್ತು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜೆಡಿಎಸ್‌ನ ಕಲ್ಪನಾ ಸಿದ್ದರಾಜು ಅವರು ವಿಧಾನಸಭಾ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಬುಧವಾರ ಅಂಗೀಕರಿಸಿದರು.ಗೌಡರು ತಿಂಗಳ ಹಿಂದೆ ಹಾಗೂ ಕಲ್ಪನಾ ಅವರು ಮಂಗಳವಾರ ರಾಜೀನಾಮೆ ನೀಡಿದ್ದರು. ಗೌಡರು ಜೆಡಿಎಸ್ ಹಾಗೂ ಕಲ್ಪನಾ ಅವರು ಕಾಂಗ್ರೆಸ್ ಸೇರಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಈ ಇಬ್ಬರೂ ಮಾತೃ ಪಕ್ಷದ ವಿರುದ್ಧವೇ ಸೆಣಸಲಿದ್ದಾರೆ ಎಂದು ಗೊತ್ತಾಗಿದೆ.

ಪ್ರತಿಕ್ರಿಯಿಸಿ (+)